Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ; ಕುಲಪತಿ ಪ್ರೊ ಎಂಆರ್ ಗಂಗಾಧರ್

ಚಾಮರಾಜನಗರ ;  ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನುರಿತ ದೈಹಿಕ ನಿರ್ದೇಶಕರ ಮಾರ್ಗದರ್ಶನದಿಂದ ಚಾ,ವಿ.ವಿ ವಿದ್ಯಾರ್ಥಿಗಳು ರಾಜ್ಯ ಅಂತ ರಾಜ್ಯ ರಾಷ್ಟ್ರಮಟ್ಟದಲ್ಲಿ(ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ) ಭಾಗವಹಿಸಿ ಹಲವಾರು ಬಹುಮಾನಗಳಿಸಿದ್ದಾರೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ ಎಂ ಗಂಗಾಧರ್ ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಸುವರ್ಣ ಗಂಗೋತ್ರಿ ಸಭಾಂಗಣದಲ್ಲಿ 2026, 27ನೇ ಸಾಲಿನ ಶೈಕ್ಷಣಿಕ ಸಾಲಿನ ಕ್ರೀಡಾ ಸಲಹೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದವರು ಗಡಿ ಜಿಲ್ಲೆ  ಪ್ರತಿಭಾವಂತ ಕ್ರೀಡಾಪಟುಗಳು 2025 26ನೇ ಸಾಲಿನಲ್ಲಿ . ಗುಡ್ಡೆಗಾಡು ಓಟ. ಕಬ್ಬಡಿ, ಖೋ-ಖೋ, ವಾಲಿಬಾಲ್. ಬಾಲ್ ಬ್ಯಾಡ್ಮಿಂಟನ್ ಶಟಲ್ ಬ್ಯಾಟ್ಮೆಂಟಲ್ ಮತ್ತು ಅಥ್ಲೆಟಿಕ್ಸ್  ಸೇರಿದಂತೆ ಇನ್ನಿತರ ಆಟಗಳಲ್ಲಿ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ ಎಂದು ತಿಳಿಸಿದರು

2026 27 ನೇ ಸಾಲಿನ ಕ್ರೀಡಾಕೂಟದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕ್ರೀಡಾಂಗಣದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಮತ್ತು ಕ್ರೀಡಾಂಗಣಕ್ಕೆ ನೀರಿನ ವ್ಯವಸ್ಥೆ ಹಾಗೂ ಕ್ರೀಡಾಂಗಣದ ಸುತ್ತ ಗಿಡಗಳನ್ನು ನಡೆಸಲಾಗುವುದು ಮತ್ತು 2026 27ನೇ ಶೈಕ್ಷಣಿಕ ಸಾಲಿನಲ್ಲಿ ಆರ್ಚರಿ ಮತ್ತು ವೇಟ್ ಲಿಫ್ಟಿಂಗ್ ಕ್ರೀಡೆಯನ್ನು ಸೇರಿಸಲಾಗುತ್ತದೆ ಇದರ ಉಪಯೋಗ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಮತ್ತು ಆಯ್ಕೆ ಸಮಿತಿಯ ಎಲ್ಲಾ ಸದಸ್ಯರುಗಳು ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ವಿಶ್ವವಿದ್ಯಾಲಯದ ಪರವಾಗಿ ಭಾಗವಹಿಸಲು ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು 2026 27ನೇ ಶೈಕ್ಷಣಿಕ ಸಾಲಿನಲ್ಲಿ  ಚಾಮರಾಜನಗರ ವಿಶ್ವವಿದ್ಯಾಲಯ ಅಂತರ್ ಕಾಲೇಜು ಕ್ರೀಡಾಕೂಟವನ್ನು ವಿವಿಧ ಕಾಲೇಜು ಆ ಯೋಜನೆ ಮಾಡಬೇಕೆಂದು ಸಲಹೆ ನೀಡಿದರು  ಹಾಗೂ ಕ್ರೀಡಾಪಟುಗಳಿಗೆ ಅವಶ್ಯಕತೆ ಇರುವ ಕ್ರೀಡಾ ಉಪಕರಣಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು ಕ್ರೀಡಾಪಟುಗಳು ನಿರಂತರ ಕಠಿಣ ಅಭ್ಯಾಸದಿಂದ ರಾಜ್ಯ  ಅಂತರರಾಜ್ಯ ರಾಷ್ಟ್ರೀಯ ರಾಷ್ಟ್ರೀಯ ಕ್ರೀಡಾಕೂಟಲ್ಲಿ ಭಾಗವಹಿಸಲು ಸಹಕಾರಿ ಆಗುತ್ತದೆ  ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಗೆ ವಿದ್ಯಾರ್ಥಿಗಳು ಆಸಕ್ತಿ ನೀಡಬೇಕು ಎಂದು ಸಲಹೆ ನೀಡಿದರು

