Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ; ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ


ಮೈಸೂರು; ರಾಜ್ಯ ಬರಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ, ಕೂಡಲೇ ನಿಲ್ಲಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬರಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಸಂದರ್ಭದಲ್ಲೂ ಕಾವೇರಿ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ ಕಾವೇರಿ ಜಲಾಶಯಗಳಿಂದ ನೀರು ಹರಿಸುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ಹಿತವನ್ನು ಕಾಪಾಡುವಂತಹ ರಾಜಕೀಯ, ನಿರ್ಧಾರವನ್ನು ಕೈಗೊಳ್ಳಬೇಕು. ಈ ಸಂಬAಧ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಕಂಡರಿಯದ ಬರಗಾಲಕ್ಕೆ ತುತ್ತಾಗಿದೆ. ಬರ ಪರಿಹಾರ ಕಾರ್ಯಕ್ರಮವನ್ನು ರೂಪಿಸದೇ ಸರ್ಕಾರ ಕಣ್ಮರೆಸುವ ತಂತ್ರ ಮಾಡುತ್ತಿದೆ. ವಿರೋಧ ಪಕ್ಷ ಬೀದಿಯಲ್ಲಿ ನಾಟಕ ವಾಡುತ್ತಿದೆ. ತಂತ್ರ ಮತ್ತು ನಾಟಕವನ್ನು ನಿಲ್ಲಿಸಿ ಬರ ಎದುರಿಸಲು ಕಾರ್ಯಕ್ರಮವನ್ನು ರೂಪಿಸಿ ಎಂದು ಆಗ್ರಹಿಸಿದರು.
ರಾಜ್ಯವು ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಬರ ಬರುವ ಮುನ್ಸೂಚನೆ ಇದ್ದಾಗ್ಯೂ ಬರವನ್ನು ಸಮರೋಪಾದಿಯಲ್ಲಿ ಎದುರಿಸಿ ರೈತರು ಮತ್ತು ಇತರೆ ದುಡಿಯುವ ವರ್ಗಕ್ಕೆ ಸ್ಪಂದಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ರೂಪಿಸದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ಅಧ್ಯಯನದ ಮಾತನಾಡುತ್ತಾ ತಾಂತ್ರಿಕ ಅಂಶಗಳನ್ನು ಮುಂದಿಡುತ್ತಿದೆ. ಈ ಸರ್ಕಾರಗಳಿಗೆ ಬರ ಪರಿಹಾರವನ್ನು ನೀಡುವ ಮನಸ್ಸು ಇಲ್ಲ. ಮನುಷ್ಯತ್ವವೂ ಇಲ್ಲ, ಕೂಡಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸರ್ಕಾರಗಳ ನಿರ್ಲಕ್ಷ÷್ಯದಿಂದ ರೈತರು ಆತ್ಮಹತ್ಯೆಯ ದಾರಿ ಹಿಡಿಯುವ ಆತಂಕ ಎದುರಾಗಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲದೇ ಸಾವನ್ನಪುö್ಪವ ಸಾಧ್ಯತೆಗಳು ಹೆಚ್ಚಾಗಿವೆ. ಜನರು ಹೊಟ್ಟೆ ಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ರಾಜ್ಯ ಸರ್ಕಾರ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ನೀತಿಗಳನ್ನು ಪಕ್ಕಕ್ಕಿಟ್ಟು, ತನ್ನದೇ ಆದ ಸಂಪನ್ಮೂಲದಿAದ ಬರದ ಸಮಸ್ಯೆ ಸುಳೆಯಲ್ಲಿ ಸಿಕ್ಕಿರುವ ರೈತರು, ಕೂಲಿಕಾರರು ಇತರೆ ದುಡಿಯುವ ಜನರ ಬದುಕಿಗೆ ಸ್ಪಂದಿಸಬೇಕು ಬೆಳೆ ನಷ್ಟ ಪರಿಹಾರ ಮತ್ತು ಇತರೆ ಕ್ರಮಗಳನ್ನು ಅನುಸರಿಸಿ ತದನಂತರ ಕೇಂದ್ರದಿAದ ಬರಬೇಕಾದ ಅನುದಾನದ ಬಗ್ಗೆ ಪ್ರಯತ್ನ ಮಾಡಲಿ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ;
ಬರದ ಸಂಕಷ್ಟದಲ್ಲೂ ಬ್ಯಾಂಕುಗಳು, ರೈತರು ಪಡೆದಿರುವ ಸಾಲ ವಸೂಲಾತಿಗಾಗಿ ಮುಂದಾಗಿದ್ದು, ಕೂಡಲೇ ಸರ್ಕಾರ ಬ್ಯಾಂಕ್‌ಗಳಿಗೆ ಕಟ್ಟು-ನಿಟ್ಟಿನ ಸೂಚನೆಗಳನ್ನು ನೀಡಿ ಸಾಲ ವಸೂಲಿಗೆ ತಡೆಯೊಡ್ಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50ರ ಅನುಪಾತದಲ್ಲಿ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಈ ಸಂಬAಧ ಬರದ ಬಗ್ಗೆ ಚರ್ಚೆ ನಡೆಸಲು ಕರೆದಿರುವ ವಿಶೇಷ ಅಧಿವೇಶನದಲ್ಲಿ ಸರ್ವಾನುಮತದ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ರೈತ ಸಂಘ ಆಗ್ರಹಿಸುತ್ತದೆ ಎಂದು ತಿಳಿಸಿದರು.
ರಾಜ್ಯದ ಸಂಸತ್ ಸದಸ್ಯರು ರೈತರ ಸಾಲ ಮನ್ನಾ ಮಾಡುವ ಸಂಬAಧ ಮತ್ತು ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.

