
ಮೈಸೂರು; ಅಭಿನಯ ಚಕ್ರವರ್ತಿ ಕಿಚ್ಚ ಚಿತ್ರ ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬುಧವಾರ ಮೈಸೂರಿನ ಕೆ ಆರ್ ವೃತ್ತದಲ್ಲಿ ಸುದೀಪ್ ಅಭಿಮಾನಿಗಳ ವತಿಯಿಂದ ಹುಟ್ಟುಹಬ್ಬವನ್ನು ಮಾಜಿ ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಸಿಹಿ ಹಾಗೂ ಬಾಳೆ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಸುದೀಪ್ ಅಭಿಮಾನಿಗಳಾದ ಕೃಷ್ಣ,ವಸಂತ,ಶೇಖರ್,ಕುಮಾರ ರಂಗಸ್ವಾಮಿ, ಸೇರಿದಂತೆ ಮತ್ತಿತರರು ಹಾಜರಿದ್ದರು.