ಚಾಮರಾಜನಗರ ವಿಶ್ವವಿದ್ಯಾಲಯ ಕುಲಸಚಿವರು ಪ್ರೊ ಕೆ.ಎಂ ಮಹಾದೇವನ್. ಮಾತನಾಡಿ ವಿವಿ ವಿದ್ಯಾರ್ಥಿಗಳು ರಾಜ್ಯದಲ್ಲಿ ಉತ್ತಮ ಸಾಧನೆ ಗಳಿಸಿದ್ದಾರೆ ಇವರಗೆಲ್ಲ ಕಠಿಣ ಕ್ರೀಡಾ ಮಾರ್ಗದರ್ಶನ ನೀಡಿದ್ದು ದೈಹಿಕ ನಿರ್ದೇಶಕ ಡಾ ಶಾಂತರಾಜು ಎಂದು ತಿಳಿಸಿದರು.

ಇದರ ಜೊತೆ ವಿವಿಯಲ್ಲಿ ಸಂಶೋಧನೆ ಮತ್ತು ಪಿ ಎಚ್ ಡಿ ಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ ಶಾಂತರಾಜ್ ಮಾತನಾಡಿ 2026, 27 ನೇ ಸಾಲಿನಲ್ಲಿ 130 ಹೆಚ್ಚಿನ ಕ್ರೀಡಾಪಟುಗಳು ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ  ಭಾಗವಹಿಸಲಿದ್ದಾರೆ ಎಂದು ತಿಳಿಸಿದರು ಹಾಗೂ ಅವರಿಗೆ ವಿಶೇಷ ಕ್ರೀಡಾಭಿರಗಳನ್ನು ನಡೆಸಿ ಕ್ರೀಡಾಕೂಟಕ್ಕೆ ಕಳಿಸಿಕೊಡಲಾಗುವುದು ಇದಕ್ಕೆಲ್ಲ ಮೂಲ ಕಾರಣ  ಮತ್ತು  ಸ್ಪೂರ್ತಿ  ಮಾನ್ಯ ಕುಲಪತಿಗಳು ಹಾಗೂ ಕುಲ ಸಚಿವರು ಎಂದು ತಿಳಿಸಿದರು   ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ  ಕ್ರೀಡಾಕೂಟದಲ್ಲಿ  ಸಾಧನೆ ಮಾಡುತ್ತಿದ್ದಾರೆ. ಕಬಡ್ಡಿ. ಕೊಕ್ಕೋ. ವಾಲಿಬಾಲ್. ಬಾ ಬೈ ಬೆನ್ತನ್ ಬ್ಯಾಡ್ಮಿಂಟನ್ ಮತ್ತು ಅಥೆಟಿಕ್  ಓಟದಲ್ಲಿ ಭಾಗವಹಿಸಲು ನಮ್ಮ ವಿವಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಅಭ್ಯಾಸದಲ್ಲಿ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಪ್ರತಿಭೆ ತೋರಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು

26 27 ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಆಯಾ ವ್ಯಯದ ವೆಚ್ಚದ ಈ ಬಾರಿ 17 ಲಕ್ಷದ 45,000. ಸಾವಿರ ರೂಪಾಯಿ ಲಭ್ಯವಿದೆ ಎಂದು ಸಭೆಗೆ ತಿಳಿಸಿದರು ಇಡೀ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ವಿಶೇಷವಾಗಿ ಗಡಿ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಪಟ್ಟುಗಳು ಇದ್ದಾರೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ನಿವೃತ್ತ ನಿರ್ದೇಶಕರಾದ ಡಾ. ಕೃಷ್ಣಯ್ಯ ಪಿ. ಕೊಳ್ಳೇಗಾಲ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜಯಶಂಕರ್. ಕ್ರೀಡಾ ಸಲಹೆ ಸಮಿತಿ ಸದಸ್ಯರಾದ ಜಿ ಬಂಗಾರು. ಚಾ,ರ ಶ್ರೀನಿವಾಸ ಗೌಡ, ಮಾತನಾಡಿದರು ಚಾಮರಾಜನಗರ ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಉಮೇಶ್. ಕ್ರೀಡಾಪಟು ಕಾರ್ತಿಕ್ ನಾಯಕ್ ಸಿ.ಜಿ. ಇತರರು ಹಾಜರಿದ್ದರು