Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಜಯ ವಿಠಲ ಕಾಲೇಜಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ


ಮೈಸೂರು; ಸರ್. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯನ್ನು ನಗರದ ವಿಜಯ ವಿಠಲ ಕಾಲೇಜಿನಲ್ಲಿ ಆಚರಿಸಲಾಯಿತು. ವಿಶ್ವೇಶ್ವರಾಯರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್, ಸಮೃದ್ಧ ಭಾರತದ ಕನಸುಗಾರರಾದ, ಅಭಿವೃದ್ಧಿಯ ಹರಿಕಾರರಾದ, ರೈತರ ಪಾಲಿನ ಭಾಗ್ಯದೇವತೆ ಮತ್ತು ಅತ್ಯಂತ ಸರಳ ಹಾಗೂ ಮೇರು ವ್ಯಕ್ತಿತ್ವದ ಮೋಕ್ಷಗುಂಡA ವಿಶ್ವೇಶ್ವರಾಯರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಜನಹಿತ, ಲೋಕಹಿತಕ್ಕಾಗಿ ಅವರು ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ಕಷ್ಟದಲ್ಲೇ ಬದುಕನ್ನು ಕಟ್ಟಿಕೊಂಡ ಸರ್ ಎಂ.ವಿ.ಯವರು ಸುಸಂಸ್ಕೃತರೂ, ಸುಶಿಕ್ಷಿತರೂ, ನಿಷ್ಠಾವಂತರೂ, ಸಮಯಪಾಲಕರೂ ಆಗಿದ್ದು, ಶಿಸ್ತಿನ ಜೀವನವನ್ನು ನಡೆಸಿಕೊಂಡು ಬಂದಿದ್ದರು. ಅವರು ವಿದ್ಯಾರ್ಜನೆಗಾಗಿ ಶ್ರಮಿಸಿದ್ದನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು.
ಸರ್.ಎಂ.ವಿ. ಯವರು ಕರ್ಮಯೋಗಿ ಮತ್ತು ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದರು. ಅವರ ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ, ಶಕ್ತಿಶಾಲಿ ಭಾರತದ ನಿರ್ಮಾಣ ಸಾಧ್ಯ. ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಕಾಣಬೇಕೆಂದರೆ, ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದಾ ಕ್ರಿಯಾಶೀಲರಾಗಿರಬೇಕು. ಕೆಲಸದಲ್ಲಿ ಶ್ರದ್ಧೆ, ಆಸಕ್ತಿ, ನಿಖರತೆ ಮತ್ತು ಸಮಯಪ್ರಜ್ಞೆ ಇದ್ದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ವಿಶ್ವೇಶ್ವರಾಯರವರ ಜೀವನೋತ್ಸಾಹ, ಕರ್ತವ್ಯಪ್ರಜ್ಞೆ, ಇಚ್ಛಾಶಕ್ತಿ, ದೃಢತೆ, ಸರ್ವರಿಗೂ ಅನುಕರಣೀಯ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಷ್ಠ್ಠೆ, ಶಿಸ್ತು, ಸಂಯಮ, ದಕ್ಷತೆಯಿಂದ ಕೆಲಸವನ್ನು ನಿರ್ವಹಿ ಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಯೂರಲಕ್ಷಿö್ಮ, ಅಂಜಲಿ, ಮಂಜುಳಾ ಉಪಸ್ಥಿತರಿದ್ದರು.