Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

“ರಾಜೇಂದ್ರ ಶ್ರೀಗಳು ಸಮಾಜಕ್ಕೆ ಎಂದೆ0ದಿಗೂ ಅರಿವಿನ ಬೆಳಕಾದವರು; ಪ್ರೊ. ಎ.ಪಿ.ಜ್ಞಾನಪ್ರಕಾಶ್


ಮೈಸೂರು; ಪೂಜ್ಯರಾದ ರಾಜೇಂದ್ರ ಶ್ರೀಗಳು ಸಮಾಜಕ್ಕೆ ಎಂದೆAದಿಗೂ ಅರಿವಿನ ಬೆಳಕಾದವರು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ ಪಿ ಜ್ಞಾನಪ್ರಕಾಶ್ ಹೇಳಿದರು.
ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111 ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳವರು ಸಮಾಜಕ್ಕೆ ಎಂದೆAದಿಗೂ ಅರಿವಿನ ಬೆಳಕಾದವರು, ಜನಮಾನಸ ಲೋಕದಲ್ಲಿ ಹಸಿರಾದವರು. ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಪ್ರಸಾದ ನಿಲಯಗಳನ್ನು ತೆರೆದು ಅಕ್ಷರ, ಆರೋಗ್ಯ ಮತ್ತು ಅನ್ನದಾಸೋಹ ನೀಡಿದ ಮಾನವತೆಯ ಮೂರ್ತಿಗಳು. ಜಾಗತೀಕ ಮಟ್ಟದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸುತ್ತೂರು ಶ್ರೀಮಠ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಇದೆಲ್ಲದರ ಧೀಶಕ್ತಿಯಾಗಿರುವವರು ರಾಜೇಂದ್ರ ಶ್ರೀಗಳವರು ಎಂದು ಸ್ಮರಿಸಿದರು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಮಹಾನಗರಪಾಲಿಕೆಯ ಹೆಚ್ಚುವರಿ ಆಯುಕ್ತೆ ಬಿ.ಎನ್.ವೀಣಾ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ರಾಜೇಂದ್ರ ಶ್ರೀಗಳು, ಬಸವಣ್ಣನವರ ಆಶಯದಂತೆ ಆರೋಗ್ಯಕರ ಸಮಾಜವನ್ನು ರೂಪಿಸಲು ದುಡಿದವರು ಎಂದು ಸ್ಮರಿಸಿದರು. ವೃತ್ತಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ದುಡಿಮೆ ಮಾಡಿದಾಗ ಸಾಧಕರಾಗುವುದಕ್ಕೆ ಸಾಧ್ಯ. ಜ್ಞಾನÀದ ಜೊತೆಗೆ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ನುಡಿನಮನ ಸಲ್ಲಿಸಿದ ಮೈಸೂರಿನ ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕುಮಾರ ಬೆಳಲೆ ಮಾತನಾಡಿ, ಶ್ರೀಗಳು ಜ್ಞಾನವನ್ನು ಪಸರಿಸಿದ ದಿವ್ಯ ಮಹಾನುಭಾವರು. ಸುತ್ತೂರು ಸಂಸ್ಥಾನ ನಾಡಿಗೆ ಕಾರುಣ್ಯವನ್ನು ದಯಪಾಲಿಸಿ, ಅಹಿಂಸೆಯನ್ನು ಕಾಪಾಡಿಕೊಂಡು ಬರುತ್ತಿದೆ. ಪರಮಪೂಜ್ಯರು ತಾಯಿ ಹೃದಯದ ತಂದೆ. ಇವ ನಮ್ಮವ ಇವ ನಮ್ಮವ ಎಂಬAತೆ ದುರ್ಬಲರ ಬದುಕಿಗೆ ಬೆಳಕಾದವರು. ಕಾಯವನ್ನು ಸವೆಸಿ ಶಿಕ್ಷಣ ಕೇಂದ್ರಗಳು ಮತ್ತು ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದವರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಆರ್ ಹೆಚ್ ಪವಿತ್ರ ಮಾತನಾಡಿ, ಶಿಲೆ ನೂರಾರು ಪೆಟ್ಟುಗಳಿಂದ ಮೂರ್ತಿಯಾಗುವ ರೀತಿ ವಿದ್ಯಾರ್ಥಿನಿಯರು ಎದುರಾಗುವ ಕಷ್ಟಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಿ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಎನ್‌ಎಸ್‌ಎಸ್, ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ಅತಿಥಿ ಗಣ್ಯರು ಪ್ರತಿಭಾವನ್ವಿತ ವಿದ್ಯಾರ್ಥಿನಿಯರಿಗೆ ದತ್ತಿಪುರಸ್ಕಾರ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರೇಚಣ್ಣ , ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ ಗುರುಪಾದಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್.ಕುಮಾರ್, ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ.ಜೆ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಟಿ.ಎಸ್.ಗಿರೀಶ್, ಧಾತ್ರಿ ಉಪಸ್ಥಿತರಿದ್ದರು. ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.