Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಗಜಪಡೆಗಳಿಗೆ ಭಾರ ಹೊರುವ ತಾಲಿಮು*ಗಂಡು ಆನೆಗಳಿಗೆ ಹಂತ, ಹಂತವಾಗಿ ತೂಕ ಹೆಚ್ಚಳ


ಮೈಸೂರು; ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ವಿಶ್ವಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಕಾಡಿನ ವಿವಿಧ ಶಿಬಿರಗಳಿಂದ ಅರಮನೆ ನಗರಿ ಮೈಸ್ರರಿಗೆ ಬಂದಿರುವ ಗಜಪಡೆಗೆ ಇದೀಗ ಭಾರ ಹೊರೆಸುವ ತಾಲೀಮು ಆರಂಭಿಸಲಾಗಿದೆ.
ಗಜಪಯಣದ ಮೂಲಕ ಮೈಸೂರಿಗೆ ಬಂದಿರುವ ಮೊದಲ ಹಂತದ ಗಜಪಡೆಗೆ ನಿತ್ಯವೂ ಎರಡು ಹೊತ್ತು ಅರಮನೆಯಿಂದ ಬನ್ನಿಮಂಟಪದ ತನಕ ತಾಲೀಮು ನಡೆಸಲಾಗುತ್ತಿತ್ತು. ನಾಗರೀಕ ಜೀವನಕ್ಕೆ ಆನೆಗಳು ಹೊಂದಿಕೊಳ್ಳುತ್ತಿದ್ದು, ಎಷ್ಟೇ ಜನರು ಎದುರಿಗೆ ಬಂದರೂ, ಹೋದರೂ ನಿಂತಿದ್ದರೂ ಆನೆಗಳು ಕೊಂಚವೂ ಗಲಿಬಿಲಿಗೊಳ್ಳದೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇದೀಗ ಜಂಬೂಸವಾರಿ ಮೆರವಣಿಗೆಗೆ ಗಜಪಡೆಯನ್ನು ತಯಾರಿ ಮಾಡುವ ಎರಡನೇ ಹಂತದ ಕೆಲಸ ಶುರುವಾಗಿದೆ. ಗಂಡು ಆನೆಗಳಿಗೆ ಬೆನ್ನ ಮೇಲೆ ಹಂತ, ಹಂತದ ಭಾರವನ್ನು ಹೊರೆಸಿ ತಾಲೀಮು ನಡೆಸಲಾಗುತ್ತಿದೆ. ಮೊದಲು ೩೫೦ ಕೆ.ಜಿ.ಮರಳಿನ ಚೀಲವನ್ನು ಬೆನ್ನ ಮೇಲೆ ಹೊತ್ತು ಸಾಗುವ ತಾಲೀಮು ಶುರು ಮಾಡಲಾಗಿತ್ತು. ಇದೀಗ ತೂಕವನ್ನು ಹಂತ, ಹಂತವಾಗಿ ಹೆಚ್ಚಿಸಲಾಗುತ್ತಿದ್ದು, ಬರೋ ಬರೀ ೧ ಸಾವಿರ ಕೆ.ಜಿ.ತೂಕವನ್ನು ಬೆನ್ನ ಮೇಲೆ ಹೊತ್ತು ಸಾಗುವ ಟಾಸ್ಕ್ನ್ನು ಗಜಪಡೆಯ ಗಂಡು ಆನೆಗಳು ಪೂರೈಸಬೇಕಾಗಿದೆ. ಆ ಮೂಲಕ ತಮ್ಮ ದೈಹಿಕ, ಮಾನಸಿಕ ಶಕ್ತಿಯನ್ನು ಎಲ್ಲರ ಎದುರು ಸಾಬೀತುಪಡಿಸಬೇಕಾಗಿದೆ. ಇದಕ್ಕಾಗಿ ಒಂದೆಡೆ ಆನೆಗಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಅವುಗಳ ದೈಹಿಕ ಶಕ್ತಿ, ಸಾಮಾರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ, ಅದರೊಂದಿಗೆ ಬೆನ್ನಮೇಲೆ ತೂಕವನ್ನು ಹೊತ್ತು ಸಾಗುವ ತಾಲೀಮು ನಡೆಸಲಾಗುತ್ತಿದೆ.
ಅಂಬಾವಿಲಾಸ ಅರಮನೆಯ ಸೋಮೇಶ್ವರ ದೇವಾಲಯದ ಬಳಿ ಎಲ್ಲ ಆನೆಗಳಿಗೂ ಅರ್ಚಕ ಪ್ರಸಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಗಾದಿ ಮತ್ತು ನಮ್ದಾ ಹಾಗೂ ಮರಳಿನ ಮೂಟೆ ಇಡುವ ತೊಟ್ಟಿಲಿಗೂ ಪೂಜೆ ನೆರವೇರಿಸಲಾಯಿತು.