ಭೂ ಸ್ವಾಧೀನ ಕೈ ಬಿಡಬೇಕು;

ಮೈಸೂರು ನಗರಕ್ಕೆ ಹೊಂದಿಕೊAಡಿರುವ ಮರಸೆ, ಮದರಗಳ್ಳಿ ಗ್ರಾಮದ ಫಲವತ್ತಾದ ತೋಟಗಾರಿಕೆ, ನೀರಾವರಿ 140 ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ವಿರೋಧಿಸುತ್ತದೆ. ಈ ಸಂಬAಧ ರೈತರು ನಡೆಸುತ್ತಿರುವ ಚಳುವಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಕೆ.ಐ.ಎ.ಡಿ.ಬಿ ಈ ಪ್ರದೇಶದಲ್ಲಿ ಈಗಾಗಲೇ ನೂರಾರು ಎಕರೆ ಜಮೀನನ್ನು ವಿಮಾನ ನಿಲ್ದಾಣದ ಉನ್ನತ್ತೀಕರಣಕ್ಕಾಗಿ ಸ್ವಾಧಿನಪಡಿಸಕೊಂಡಿದೆ. ಅದಕ್ಕೆ ಹೊಂದಿಕೊAಡಿರುವ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧಿನಪಡಿಸಿಕೊಳ್ಳಲು ನೋಟಿಫಿಕೇಷನ್ ಹೊರಡಿಸಿದೆ. ಆದರೆ ಯಾವ ಕೈಗಾರಿಕೆಯನ್ನು ಅಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂಬುದನ್ನು ಪ್ರಕಟಣೆ ಮಾಡಲಾಗಿಲ್ಲ. ಈ ಸಂಬAಧ ಯಾವುದೇ ಸಾರ್ವಜನಿಕ ವಿಚಾರಣೆಗಳು ನಡೆದಿರುವುದಿಲ್ಲ. ಸಾರ್ವಜನಿಕ ಉದ್ದೇಶದ ನೆಪ ಹೇಳಿ ಕದ್ದು ಮುಚ್ಚಿ ಫಲವತ್ತಾದ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಲು ಹುನ್ನಾರ ಇರುವುದು ಕಂಡಬರುತ್ತದೆ. ಸರ್ಕಾರ ಈ ಬಗ್ಗೆ ಸಾರ್ವಜನಿಕವಾಗಿ ಮೊದಲು ಬಹಿರಂಗಪಡಿಸಬೇಕೆAದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ನಂಜನಗೂಡು ತಾಲೂಕು ಅಧ್ಯಕ್ಷ ಮಹೇಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.