Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆದಿವಾಸಿ ಮಹಿಳೆಯ ಮೇಲೆ ಹಲ್ಲೆ ಆರೋಪ

ನಂಜನಗೂಡು; ಜಮೀನಿನ ಕೆಲಸಕ್ಕೆ ಬಂದಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆದಿವಾಸಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ತಾಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ತಾಲೂಕಿನ ಡೋರನಕಟ್ಟೆಯ ಆದಿವಾಸಿ ಕಾಲೋನಿಯ ಮಹಿಳೆ ಗೋಪಿ ಅಲಿಯಾಸ್ ಗೌರಮ್ಮ (52). ಹಲ್ಲೆಗೊಳಗಾದ ಆದಿವಾಸಿ ಮಹಿಳೆ.    ಬಂಕಹಳ್ಳಿ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಕೆಲಸಕ್ಕೆ ಬಂದಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆದಿವಾಸಿ ಮಹಿಳೆಯ ತಲೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ, ಹಲ್ಲೆಗೊಳಗಾಗಿ ತೀವ್ರವಾಗಿ ಕುಸಿದುಬಿದ್ದ ಗೌರಮ್ಮ ಹೆಚ್. ಡಿ…

Read More

ಹೊಸ ಕಡಜಟ್ಟಿ ಗ್ರಾಮದ ದಲಿತ ಮಹಿಳೆ ಕೊಲೆ ಆರೋಪಿ ಬಂಧನ 

 ನಂಜನಗೂಡು.    ಹೊಸ ಕಡಜಟ್ಟಿ ಗ್ರಾಮದಲ್ಲಿ ತೀವ್ರ ಹಲ್ಲೆಗೊಳಗಾಗಿ ಕೊಲೆಯಾಗಿದ್ದ ದಲಿತ ಮಹಿಳೆ ಮಹದೇವಮ್ಮ ರವರನ್ನು ಕೊಲೆ ಮಾಡಿದ ಆರೋಪಿ ನವೀನ್ ನನ್ನು ವಶಕ್ಕೆ ಪಡೆಯುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.    ಹೊಸ ಕಡಜಟ್ಟಿ ಗ್ರಾಮದ ಶಂಕರ್ ರವರ ಪುತ್ರ ಸಿದ್ದರಾಮಯ್ಯ ಅಲಿಯಾಸ್ ನವೀನ (40) ಬಂದಿತ ಆರೋಪಿ.   ಸೆ.6 ರಂದು ಹೊಸ ಕಡಜಟ್ಟಿ ಗ್ರಾಮದಲ್ಲಿ ದಲಿತ ಮಹಿಳೆ ಮಹದೇವಮ್ಮ ರವರ ಮೇಲೆ ಹಣಕಾಸಿನ ವಿಚಾರವಾಗಿ ಜಗಳ ತೆಗೆದು ತೀವ್ರವಾಗಿ ಹಲ್ಲೆ ನಡೆಸಿದ್ದ, ಸೆ.7 ರಂದು ಮಹದೇವಮ್ಮ…

Read More

ಸರ್ ಎಂ. ವಿಶ್ವೇಶ್ವರಯ್ಯರ ಆದರ್ಶಗಳು ಯುವಜನತೆಗೆ ತಲುಪಲಿ

ಮೈಸೂರು; ಭಾರತರತ್ನ ದಿವಾನ್ ಸರ್.ಎಂ ವಿಶ್ವೇಶ್ವರಯ್ಯ ರವರ 166ನೇ ಜಯಂತಿಯನ್ನು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್.ಎಂ.ವಿ ವೃತ್ತದಲ್ಲಿ ಸರ್ ಎಂ ವಿ ಭಾವಚಿತ್ರ ಹಿಡಿದು ಮೈಸೂರು ಪಾಕ್ ವಿತರಿಸಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಮುಂದಿನ ಪೀಳಿಗೆಗೆ ಸರ್.ಎಂ ವಿ ರವರ ಕೊಡುಗೆಗಳನ್ನ ಸ್ಮರಿಸಲು ಪ್ರತಿಮೆಯನ್ನ ಸರ್ಕಾರದ ವತಿಯಿಂದ ನಿರ್ಮಿಸಲಿ ಎಂದರುನAತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ಮಾತನಾಡಿ, ತಿರುಪತಿ ಬೆಟ್ಟಕ್ಕೆ ಆಗಿನ ಕಾಲದಲ್ಲೇ ಜೋಡಿ ರಸ್ತೆ ಮಾರ್ಗದ ಯೋಜನೆ ರೂಪಿಸಿದ್ದರು,…

Read More

ವಿಜಯ ವಿಠಲ ಕಾಲೇಜಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಮೈಸೂರು; ಸರ್. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯನ್ನು ನಗರದ ವಿಜಯ ವಿಠಲ ಕಾಲೇಜಿನಲ್ಲಿ ಆಚರಿಸಲಾಯಿತು. ವಿಶ್ವೇಶ್ವರಾಯರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್, ಸಮೃದ್ಧ ಭಾರತದ ಕನಸುಗಾರರಾದ, ಅಭಿವೃದ್ಧಿಯ ಹರಿಕಾರರಾದ, ರೈತರ ಪಾಲಿನ ಭಾಗ್ಯದೇವತೆ ಮತ್ತು ಅತ್ಯಂತ ಸರಳ ಹಾಗೂ ಮೇರು ವ್ಯಕ್ತಿತ್ವದ ಮೋಕ್ಷಗುಂಡA ವಿಶ್ವೇಶ್ವರಾಯರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಜನಹಿತ, ಲೋಕಹಿತಕ್ಕಾಗಿ ಅವರು ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ಕಷ್ಟದಲ್ಲೇ ಬದುಕನ್ನು ಕಟ್ಟಿಕೊಂಡ ಸರ್…

Read More

ವಿದೂಷಿ ಕಾವ್ಯಶ್ರೀ ಆರ್‌ರಾವ್‌ರಿಂದ ದಾಸರ ಸುಪ್ರಸಿದ್ಧ ಗೀತೆಗಳ ಗಾಯನ

ಮೈಸೂರು; ನಗರದ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮ ಸಭಾಂಗಣದಲ್ಲಿ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ 35ನೇ ಚಾತುರ್ಮಾಸ್ಯವ್ರತ ಅಂಗವಾಗಿ ಮೈಸೂರಿನ ಶ್ರೀರಾಗ ಕಲಾತಂಡದ ವಿದೂಷಿಕುಮಾರಿ ಕಾವ್ಯಶ್ರೀ ಆರ್‌ರಾವ್‌ರವರಿಂದ ಸುಪ್ರಸಿದ್ಧ ದಾಸರ ಕೀರ್ತನೆಗಳ ಗಾಯನ ಸುಧೆ ಹರಿಯಿತು. ಮುರುಳಿಬಾರಿಸೋಮಾಧವ, ನಮ್ಮಮ್ಮ ಶಾರದೆ, ಚಂದ್ರಚೂಢಶಿವಶAಕರ, ಕೃಷ್ಣಬಾರೋ ಗೀತೆಗಳನ್ನು ಹಾಡಿದರು. ಪಕವಾದ್ಯ ಸಹಕಾರ ವಿದ್ವಾನ್‌ಗಣೇಶ್‌ಭಟ್, ಕೀಬೋರ್ಡ್ ವಿದ್ವಾನ್ ಭೀಮಶಂಕರ್‌ತಬಲ ಸಹಕಾರ ನೀಡಿದರು.

Read More