Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸರ್ ಎಂ. ವಿಶ್ವೇಶ್ವರಯ್ಯರ ಆದರ್ಶಗಳು ಯುವಜನತೆಗೆ ತಲುಪಲಿ


ಮೈಸೂರು; ಭಾರತರತ್ನ ದಿವಾನ್ ಸರ್.ಎಂ ವಿಶ್ವೇಶ್ವರಯ್ಯ ರವರ 166ನೇ ಜಯಂತಿಯನ್ನು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್.ಎಂ.ವಿ ವೃತ್ತದಲ್ಲಿ ಸರ್ ಎಂ ವಿ ಭಾವಚಿತ್ರ ಹಿಡಿದು ಮೈಸೂರು ಪಾಕ್ ವಿತರಿಸಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಮುಂದಿನ ಪೀಳಿಗೆಗೆ ಸರ್.ಎಂ ವಿ ರವರ ಕೊಡುಗೆಗಳನ್ನ ಸ್ಮರಿಸಲು ಪ್ರತಿಮೆಯನ್ನ ಸರ್ಕಾರದ ವತಿಯಿಂದ ನಿರ್ಮಿಸಲಿ ಎಂದರು
ನAತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ಮಾತನಾಡಿ, ತಿರುಪತಿ ಬೆಟ್ಟಕ್ಕೆ ಆಗಿನ ಕಾಲದಲ್ಲೇ ಜೋಡಿ ರಸ್ತೆ ಮಾರ್ಗದ ಯೋಜನೆ ರೂಪಿಸಿದ್ದರು, ಮೈಸೂರು ಬ್ರಾಂಡ್ ಗಳಾದ ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ರೇಷ್ಮೆ, ಮೈಸೂರು ಅಗರಬತ್ತಿಸ್, ಮೈಸೂರು ಪೇಟ ನಂಜನಗೂಡು ರಸಬಾಳೆ, ಸೇರಿದಂತೆ ಎಲ್ಲವೂ ಅಂತರಾಷ್ಟಿçÃಯ ಮಟ್ಟದಲ್ಲಿ ಜನಪ್ರಿಯವಾಗಲು ದಿವಾನ್ ಸರ್.ಎಂವಿ ಬಹಳಷ್ಟು ಶ್ರಮವಹಿಸಿದ್ದರು, ಸರ್ಕಾರ ಅವರ ಪ್ರತಿಮೆಯನ್ನ ಸ್ಥಾಪಿಸಲು ಮುಂದಾಗಬೇಕು, ಇಲ್ಲವಾದಲ್ಲಿ ಸಂಘ ಸಂಸ್ಥೆಗಳ ವತಿಯಿಂದಲೇ ಸರ್.ಎಂವಿ ಪ್ರತಿಮೆ ಸ್ಥಾಪಿಸುತ್ತೇವೆ ಎಂದರು.
ಈ ವೇಳೆ ನಗರ ಪಾಲಿಕೆಯ ಮಾಜಿ ಸದಸ್ಯರಾದ ಮಾವಿ ರಾಮ್ ಪ್ರಸಾದ್, ಎಂ ಡಿ ಪಾರ್ಥಸಾರಥಿ, ಜಗದೀಶ್,ಎಂ ಚಿಕ್ಕವೆಂಕಟು,ಗುರುವಿನಾಯಕ, ಜೋಗಿ ಮಂಜು, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ.ರವಿ. ನಿರೂಪಕ ಅಜಯ್ ಶಾಸ್ತಿç, ವಿದ್ವಾನ್ ಕೃಷ್ಣಮೂರ್ತಿ, ಜಯಸಿಂಹ , ವಿಜಯ್ ಕುಮಾರ್, ಶಿವರಾಜ್, ಎಸ್ ಎನ್ ರಾಜೇಶ್, ಎಂ ಪಿ ಸಚಿನ್ ನಾಯಕ್ , ಸುಚೇಂದ್ರ, ಗೋಪಾಲ್, ಶ್ರೀಕಂಠ ಕೌಶಿಕ್ ಹಾಗೂ ಇನ್ನಿತರರು ಭಾಗವಹಿಸಿದ್ದರು.