Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಹಿಂದಕ್ಕೆ ಯಾವುದೇ ಉಪಯೋಗ ಆಗಲಿಲ್ಲ; ಹೆಚ್.ವಿಶ್ವನಾಥ್


ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಹಿಂದಕ್ಕೆ ಯಾವುದೇ ಉಪಯೋಗ ಆಗಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದರು.
ಮಂಗಳವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಮತ್ತೆ ಅಹಿಂದ ಜಪ ಮಾಡುತ್ತಿದ್ದಾರೆ. ಇವರಿಗೆ ಸಂಕಟ ಬಂದಾಗ ಅಹಿಂದ ನೆನಪಾಗುತ್ತದೆ. ಅಧಿಕಾರದಲ್ಲಿ ಇದ್ದಾಗ ಅಹಿಂದಾಗೆ ಏನು ಮಾಡಿಲ್ಲ. ಆದರೆ, ಅಧಿಕಾರ ಹೋಗುವ ಮುನ್ನ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಬ್ಲಾ÷್ಯಕ್ ಮೇಲ್ ಮಾಡಿದ್ದಾರೆ. ಈಗ ಮತ್ತೆ ಅಹಿಂದ ಸಮಾವೇಶ ಮಾಡಿದ್ದಾರೆ. ಆದರೆ ಅಹಿಂದ ಕಟ್ಟಿದ ಪ್ರಮುಖ ನಾಯಕರನ್ನೇ ಕಡೆಗಣಿಸಿದ್ದಾರೆ. ಈಗ ಪರಮೇಶ್ವರ್? ಅವರ ಕೈಯಲ್ಲಿ ಅಹಿಂದ ಸಮಾವೇಶ ಉದ್ಘಾಟನೆ ಮಾಡಿಸಿದ್ದಾರೆ. ಹಿಂದೆ ಪರಮೇಶ್ವರ್ ಮುಖ್ಯಮಂತ್ರಿಯಾಗುವ ಅವಕಾಶವಿದ್ದ ಸಂದರ್ಭದಲ್ಲಿ ಅವರನ್ನೇ ಸೋಲಿಸಿದರು. ಈ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದರು.
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಾಸವಿರುವ ಬೆಂಗಳೂರಿನ ಸರ್ಕಾರಿ ಮನೆಯನ್ನು, ಸಚಿವ ಬೈರತಿ ಸುರೇಶ್ ತನಗೆ ಬೇಕೆಂದು ಹಠ ಹಿಡಿದು, ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಅಲ್ಲಿಂದ ಖಾಲಿ ಮಾಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆ ಮನೆಯನ್ನು ರಿಪೇರಿ ಮಾಡಿಸಲು ಹೊರಟಿದ್ದಾರೆ. ಸದ್ಯ ಮಹದೇವಪ್ಪ ಆ ಮನೆಯಲ್ಲಿ ವಾಸವಿದ್ದು, ಈ ರೀತಿ ಬೈರತಿ ಸುರೇಶ್ ನಡೆದುಕೊಳ್ಳಲು ಅದರ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ಆರೋಪಿಸಿದರು. ಈಗ ಸಿದ್ದರಾಮಯ್ಯ ವಾಸವಿರುವ ಬೆಂಗಳೂರಿನ ನಿವಾಸವನ್ನು ಅವರು ಖಾಲಿ ಮಾಡಿಲ್ಲ. ಆದರೂ ಮಹದೇವಪ್ಪ ಅವರಿಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ? ಎಂಬುದು ಎಲ್ಲರಿಗೂ ಗೊತ್ತು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ದಲಿತ ನಾಯಕರಾದ ಡಾ.ಹೆಚ್.ಸಿ.ಮಹದೇವಪ್ಪ, ಆರು ಬಾರಿ ಗೆದ್ದಿರುವ ಶಾಸಕ ತನ್ವೀರ್ ಸೇಠ್ ಹಾಗೂ ಪಿರಿಯಾಪಟ್ಟಣದ ಮಾಜಿ ಸಚಿವ ಕೆ.ವೆಂಕಟೇಶ್ ಅಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿದ್ದರಾಮಯ್ಯ. ತನ್ನ ಮಗ ಯತೀಂದ್ರ ಮಹಾರಾಜನಾಗಿ ಮೈಸೂರಿನಲ್ಲಿ ಮೆರಿಬೇಕು ಎಂಬ ಉದ್ದೇಶ ಅವರದ್ದು ಎಂದರು.
ನನ್ನ ವಿರುದ್ಧ ಸಚಿವ ಬೈರತಿ ಸುರೇಶ್ ಹಾಕಿರುವ 50 ಕೋಟಿ ರೂಪಾಯಿ ಮಾನನಷ್ಟ ಮೊಕದಮ್ಮೆಯನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಹೇಳಿದರು.