
ಮೈಸೂರು: ಗಣೇಶೋತ್ಸವ ಎಂದರೆ ಕೇವಲ ಮನೆಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಹಬ್ಬವಲ್ಲ. ಅದು ಭಕ್ತಿ, ಸಂಭ್ರಮ, ಸಂಸ್ಕöÈತಿ, ಪರಂಪರೆ ಹಾಗೂ ಸಮಾಜದ ಒಗ್ಗಟ್ಟನ್ನು ಸಾರುವ ಅಪೂರ್ವ ಸಂದರ್ಭವಾಗಿದೆ. ಇದೇ ಆಶಯದೊಂದಿಗೆ ಮೈಸೂರಿನಲ್ಲಿ ನಡೆಯಲಿರುವ 23ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆ ಈ ಬಾರಿ ಮತ್ತಷ್ಟು ವೈಭವದಿಂದ ನಡೆಯಲು ಸಜ್ಜಾಗಿದೆ.
ಮೈಸೂರಿನ ದತ್ತನಗರದಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ವತಿಯಿಂದ ಸೆ. 20ರಂದು ನಡೆಯಲಿರುವ 23ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆಯ ಪೋಸ್ಟರ್ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಗಣೇಶೋತ್ಸವದಂತಹ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ ಎಂದು ತಿಳಿಸಿದರು. “ಹಿಂದೂಗಳೆಲ್ಲರೂ ಒಂದಾಗುವ ಒಂದು ಸದವಕಾಶ ಇದು. ಬನ್ನಿ, ಎಲ್ಲರೂ ಒಂದಾಗಿ ಸೇರೋಣ” ಎಂಬ ಸಂದೇಶದೊAದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿಯ ಸದಸ್ಯ ಎಚ್.ಜಿ. ಗಿರಿಧರ್ ಮಾತನಾಡಿ, ಸೆ. 20ರಂದು ಭಾನುವಾರ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 1.45ಕ್ಕೆ ವಿಜಯನಗರದ ವೀರಗಣಪತಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು.
23ನೇ ವರ್ಷಕ್ಕೆ ಕಾಲಿಟ್ಟಿರುವ ಈ ಗಣೇಶ ವಿಸರ್ಜನಾ ಮೆರವಣಿಗೆ ವರ್ಷದಿಂದ ವರ್ಷಕ್ಕೆ ಭಕ್ತರ ಪಾಲ್ಗೊಳ್ಳುವಿಕೆ ಹಾಗೂ ವೈಭವದಲ್ಲಿ ಹೆಚ್ಚಳ ಕಾಣುತ್ತಿದೆ. ಸಾವಿರಾರು ಭಕ್ತರು ಒಂದೆಡೆ ಸೇರಿ ಗಣಪತಿಯ ನಾಮಸ್ಮರಣೆಯೊಂದಿಗೆ ಸಾಗುವ ಮೆರವಣಿಗೆ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದರು.
ಕಿರಿಯ ಶ್ರೀ ಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ರವರು ಆಶೀರ್ವಾದ ನೀಡಿದರು
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಜೋಗಿ ಮಂಜು, ವಿಕಾಸ್ ಶಾಸ್ತಿç, ಸ್ಮಾರ್ಟ್ ಮಂಜು, ಆನಂದ್, ವೇಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.