
ಮೈಸೂರು; ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಇದರ ಶಾಖಾ ಮಠ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಅದ್ಧೂರಿಯಾಗಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನವನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿಧವಿಧವಾದ ರಂಗೋಲಿ ಬಿಡಿಸಿ ಕಂಗೊಳಿಸಲಾಗಿತ್ತು. ಶ್ರೀ ಕೃಷ್ಣನ ಮಂಟಪಕ್ಕೆ ಫಲವಸ್ತçಗಳನ್ನು ಕಟ್ಟಿ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಬಂದ ಎಲ್ಲ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಶಾಂತಾರ0, ಅರ್ಚಕ ರಾಘವನರಸಿಂಹನ್, ನಾರಾಯಣ ಹಾಗೂ ಅಪಾರ ಭಕ್ತವೃಂದ ಉಪಸ್ಥಿತರಿದ್ದರು.