
ಮೈಸೂರು; ನಗರದ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಅಭಿನವ ಬೆಂಗಳೂರು, ಎಸ್.ಟಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಚಿನಕುರಳಿ ಹಾಗೂ ವಿಸ್ಮಯ ಅಡ್ವರ್ಟೈಸರ್ಸ್ ಸಹಯೋಗದೊಂದಿಗೆ ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ಎಂಬ ವಿಷಯ ಕುರಿತು ಎರಡು ದಿನದ ಅಂತÀರರಾಷ್ಟಿçÃಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಸಂಕಿರಣದಲ್ಲಿ 40ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು 7 ಅಂಕಣಗಳಲ್ಲಿ ತಮ್ಮ ವಿಚಾರವನ್ನು ಮಂಡಿಸಿದರು ಅಮೇರಿಕಾ ಮತ್ತು ರಷ್ಯಾ ದೇಶಗಳಿಂದಲ್ಲೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿರುವುದು ಸಂಕಿರಣದ ಆಕರ್ಷಣೀಯವಾಗಿದೆ. ಉದ್ಘಾಟನಾ ಸಮಾರಂಭದ ನಂತರ ನಡೆದ ಮೊದಲನೇ ಅಂಕಣದಲ್ಲಿ ಸಂಕೇಶ್ವರದ ಡಾ. ಗುರುಪಾದ ಮರಿಗುದ್ದಿ, ಬೆಂಗಳೂರಿನ ಡಾ. ಕೆ.ವೈ. ನಾರಾಯಣಸ್ವಾಮಿ ಮತ್ತು ಶಿವಮೊಗ್ಗದ ಡಾ. ಮೇಟಿ ಮಲ್ಲಿಕಾರ್ಜುನ ಅವರುಗಳು ಕುವೆಂಪು ಮತ್ತು ಅವರ ಸಾಹಿತ್ಯ ಕುರಿತು ತಮ್ಮ ವಿಚಾರವನ್ನು ಮಂಡಿಸಿದರು. ಈ ಅಂಕಣವನ್ನು ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಧ್ಯಾಪಕರಾದ ಡಾ. ವಿನೋದಮ್ಮ ನಡೆಸಿಕೊಟ್ಟರು.
ಮೊದಲು ಮಾತನಾಡಿದ ಡಾ. ಗುರುಪಾದ ಮರಿಗುದ್ದಿ ಅವರು ಕನ್ನಡ ಸಾಹಿತ್ಯ ಪರಂಪರೆ ಮತ್ತು ಕುವೆಂಪು ಎಂಬ ವಿಷಯ ಮಂಡನೆ ಮಾಡಿದರು. ಇಂದಿನ ಸಮಾಜದಲ್ಲಿ ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಶಿಕ್ಷಣದ ಕೊರತೆ ಹಾಗೂ ಅರಿವಿನ ಅಭಾವದಂತಹ ಹಲವು ಸಮಸ್ಯೆಗಳು ಜನಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಇವು ವ್ಯಕ್ತಿಯ ಜೀವನಕ್ಕೆ ಮಾತ್ರ ಸೀಮಿತವಾಗದೆ ಕುಟುಂಬ, ಸಮುದಾಯ ಮತ್ತು ದೇಶದ ಅಭಿವೃದ್ಧಿಗೂ ಅಡ್ಡಿಯಾಗುತ್ತವೆ. ಹೀಗಾಗಿ ಸಾಮಾಜಿಕ ಸಮಸ್ಯೆಗಳಿಗÉ ಪರಿಹಾರ ಕಂಡುಕೊಳ್ಳುವುದು ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.
ಈ ಸಮಸ್ಯೆಗಳ ನಿವಾರಣÉಗÉ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಶಾಲೆಗಳು, ಕಾಲೇಜುಗಳು, ಸಂಘ-ಸAಸ್ಥೆಗಳು ಹಾಗೂ ಮಾಧ್ಯಮಗಳು ಜನರಿಗÉ ಸರಿಯಾದ ಮಾಹಿತಿ ನೀಡುವ ಮೂಲಕ ಸಾಮಾಜಿಕ ಅರಿವು ಬÉಳÉಸಬೇಕು. ಶಿಕ್ಷಣವು ವೈಜ್ಞಾನಿಕ ಮನೋಭಾವ, ನೈತಿಕತೆ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬÉಳÉಸುವ ಪ್ರಮುಖ ಸಾಧನವಾಗಿದೆ. ವಿಶೇಷವಾಗಿ ಮಕ್ಕಳಿಗÉ ಮತ್ತು ಯುವಜನತೆಗÉ ಮೌಲ್ಯಾಧಾರಿತ ಶಿಕ್ಷಣ ನೀಡುವುದರಿಂದ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಡಾ. ಕೆ.ವೈ. ನಾರಾಯಣಸ್ವಾಮಿ ಅವರು ‘ಕುವೆಂಪು ಅವರ ಕಾಲಘಟ್ಟದ ಸಂಶೋಧನೆಯ ವೈಧಾನಿಕತೆಗಳು’ ಕುರಿತು ಮಾತನಾಡಿ, ಕುಮಾರವ್ಯಾಸರ ಕಾವ್ಯದಲ್ಲಿ ಕಾಣಿಸಿಕೊಳ್ಳುವ ಸಾಹಿತ್ಯೀಕ ಹಾಗೂ ಸಾಂಸ್ಕೃತಿಕ ವೈಶಿಷ್ಟö್ಯಗಳು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯವು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಮಾಜ ಮತ್ತು ಜೀವನದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಪ್ರಮುಖ ಸಾಧನವಾಗಿದೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆ, ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಯಾಗುತ್ತವೆ. ಇಂತಹ ಸಾಹಿತ್ಯವನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ, ವಿಚಾರಶಕ್ತಿ ಹಾಗೂ ಸಾಂಸ್ಕೃತಿಕ ಅರಿವು ವೃದ್ಧಿಯಾಗುತ್ತದೆ ಎಂದು ಹೇಳಿದರು.
ಅಂಕಣದ ಕೊನೆಯವರಾಗಿ ‘ಕುವೆಂಪು ಅವರ ಭಾಷಿಕ ನಿಲುವುಗಳು’ ಎಂಬ ವಿಚಾರ ಕುರಿತು ಶಿವಮೊಗ್ಗ ಜಿಲ್ಲೆಯ ಡಾ. ಮೇಟಿ ಮಲ್ಲಿಕಾರ್ಜುನ ಅವರು ತಮ್ಮ ವಿಚಾರವನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಅನುವಾದದ ಮಹತ್ವ, ಭಾಷೆಯ ಬಳಕೆ ಹಾಗೂ ಅನುವಾದಕರ ಜವಾಬ್ದಾರಿಗಳ ಕುರಿತು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲಾಯಿತು.