
ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ (77) ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಅವರು ಪತ್ನಿ ಡಾ.ಅನಸೂಯಾ ಗೋಪಾಲ್, ಪುತ್ರಿ ಮಾಲಾ, ಅಳಿಯ ಭವಾನಿಶಂಕರ್, ಮೊಮ್ಮಗಳು ಆದ್ಯಾ ಸ್ಭೆರಿದಂತೆ ಅಪಾರ ಬಂಧು, ಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನವರಾದ ಮಡ್ಡಿಕೆರೆಯ ಗೋಪಾಲ್ ಅವರು, ಬಿ.ಎ., ಎಲ್ಎಲ್ಬಿ ಜೊತೆಗೆ ಪ್ರಿಂಟಿAಗ್ಟೆಕ್ನಾಲಜಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದಿದ್ದರು. ಕೆಲಕಾಲ ವಕೀಲ ವೃತ್ತಿಯನ್ನು ಮಾಡಿಅನಂತರ ಸಾಹಿತ್ಯಕ, ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೈಸೂರಿನಲ್ಲಿ ಕಾನೂನು ಪದವಿ ಪಡೆದು, ಇಲ್ಲಿಯೇ ನೆಲಸಿದ್ದರು. ಪ್ರಿಂಟಿAಗ್ ಟೆಕ್ನಾಲಜಿ ಹಾಗೂ ಪತ್ರಿಕೋದ್ಯಮದ ಅಧ್ಯಯನವನ್ನೂ ಮಾಡಿದ್ದ ಅವರು ಪತ್ರಿಕೆಯೊಂದನ್ನು ಹೊರತರುವ ಉದ್ದೇಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಾಹಿತಿಯಾಗಿ ಗುರುತಿಸಿಕೊಳ್ಳದಿದ್ದರೂ ಸಾಹಿತಿಗಳ ಒಡನಾಟದ ಕಾರಣದಿಂದ ಗಮನಸೆಳೆದಿದ್ದರು.
2008ರಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2008-2011ರವರೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಬಹುಮುಖವಾಗಿ ವಿಸ್ತರಿಸಿದರು. 2011ರವರೆಗೆ ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದAತೆ ಹಲವು ಕಾರ್ಯಕ್ರಮಗಳನ್ನು ಮಾಡಿದ್ದರು. ಹೋಬಳಿ ಮಟ್ಟಕ್ಕೆ ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತರಿಸಿದ ಹೆಗ್ಗಳಿಕೆ ಅವರದು. ಈಗ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಗೋಕಾಕ್ ಚಳವಳಿ, ಕಾವೇರಿ ಚಳವಳಿ, ರೈಲ್ವೆಯಲ್ಲಿಕನ್ನಡ ಬಳಕೆ ಚಳವಳಿ ಸೇರಿದಂತೆ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.
ಕವಿಗಳ ಮನೆಯಂಗಳದಲ್ಲಿ ಪ್ರವಾಸ ಕವಿಗೋಷ್ಠಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದರು.
ಪಿರಿಯಾಪಟ್ಟಣದಲ್ಲಿ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ, ಉದಯೋನ್ಮುಖ ಲೇಖಕರ ಹತ್ತು ಕೃತಿಗಳನ್ನು ಪರಿಷತ್ತಿನಿಂದಲೇ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದರು. ಈ ಕಾರಣದಿಂದ ಅವರನ್ನು, ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
ವಿಜಯನಗರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದಲ್ಲಿ ಅವರ ಪಾತ್ರ ದೊಡ್ಡದಿದೆ. ಕನ್ನಡ ಸಾಹಿತ್ಯ, ಸಾಂಸ್ಕöÈತಿಕ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳವರಿಗೆ ಉಚಿತವಾಗಿ ಸಭಾಂಗಣವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಕನ್ನಡಪರ ಹಾಗೂ ಜನಪರ ಚಳವಳಿಗಳಲ್ಲೂ ಗುರುತಿಸಿಕೊಂಡಿದ್ದರು. ಬಹುಭಾಷಾ ಕವಿಗೋಷ್ಠಿ ಆಯೋಜಿಸಿ ಗಮನಸೆಳೆದಿದ್ದರು. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದರು. ವಿವಿಧ ಸಂಘ ಸಂಸ್ಥೆಗಳ ಜೊತೆಗೂ ಗುರುತಿಸಿಕೊಂಡಿದ್ದರು. ಒಳ್ಳೆಯ ವಾಗ್ಮಿಗಳಾಗಿದ್ದರು.
