
ಮೈಸೂರು: ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶೋಭಾ ದಿನೇಶ್ ಹೇಳಿದರು.
ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಶ್ರೀ ವರಮಹಾಲಕ್ಷಿ÷್ಮ ಹಬ್ಬದ ಅಂಗವಾಗಿ ಆಯೋಜಿಸಿದ ವರಮಹಾಲಕ್ಷಿ÷್ಮ ಜೊತೆ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು. ಮಾತ್ರವಲ್ಲದೆ ನಮ್ಮ ಧರ್ಮದ
ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಈ ಮೂಲಕ ಹಿಂದೂ ಸನಾತನ ಸಂಸ್ಕöÈತಿ ರಕ್ಷಿಸಬೇಕು ಎಂದರು.
ಸ್ಪರ್ಧೆಯಲ್ಲಿ ವಿಜೇತರಾದ ಚಾಮುಂಡಿಪುರA ನಿವಾಸಿ ಶಾರದಾ ಜಗದೀಶ್, ಅಶೋಕಪುರಂನ ಅನಿತಾ, ಲಕ್ಷಿ÷್ಮಪುರಂ ಕಾವ್ಯ, ಬೋಗಾದಿ ಪುಷ್ಪ, ದಟ್ಟಗಳ್ಳಿಯ ಮೇಘನಾ, ಅಶೋಕಪುರಂನ ಮಾಲತಿ, ಮಂಡಿ ಮೋಹೂಲ್ಲ ಚೈತ್ರ, ಚಿಕ್ಕಮಂಗಳೂರಿನ ಕವಿತಾ, ಬೆಂಗಳೂರಿನ ನಿವಾಸಿ ಶೋಭಾ, ನಂಜನಗೂಡಿನ ವರಲಕ್ಷಿ÷್ಮ ಅವರು ಬಹುಮಾನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಡಾ ಮಾಜಿ ಸದಸ್ಯೆ ಲಕ್ಷಿ÷್ಮÃದೇವಿ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಟರಾಜ್, ಜಿ ರಾಘವೇಂದ್ರ, ವಿಜಯಲಕ್ಷಿ÷್ಮ ಅಯ್ಯಂಗಾರ್, ಎಸ್.ಎನ್ ರಾಜೇಶ್, ನಿರೂಪಕ ಪುರುಷೋತ್ತಮ್ , ರೂಪ ಹಾಗೂ ಇನ್ನಿತರರು ಹಾಜರಿದ್ದರು.