Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನೀವೇ ಉದ್ಯೋಗ ಸೃಷ್ಟಿ ಮಾಡುವ ಹಾಗೆ ಬೆಳೆಯಿರಿ : ಡಾ ಉತ್ಸವ್ ಅಗರ್ವಾಲ್.

   ನಂಜನಗೂಡು : ಮುಂದುವರೆಯುತ್ತಿರುವ ತಂತ್ರಜ್ಞಾನದ ಹಾವಳಿಯಿಂದ ಸರ್ಕಾರಗಳು ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ ಆದರೆ ನಾವೇ ಇತರರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡುವ ಹಾಗೆ ಬೆಳೆಯ ಬೇಕು ಎಂದು ಭೋರುಕ ಫ್ಯಾಬ್ಕಾನ್ಸ್ ಪ್ರವೇಟ್ ಲಿಮಿಟೆಡ್ ನ ಅಧ್ಯಕ್ಷ ಡಾ ಉತ್ಸವ ಅಗರ್ವಾಲ್ ಹೇಳಿದರು.

   ತಾಲ್ಲೂಕಿನ ತಾಂಡವಪುರದ ಎಂ ಐ ಟಿ ತಾಂತ್ರಿಕ ಮಹಾ ವಿದ್ಯಾನಿಲಯದ ಆವರಣದಲ್ಲಿ ಶನಿವಾರ ಪ್ರಥಮ ವರ್ಷದ ತಾಂತ್ರಿಕ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ ಅರಂಭ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

   ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ ಅದರ ವೇಗಕ್ಕೆ ನಾವು ನಮ್ಮ ಜ್ಞಾನದ ವೇಗವನ್ಬು ಹೆಚ್ಚಿಸಿಕೊಳ್ಳದಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ನಾವು ಮುಂದೆ ಬರಲು ಸಾಧ್ಯವಿಲ್ಲ,ಅರಂಭ ಎನ್ನುವುದು ಎಲ್ಲಾ ಕ್ಷೇತ್ರದಲ್ಲೂ ಇರುತ್ತದೆ. ವಿಜ್ಞಾನಿಗಳಿಗೆ, ವೈದ್ಯರಿಗೆ, ಬಿಸಿನೆಸ್ ಮ್ಯಾನ್ ಗಳಿಗೆ, ಪ್ರತಿದಿನ ಕೂಡ ಹೊಸ ವಿಷಯಗಳನ್ನು ಕಲಿಯುತ್ತಾರೆ. ಅರಂಭ ಪ್ರತಿ ವಿಷಯದಲ್ಲೂ ಇರುತ್ತದೆ ನಿಮಗೆ ಪಾಠ ಮಾಡುವಾಗ ನಿಮ್ಮ ಪ್ರಾಧ್ಯಾಪಕರು ಕೂಡ ಪ್ರತಿ ದಿನವನ್ನು ಆರಂಭ ಮಾಡುವ ಹಾಗೆ. ವಿದ್ಯಾರ್ಥಿಗಳು ಯಾವುದಾದರೂ ಹೊಸತನವನ್ನು ಕಂಡಾಗ ಅದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಅದರ ಕಾರ್ಯ ಅದರ ಉಪಯೋಗ ಮತ್ತು ಅದರಿಂದ ಗಳಿಸಬಹುದಾದ ಲಾಭಗಳನ್ನು ಕೇವಲ 30 ನಿಮಿಷಗಳಲ್ಲಿ ಮಾಹಿತಿ ಪಡೆದುಕೊಂಡರೆ ನಿಮ್ಮ ಮುಂದಿನ ಉದ್ಯಮದಲ್ಲಿಬಳಸಿಕೊಳಬಹುದು‌ ಎಂದರು.

