
ಮೈಸೂರು; ನಾಡ ಹಬ್ಬ ಮೈಸೂರು ದಸಪಾ ಮಹೋತ್ಸವಕ್ಕೆ ಂದು ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಕಲಿಕೆಯ ಅಂತರವನ್ನು ನಿವಾರಿಸಲು ಮತ್ತು ಕುಟುಂಬದೊAದಿಗೆ ಬಂದ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಬರವಣಿಗೆ ಸಾಮಾಗ್ರಿಗಳು ಮತ್ತು ಸಿಹಿ ಹಂಚಿ ಶಾಲೆಗೆ ನಿರಂತರವಾಗಿ ಬರುವಂತೆ ತಿಳಿಸಲಾಯಿತು. ದಸರಾ ಮುಗಿಸಿ ಗಜಪಯಣ ಹಿಂತಿರುಗುವರೆಗೂ ಪ್ರತಿ ನಿತ್ಯ ಶಾಲೆ ಇರುತ್ತದೆ ಮತ್ತು ಅಕ್ಷಯ ಪಾತ್ರೆ ಫೌಂಡೇಷನ್ ವತಿಯಿಂದ ಮಧ್ಯಾಹ್ನ ದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.
ಬುಧವಾರ ಶಾಲೆ ಆರಂಭಕ್ಕೆ ಅಧಿಕೃತವಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯ ಕುಮಾರ್ ಚಾಲನೆ ನೀಡಿ,
ಪೋಷಕರಿಗೆ ಮತ್ತು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಡಿ ವೈಪಿಸಿ ಶೋಭ, ಬಿಇಒ ಕೃಷ್ಣ, ಬಿಆರ್‌ಸಿ ಎಂ.ಬಿ ಶ್ರೀಕಂಠಸ್ವಾಮಿ, ಎಸಿಎಫ್ ಪ್ರಭುಗೌಡ, ಆರ್‌ಎಫ್‌ಒ ರೇಷ್ಮ ಮತ್ತು ವಲಯದ ಅನುಪಾಲನಾಧಿಕಾರಿಗಳು ಹಾಜರಿದ್ದರು.