Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೂಲಿ ಕಾರ್ಮಿಕನ ಮೇಲೆ ಆನೆ ದಾಳಿ

ಪಿರಿಯಾಪಟ್ಟಣ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆ ಚೌಕೂರು ವಿಭಾಗದಲ್ಲಿ ಶುಂಠಿ ಕೆಲಸಕ್ಕೆ ತೆರಳಿ ವಾಪಸ್ ಬರುತ್ತಿದ್ದ ಕೃಷ್ಣಪ್ಪ ಎಂಬುವವರ ಮೇಲೆ ಆನೆ ಏಕಾಏಕಿ ದಾಳಿ ನಡೆಸಿದ ಘಟನೆ ಚೌತಿ ಗ್ರಾಮ ಪಂಚಾಯಿತಿಯ ವರ್ತಿ ಹಾಡಿಯಲಿ ನಡೆದಿದೆ.

ಆನೆ ದಾಳಿಯಿಂದ ಗಾಯಗೊಂಡ ಕೃಷ್ಣಪ್ಪ ಅವರನ್ನು ಹಾಡಿಯ ಮುಖಂಡರು ಹಾಗೂ ಅರಣ್ಯ ಸಿಬ್ಬಂದಿ ಗಳು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳಲ್ಲಿ ಆತಂಕ ಉಂಟಾಗಿದ್ದು, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಯಜಮಾನ ರಮೇಶ್ ಒತ್ತಾಯಿಸಿದ್ದಾರೆ.

 ನಂತರ ಬುಡಕಟ್ಟು ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಶಿವಣ್ಣ ಮಾತನಾಡಿ ಹಳೆಕೆರೆ ಹಾಡಿಯ ಕುಟುಂಬಗಳಿಗೆ ಗುಂಟೆ ರೂಪದಲ್ಲಿ ಹಕ್ಕುಪತ್ರ ವಿತರಿಸಿರುವುದರಿಂದ ಅರಣ್ಯ ಪ್ರದೇಶದ ಗಡಿ ಹಾಗೂ ಜನರ ಸುರಕ್ಷತೆ ಕುರಿತು ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಳೆಕೆರೆ ಹಾಡಿಯ ಗ್ರಾಮಸ್ಥರು ಗ್ರಾಮಸಭೆ ನಡೆಸಿ, ನಾಗಯ್ಯನ ಕಂಡಿಯಿಂದ ಕೂಸಯ್ಯನ ಕಂಡಿವರೆಗೆ ಗಡಿ ಗುರುತಿಸುವಂತೆ ನಿರ್ಧರಿಸಿದ್ದಾರೆ.

ಗುರುತಿಸಿರುವ ಗಡಿ ಪ್ರದೇಶದಲ್ಲಿ ಸೋಲಾರ್ ತಂತಿ ಹಾಗೂ ರೈಲು ಕಂಬಿಗಳ ಬೇಲಿ ಅಳವಡಿಸಿ, ಹಾಡಿಯ ನಿವಾಸಿಗಳು ಹಾಗೂ ಕಾಡಾನೆಗಳ ನಡುವೆ ಸಂಘರ್ಷ ಉಂಟಾಗದಂತೆ ಅರಣ್ಯ ಇಲಾಖೆಯವರು ಶಾಶ್ವತ ಕ್ರಮ ಕೈಗೊಳ್ಳಬೇಕು, ಹಾಗೂ ಕೃಷಿ ಕೆಲಸಗಳಿಗೆ ತೆರಳುವ ಜನರ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಬೇಕು , ಕೃಷ್ಣಪ್ಪನವರಿಗೆ ಸಂಭವಿಸಿದ ಘಟನೆ ಮತ್ತೆ ಹಾಡಿಯ ಯಾವುದೇ ಕುಟುಂಬಕ್ಕೆ ಸಂಭವಿಸದಂತೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.