ನಂತರ ಮಹೇಂದ್ರ ಆನೆಗೆ ಗಾದಿ ಮತ್ತು ನಮ್ದಾ ಕಟ್ಟಿ ಹಗ್ಗ ಬಿಗಿದು ಬಳಿಕ ಅದರ ಮೇಲೆ ಕಬ್ಬಿಣದ ತೊಟ್ಟಿಲು ತೊಟ್ಟಿಲನ್ನು ಕಟ್ಟಲಾಯಿತು.
ನಂತರ ಚಿನ್ನದ ಅಂಬಾರಿ ಕಟ್ಟುವ ಕ್ರೇನ್ ಬಳಿ ೫೦ ಕೆಜಿ ತೂಕದ ೯ ಮರಳಿನ ಮೂಟೆಗಳನ್ನು ಇರಿಸಿ ಒಟ್ಟು ೪೫೦ ಕೆಜಿ ಭಾರದ ಮರಳು ಮೂಟೆ ಹೊರಿಸಿ ಹಗ್ಗದಿಂದ ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿ ಬಿಗಿಯಾಗಿ ಕಟ್ಟಿದರು. ಬಳಿಕ ಭಾರ ಹೊರುವ ತಾಲೀಮಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಹೇಂದ್ರನಿಗೆ ಕುಮ್ಕಿ ಆನೆಗಳಾದ ಲಕ್ಷಿ÷್ಮ ಮತ್ತು ಕಾವೇರಿ ಸಾಥ್ ನೀಡಿದವು. ಅರಮನೆ ಅಂಗಳದಿAದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಭಾರ ಹೊರುವ ತಾಲೀಮುನ್ನು ಮಹೇಂದ್ರ ಯಶಸ್ವಿಯಾಗಿ ಪೂರೈಸಿದ. ಎರಡನೇ ದಿನವಾದ ಸೋಮವಾರ ಮಹೇಂದ್ರನಿಗೆ ಮತ್ತಷ್ಟು ಭಾರ ಹೊರುವ ತಾಲೀಮು ನಡೆಸಲಾಯಿತು.
ಡಿಸಿಎಫ್ ಪ್ರಭುಗೌಡ ನೇತೃತ್ವದಲ್ಲಿ ಒಟ್ಟು೭೦೦ ಕೆಜಿ ತೂಕ ಹೊರುವ ಟಾಸ್ಕ್ನ್ನು ನೀಡಲಾಯಿತು.
೩೫೦ ಕೆಜಿ ಮರಳು ಮೂಟೆ ೩೫೦ ಕೆಜಿ ನಮ್ದ, ಗಾದಿ, ಚಾಪು, ಕಬ್ಬಿಣ ತೊಟ್ಟಿಲು
ಒಟ್ಟು ೭೦೦ ಕೆಜಿ ತೂಕ ಹೊರಿಸಿ, ಭಾರ ಹೊರುವ ಅಭ್ಯಾಸವನ್ನು ನಡೆಸಲಾಯಿತು.
ರಾಜ ಮಾರ್ಗದಲ್ಲಿ ವಾಹನಗಳ, ಜನರ ಸದ್ದುಗದ್ದಲಕ್ಕೆ ಹೊಂದಿಕೊAಡು ಆನೆಗಳು ಆರಾಮವಾಗಿ ತಾಲೀಮು ನಡೆಸಿದವು.
ಅಂಬಾರಿ ಹೊರುವ ಸಾಲಿನಲ್ಲಿರುವ ಮಹೇಂದ್ರ, ಪ್ರಶಾಂತ, ಏಕಲವ್ಯ, ಧನಂಜಯ ಆನೆಗಳಿವೆ.
ಹಂತ ಹಂತವಾಗಿ ನಾಲ್ಕು ಆನೆಗಳಿಗೂ ಬಾರದ ತಾಲೀಮು ಮೊದಲಿಗೆ ಮಹೇಂದ್ರ ಆನೆಗೆ ತಾಲೀಮು ಶುರು ಮಾಡಿದ್ದೇವೆ
ತರಬೇತಿ ನಂತರ ಅಂಬಾರಿ ಹೊರುವ ಆನೆ ಆಯ್ಕೆ ಆಗುತ್ತದೆ ಮೊದಲ ತಂಡದ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.