
ಎಚ್.ಡಿ.ಕೋಟೆ: ಪತ್ರಿಕಾರಂಗವು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದು, ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್. ನಾಗೇಶ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವೂ ಪ್ರಮುಖ ಪಾತ್ರ ವಹಿಸುತ್ತಿದೆ. ಸಮಾಜದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ಬೆಳವಣಿಗೆಗಳನ್ನು ಜನರ ಗಮನಕ್ಕೆ ತಂದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರ ಸೇವೆ ಮಹತ್ವದ್ದಾಗಿದೆ. ಜನರ ಧ್ವನಿಯಾಗಿ, ಶೋಷಿತರು ಮತ್ತು ದುರ್ಬಲ ವರ್ಗಗಳ ಸಮಸ್ಯೆಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪತ್ರಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಮಾಜಿ ಅಧ್ಯಕ್ಷ ಎಂ.ಬಿ.ಮಂಜುನಾಥ್ ಮಾತನಾಡಿ, ತಾಲ್ಲೂಕು ಕೇಂದ್ರದಲ್ಲಿ ಪತ್ರಕರ್ತರ ಸಂಘದ ಕಚೇರಿ ನಿರ್ಮಾಣಕ್ಕೆ ಪುರಸಭೆಯ ವತಿಯಿಂದ ನಿವೇಶನ ಮಂಜೂರಾಗಿರುವುದು ಸಂತಸದ ವಿಚಾರವಾಗಿದೆ. ಮಂಜೂರಾಗಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳು ಹಾಗೂ ಅಗತ್ಯ ಕ್ರಮಗಳ ಬಗ್ಗೆ ಸಂಘದ ಪದಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಪತ್ರಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಪತ್ರಿಕಾ ಭವನದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಾದ ಸಿ.ಆರ್. ಪಾವನಿ, ಎಸ್.ಎನ್. ಪರಿಣತಿ, ಎಸ್. ಸಚಿತ್, ಕವಿರಾಜ್ ಗೌಡ, ಎಸ್.ಪಿ. ಸಮರ್ಥ್ ಹಾಗೂ ಎಚ್.ಡಿ. ಭರತ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಘದ ಮಹಿಳಾ ಸದಸ್ಯೆ ಪತ್ರಕರ್ತೆ ಶ್ರೀಮತಿ ಜಶೀಲ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪತ್ರಕರ್ತರ ಸಂಘ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ನಿಂಗಣ್ಣ ಕೋಟೆ, ಉಪಾಧ್ಯಕ್ಷ ಹಾದನೂರು ದೊಡ್ಡಸಿದ್ದು, ರವಿಕುಮಾರ್ ಆರಾಧ್ಯ, ಖಜಾಂಚಿ ಜಿ. ರವಿಕುಮಾರ್, ಸಹ ಕಾರ್ಯದರ್ಶಿ ನೂರಲಕುಪ್ಪೆ ಪುಟ್ಟರಾಜು, ದಾಸೇಗೌಡ ಸಂಘದ ಹಿರಿಯ ಸದಸ್ಯರಾದ ಸದಸ್ಯರಾದ ಶರವಣನ್, ಪಿ.ಸುರೇಶ್, ಚಿಕ್ಕಣ್ಣೇಗೌಡ, ನಾಗೇಶ್ ವಾಸುಕಿ, ಆನಂದ್, ಹಂಪಾಪುರ ನಾಗೇಶ್, ಶ್ರೀನಿಧಿ, ಹಾದನೂರು ಚಂದ್ರು, ಕನ್ನಡಪ್ರಮೋದ್, ರಘು, ಬೀಚನಹಳ್ಳಿ ಮಂಜು ಹಾಗೂ ಎಚ್.ಬಿ. ಬಸವರಾಜು ಉಪಸ್ಥಿತರಿದ್ದರು.
ಬಾಕ್ಸ್,
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಕಂಡು ಬಂದಿದೆ, ವಸ್ತು ಸ್ಥಿತಿ ಅರಿಯದೆ ಅನಗತ್ಯ ಇಲ್ಲ ಸಲ್ಲದ ಸುದ್ದಿಗಳನ್ನು ಹರಡುವ ಪ್ರವೃತ್ತಿಯ ಜೊತೆಗೆ ಫೇಕ್ & ಫೇಯ್ಡ್ ಸುದ್ದಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ವಸ್ತುನಿಷ್ಠ ಹಾಗೂ ನೈಜ ಸುದ್ದಿಗಳನ್ನು ಕೊಡುವ ಪತ್ರಕರ್ತರಿಗೆ ಹಿನ್ನಡೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಪತ್ರಕರ್ತರು ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯ, ನಿಖರ ಹಾಗೂ ವಸ್ತುನಿಷ್ಠ ಆಧಾರಿತ ಪಾರದರ್ಶಕ ಸುದ್ದಿಗಳಿಗೆ ಆದ್ಯತೆ ನೀಡಿ ವರದಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ಆರ್.ನಾಗೇಶ್. ಅಧ್ಯಕ್ಷರು,
ತಾಲ್ಲೂಕು ವಕೀಲರ ಸಂಘ ಎಚ್.ಡಿ.ಕೋಟೆ
ಫೋಟೋ ;
06 Hdk: 01.02: ಎಚ್.ಡಿ.ಕೋಟೆ ಪಟ್ಟಣದಲ್ಲಿ ಗಿರೀಶ್ ಬಾಬು ಈವೆಂಟ್ ಹಾಲ್ ನಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ನಾಗೇಶ್ ಉದ್ಘಾಟಿಸಿದರು. ಈ ಸಂಧರ್ಭ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಮ, ಪ್ರಧಾನ ಕಾರ್ಯದರ್ಶಿ ಬಿ.ನಿಂಗಣ್ಣಕೋಟೆ ಇದ್ದರು.