  ನಾವು ಪ್ರತಿ ವಿಚಾರದಲ್ಲೂ ಚೈನಾವನ್ನು ಉದಾಹರಣೆಯಾಗಿ ನೀಡುತ್ತೇವೆ ಆದರೆ ಮುಂದಿನ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಭಾರತ ಚೈನಾವನ್ನು ಹಿಂದಿಕ್ಕಿರುತ್ತದೆ, ನೀವು ಯಾವುದೇ ಉದ್ಯಮ ಶುರು ಮಾಡುವ ಹಂತದಲ್ಲಿ ಆಗಲೇ ನಿಮ್ಮ ಮುಂದೆ ಇಪ್ಪತ್ತು ಕಂಪನಿಗಳು ನಿಮಗೆ ಪೈಪೋಟಿಯಾಗಿ ನಿಂತಿರುತ್ತದೆ ಭಾರತ ಅತಿ ಹೆಚ್ಚು ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವ ದೇಶವಾಗಿದೆ. ವಿದ್ಯಾರ್ಥಿಗಳಿಗೆ ಯಾವಾಗಲೂ ಜ್ಞಾನದ ಮತ್ತು ಕಲಿಕೆಯ ಹಸಿವಿರಬೇಕು ಇವೆರಡು ಇದ್ದಾಗ ಮಾತ್ರ ನಮ್ಮಿಂದ ಕಲಿಯಲು ಸಾಧ್ಯ. ಹಸಿವು ಎನ್ನುವುದು ನಮ್ಮನ್ನು ಕ್ಷಣಮಾತ್ರದಲ್ಲೂ ಪ್ರಜ್ಞ ಹೀನನಾಗಿ ಮಾಡಲು ಸಾಧ್ಯವಿಲ್ಲ. ಸದಾ ನಾವು ಕಾರ್ಯಪ್ರವೃತ್ತ ರನ್ನಾಗಿ ಮಾಡಲು ಹಸಿವು ನಮಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

   ಎಂ ಐ ಟಿ ಕಾಲೇಜಿನ ಟ್ರಸ್ಟಿ ಡಾ. ಡಿ.ಎಸ್. ಗುರು ಮಾತನಾಡಿ ನಮ್ಮ ಕಾಲೇಜಿಗೆ ಯಾವುದೇ ಸೆಲೆಬ್ರಿಟಿಗಳು ಪ್ರಚಾರಕ್ಕೆ ಬೇಕಾಗಿಲ್ಲ ನಮ್ಮ ಕಾಲೇಜಿಗೆ ನಮ್ಮ ಹಿರಿಯ ವಿದ್ಯಾರ್ಥಿಗಳೇ ನಮ್ಮ‌ಪ್ರಚಾರಕರು ಅವರು ಈ ಕಾಲೇಜಿನಲ್ಲಿ ಕಲಿತಂತ ಅನುಭವಗಳನ್ನು ಹೊರ ಪ್ರಪಂಚಕ್ಕೆ ತಿಳಿಸಿದರೆ ಸಾಕು ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ದಾಖಲಾಗುತ್ತಾರೆ.

ಕನಸನ್ನು ಅತಿ ಎತ್ತರದಲ್ಲಿ ಕಾಣಬೇಕು ಕನಸಿನಲ್ಲಿ ಯಾವುದೇ ಜಿಪುಣ ತನ ಇರಬಾರದು, ನಮ್ಮ ಕಾಲೇಜನ್ನು ಒಪ್ಪಿಕೊಳ್ಳಿ ಮತ್ತು ಪ್ರೀತಿಯಿಂದ ಅಪ್ಪಿಕೊಳ್ಳಿ ಎಂದು ಪೋಷಕರಲ್ಲಿ ಮನವಿ ಮಾಡಿದರು.

  ಕಾರ್ಯಕ್ರಮದಲ್ಲಿ ಸ್ವರ್ಣ ಮುಕ್ತಿ ಸಂಸ್ಕೃತ ಧಾಮ ಅಧ್ಯಕ್ಷ ಡಾ .ಎಂ. ನಾಗರಾಜು, ಎಂಐಟಿ ಕಾಲೇಜಿನ ಅಧ್ಯಕ್ಷ ಡಾ. ನಾಗೇಶ್ ಕುಮಾರ್, ಉಪಾಧ್ಯಕ್ಷ ಡಾ. ಜಿ ಹೇಮಂತ್ ಕುಮಾರ್, ಟ್ರಸ್ಟಿ ಡಾ. ಅನಂತ್ ಆರ್ ಕೊಪ್ಪರ್, ಕಾಲೇಜಿನ ಪ್ರಿನ್ಸಿಪಾಲ್ ಡಾ ಮುರುಳಿ ಎಸ್, ಕಾಲೇಜಿನ ಟ್ರಸ್ಟಿ ಡಾ .ವಾಸುದೇವ ,ಪ್ರೊ. ವೈ.ಟಿ.ಕೃಷ್ಣೇಗೌಡ ಜಂಟಿ ನಿರ್ದೇಶಕ ಡಾ. ಚೇತನ್ ಉಪಸ್ಥಿತರಿದ್ದರು..