
ಮೈಸೂರು; ನಗರದ ಆರ್ ಟಿ ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ತ್ರಿಶಿಕಾ ಸಿ. ಎನ್ ಗೌಡ ಯೋಗ ಸ್ಪರ್ಧಾಕೂಟದಲ್ಲಿ ವಿಶ್ವ ದಾಖಲೆ ರಚಿಸುವ ಮೂಲಕ ಮೈಸೂರಿನ ಹೆಮ್ಮೆಗೆ ಇನ್ನೊಂದು ಗರಿ ಮೂಡಿಸಿದ್ದಾರೆ.
ಬೋಗಾದಿಯ ಕೃಷ್ಣಮಾಚಾರ್ಯ ಯೋಗ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಕು. ತ್ರಿಷಿಕಾ ಅವರು ಆಗಸ್ಟ್ 22 ರಂದು ಭಾರತೀಯ ಯೋಗಾಸನ ಕ್ರೀಡಾ ಫೆಡರೇಷನ್ನಿಂದ ಆಯೋಜಿಸಲಾದ ಏಕಕಾಲದಲ್ಲಿ ಅತಿ ಹೆಚ್ಚು ಮಂದಿ ತಲೆಯ ಮೇಲೆ ನೀರಿನ ಕಪ್ನ್ನು ಸಮತೋಲನದಲ್ಲಿರಿಸಿಕೊಂಡು 60 ಸೆಕೆಂಡುಗಳ ಕಾಲ ವಾತಾಯನಾಸನ ಎಂಬ ವಿಶ್ವ ದಾಖಲೆ ಪ್ರಯತ್ನದಲ್ಲಿ ಭಾಗವಹಿಸಿದ್ದರು. ಈ ದಾಖಲೆಯ ಪ್ರಯತ್ನವನ್ನು ಔsಛಿಚಿಡಿs ಃooಞ oಜಿ ಖeಛಿoಡಿಜs ಅಧಿಕೃತವಾಗಿ ನೂತನ ವಿಶ್ವ ದಾಖಲೆಯಾಗಿ ಗುರುತಿಸಿದ್ದು, ಖeಛಿoಡಿಜ ಓo. ಔಃಖ/2026/021 ಅನ್ನು ನೀಡಲಾಗಿದೆ.
ತ್ರಿಶಿಕಾ ಅವರ ಈ ಅದ್ಭುತ ಸಾಧನೆಗೆ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದ್ದಾರೆ.