Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೀವನದ ಸಾರ್ಥಕತೆಗೆ ಶ್ರೀ ಕೃಷ್ಣನ ತತ್ವ ಸಂದೇಶಗಳು ದಾರಿದೀಪ : ಯಾದವ ಸಂಘದ ಅಧ್ಯಕ ಪಿ.ಡಿ ಪ್ರಸನ್ನ

ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ

13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಪಿರಿಯಾಪಟ್ಟಣ: ಮನುಷ್ಯನ ಜೀವನದ ಸಾರ್ಥಕತೆ ಹಾಗೂ ಧರ್ಮ ಮಾರ್ಗದಲ್ಲಿ ನಡೆಯಲು ಶ್ರೀ ಕೃಷ್ಣನ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಪಿ.ಡಿ ಪ್ರಸನ್ನ ತಿಳಿಸಿದರು. 

ಪಟ್ಟಣ ಚನ್ನಪಟ್ಟಣದ ಬೀದಿಯ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಶ್ರೀಕೃಷ್ಣ ಯಾದವ(ಗೊಲ್ಲ ) ಸಂಘ ಇವರ ವತಿಯಿಂದ ಆಯೋಜಿಸಲಾಗಿದ್ದ 13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದುಷ್ಟ ಶಕ್ತಿಗಳು ಹೆಚ್ಚಾದಾಗ ಅದನ್ನು ನಿಯಂತ್ರಣ ಮಾಡಲು ಯುದ್ಧ ಮಾಡಲೇಬೇಕು ಎಂದು ಶ್ರೀ ಕೃಷ್ಣ ಮಹಾಭಾರತದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ ಕೌರವರ ಪಾಲಿಗೆ ವಿರೋಧಿಯಾಗಿ ಕಂಡರೂ ಧರ್ಮದ ಉಳಿವಿಗಾಗಿ ಪಾಂಡವರ ಪಾಲಿಗೆ ಧರ್ಮ ಪರಿಪಾಲಕನಾಗಿ ನಿಲ್ಲುತ್ತಾನೆ ಹಾಗಾಗಿ ಕೃಷ್ಣನ ಸಂದೇಶಗಳು ಇಡೀ ಜಗತ್ತಿಗೆ ಜೀವನದ ಪಾಠವಾಗಿ ಧರ್ಮದ ಹಾದಿಯಲ್ಲಿ ನಡೆಯುವವರಿಗೆ ವರವಾಗಿಯೂ ಅಧರ್ಮದ ಹಾದಿಯಲ್ಲಿ ನೆಡೆಯುವವರಿಗೆ ಶಾಪವಾಗಿ ಪರಿಣಮಿಸಿವೆ. ಶ್ರೀ ಕೃಷ್ಣನ ಸಂದೇಶಗಳು ಸಮಾಜ ತಪ್ಪುಗಳನ್ನು ತಿದ್ದುವ ಸತ್ಯದ ಪಥದಲ್ಲಿ ಸಾಗುವ ದಾರಿದೀಪವಾಗಿವೆ. ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿರುವ ಸಮುದಾಯವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲರೂ ಉನ್ನತ ವ್ಯಾಸಂಗದತ್ತ ಗಮನ ಹರಿಸಬೇಕು. ನಮ್ಮ ಸಂಘವು ಕಳೆದ 13 ವರ್ಷಗಳಿಂದ ಸಮುದಾಯವನ್ನು ಸಂಘಟಿಸುವ ಮೂಲಕ ಎಲ್ಲರಲ್ಲೂ ಒಂದೇ ಎಂಬ ಭಾವನೆ ಮೂಡಿಸುವಂತಹ ಹೆಜ್ಜೆ ಹಾಕುತ್ತಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು 

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 585 ಅಂಕ ಗಳಿಸಿದ  ಅಮೂಲ್ಯ.ಕೆ ಎಂಬ ವಿದ್ಯಾರ್ಥಿಯನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು 

ಈ ಸಂದರ್ಭದಲ್ಲಿ ತಾಲೂಕು ಶ್ರೀಕೃಷ್ಣ ಯಾದವ (ಗೊಲ್ಲ) ಸಂಘದ ಗೌರವಾಧ್ಯಕ್ಷ ಪಿ.ಕೆ.ವೆಂಕಟೇಶ್, ಉಪಾಧ್ಯಕ್ಷ ಸತ್ಯನಾರಾಯಣ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್.ಕೆ ಪದಾಧಿಕಾರಿಗಳಾದ ತೇಜಸ್, ಎ.ಪಿ.ಮಂಜುನಾಥ್, ಸುಬ್ರಮಣಿ, ಸದಸ್ಯರಾದ ಕುಮಾರ್, ಹರೀಶ್, ಗುರುರಾಜ್, ದೇವರಾಜ್, ಪವನ್, ಕುಮಾರ್, ವೆಂಕಟೇಶ್.ಪಿ.ಎಂ, ಯೋಗೇಶ್, ಗಣೇಶ್, ಸರ್ವೆ ಮಹೇಂದ್ರ, ಕಿರಣ್, ಮಧು, ರವಿ,ಅರ್ಚಕ ಪದ್ಮ ಚಲುವರಾಜು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.