ಅವರ ಬಹುಮುಖ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾಡಳಿತವು “ಅತ್ಯುತ್ತಮ ಆಡಳಿತಗಾರ”, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿತ್ತು. ಅದಲ್ಲದೆ, ಹೊಯ್ಸಳಶ್ರೀ ಪ್ರಶಸ್ತಿ, ವಿಶ್ವಮಾನವ ಸೇವಾ ಪ್ರಶಸ್ತಿ ಮೊದಲ ಹಲವಾರು ಪುರಸ್ಕಾರಗಳು ಅವರಿಗೆ ಲಭಿಸಿದ್ದವು. ಕರ್ನಾಟಕ ಸರ್ಕಾರದಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ-2024ರ ವಿಶೇಷ ಪ್ರಶಸ್ತಿಯೂ ಅವರಿಗೆದೊರೆತಿತ್ತು. ಇತ್ತೀಚೆಗೆಜುಲೈ 19ರಂದು ಮೈಸೂರುಕಲಾಮಂದಿರದಲ್ಲಿ ವೈಭವವಾಗಿ ನಡೆದಅಭಿನಂದನಾ ಸಮಾರಂಭದದಲ್ಲಿಅವರಕುರಿತ ಮಡ್ಡೀಕೆರೆ ಮಾಣಿಕ್ಯ, ಹೃದಯವಂತ, ಸ್ನೇಹಶೀಲ, ಕಥಾಗುಚ್ಚ ಈ ಕೃತಿಗಳು ಲೋಕಾರ್ಪಣೆಯಾದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನಸ್ತೋಮ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಮಡ್ಡಿಕೆರೆ ಗೋಪಾಲ್ ಅವರ ಪಾರ್ಥಿವ ಶರೀರವನ್ನು ಉದಯಗಿರಿಯ ಅಂಚೆ ಕಚೇರಿ ಸಮೀಪವಿರುವ (ಪಿ.ಎಫ್. ಆಫೀಸ್ ರಸ್ತೆ) ಅವರ ನಿವಾಸದಲ್ಲಿ ಮಧ್ಯಾಹ್ನ 1-30ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಮಧ್ಯಾಹ್ನ 2ರಿಂದ ವಿಜಯನಗರ ಮೊದಲ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಭವನಕ್ಕೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕ ಹರೀಶ್ಗೌಡ, ವಂಗೀಪುರ ವ್ಮಠದ ಇಳೈ ಆಳ್ವಾರ್ ಸ್ವಾಮಿ, ಹಿರಿಯ ಸಾಹಿತಿ ಸಿಪಿಕೆ ಸ್ಭೆರಿದಂತೆ ಅನೇಕ ಗಣ್ಯರುಗಳು ಮೃತರ ಅಂತಿಮ ದರ್ಶನವನ್ನು ಪಡೆದರು. ಸಂಜೆ ಚಾಮುಂಡಿಬೆಟ್ಟದ ಪಾದದ ಸಮೀಪದ ಸ್ಮಶಾನದಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಸಲಾಯಿತು.
ಸುತ್ತೂರು ಶ್ರೀ ಸಂತಾಪ; ಮಡ್ಡಿಕೆರೆ ಗೋಪಾಲ್ ನಿಧನಕ್ಕೆ ಸುತ್ತೂರು ವ್ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ, ಬಿಜೆಪಿ ಮೈಸೂರು ವಿಭಾಗ ಸಹ ಪ್ರಭಾರಿ ಈ.ಸಿ.ನಿಂಗರಾಜ್ಗೌಡ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸೇರಿದಂತೆ ಅನೇಕರ ಸಂತಾಪ ವ್ಯಕ್ತಪಡಿಸಿದ್ದಾರೆ.