
ಮೈಸೂರು; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಭಾಗವಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಸೇವ್ ಹಿಂದೂ ಟೆಂಪಲ್ಸ್ ವತಿಯಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಾನಿಗೊಳಗಾದ ಧಾರ್ಮಿಕ ವಿಗ್ರಹಗಳು ಹಾಗೂ ದೇವರ ಭಾವಚಿತ್ರಗಳನ್ನು ಗೌರವಯುತವಾಗಿ ಸಂಗ್ರಹಿಸಿ ನಿರ್ವಹಿಸುವ ವಿಶೇಷ ಉಪಕ್ರಮಕ್ಕೆ ಚಾಲನೆ ನೀಡಿದರು.
ಮನೆಗಳು ಹಾಗೂ ದೇವಾಲಯಗಳಲ್ಲಿ ಪೂಜೆಗೆ ಬಳಸಲಾಗುತ್ತಿದ್ದ ಹಾನಿಗೊಳಗಾದ, ಮುರಿದ, ಹಳೆಯ ಅಥವಾ ಇನ್ನು ಮುಂದೆ ಪೂಜಿಸಲು ಸಾಧ್ಯವಾಗದ ಧಾರ್ಮಿಕ ವಿಗ್ರಹಗಳು ಹಾಗೂ ದೇವರ ಭಾವಚಿತ್ರಗಳನ್ನು ಗೌರವಯುತವಾಗಿ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆ ಕಲ್ಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಈ ಉಪಕ್ರಮದ ಅಂಗವಾಗಿ ಹಾನಿಗೊಳಗಾದ ಅಥವಾ ಅಗತ್ಯವಿಲ್ಲದ ಧಾರ್ಮಿಕ ವಿಗ್ರಹಗಳು ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಸಂಗ್ರಹಣಾ ಪಂಜರಗಳನ್ನು ಅಳವಡಿಸಲಾಗಿದೆ. ಪವಿತ್ರ ಧಾರ್ಮಿಕ ವಸ್ತುಗಳನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ಎಸೆಯದಂತೆ ಅಥವಾ ಸೂಕ್ತವಲ್ಲದ ಸ್ಥಳಗಳಲ್ಲಿ ಬಿಡದಂತೆ ನೋಡಿಕೊಳ್ಳುವುದು ಹಾಗೂ ಅವುಗಳನ್ನು ಗೌರವಯುತವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಮೈಸೂರಿನ ಅಗ್ರಹಾರ ಸರ್ಕಲ್‌ನ 101 ಗಣಪತಿ ದೇವಸ್ಥಾನದ ಸಮೀಪದಲ್ಲಿ ಈ ಉಪಕ್ರಮದ ಮೊದಲ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಧಾರ್ಮಿಕ ನಂಬಿಕೆಗಳು, ದೇವಾಲಯಗಳು ಮತ್ತು ಸಂಪ್ರದಾಯಗಳು ಭಾರತದ ಸಾಂಸ್ಕöÈತಿಕ ಪರಂಪರೆ ಹಾಗೂ ಮೌಲ್ಯಗಳೊಂದಿಗೆ ಆಳವಾಗಿ ಬೆಸೆದುಕೊಂಡಿವೆ ಎಂದು ಹೇಳಿದರು.
ತಲೆತಲಾಂತರಗಳಿAದ ನಮ್ಮ ದೇವಾಲಯಗಳು, ಸಂಪ್ರದಾಯಗಳು ಹಾಗೂ ಧಾರ್ಮಿಕ ಆಚರಣೆಗಳು ನಮ್ಮ ಸಾಂಸ್ಕöÈತಿಕ ಅಸ್ಮಿತೆಯ ಅವಿಭಾಜ್ಯ ಅಂಗಗಳಾಗಿವೆ. ಒಂದು ವಿಗ್ರಹ ಅಥವಾ ಧಾರ್ಮಿಕ ಭಾವಚಿತ್ರ ಹಾನಿಗೊಳಗಾದಾಗ ಅಥವಾ ಅದನ್ನು ಇನ್ನು ಮುಂದೆ ಪೂಜಿಸಲು ಸಾಧ್ಯವಾಗದ ಸಂದರ್ಭದಲ್ಲಿ, ನಾವು ಅದನ್ನು ಪೂಜಿಸುವಾಗ ತೋರಿಸುವ ಅದೇ ಗೌರವದಿಂದ ಅದನ್ನು ನಿರ್ವಹಿಸುವುದು ಮುಖ್ಯವಾಗಿದೆ.”
ಹಳೆಯ ಅಥವಾ ಹಾನಿಗೊಳಗಾದ ವಿಗ್ರಹಗಳು ಮತ್ತು ದೇವರ ಭಾವಚಿತ್ರಗಳನ್ನು ಹೇಗೆ ಗೌರವಯುತವಾಗಿ ನಿರ್ವಹಿಸಬೇಕು ಎಂಬ ಬಗ್ಗೆ ಗೊಂದಲದಲ್ಲಿರುವ ಕುಟುಂಬಗಳಿಗೆ ಈ ಉಪಕ್ರಮವು ಪ್ರಾಯೋಗಿಕ ಪರಿಹಾರ ಒದಗಿಸುತ್ತದೆ ಎಂದು ಅವರು ಹೇಳಿದರು.
`ಇದು ಕೇವಲ ಹಳೆಯ ವಿಗ್ರಹಗಳು ಮತ್ತು ಭಾವಚಿತ್ರಗಳನ್ನು ಸಂಗ್ರಹಿಸುವ ಕಾರ್ಯಕ್ರಮವಲ್ಲ. ಧಾರ್ಮಿಕ ನಂಬಿಕೆಗೆ ಸಂಬAಧಿಸಿದ ವಸ್ತುಗಳನ್ನು ಗೌರವಯುತವಾಗಿ ನಿರ್ವಹಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಸೇವ್ ಹಿಂದೂ ಟೆಂಪಲ್ಸ್ ಸಂಸ್ಥೆಯು ಈ ರೀತಿಯ ವ್ಯವಸ್ಥಿತ ಸಂಗ್ರಹಣೆ ಮತ್ತು ಗೌರವಯುತ ನಿರ್ವಹಣೆಯ ವ್ಯವಸ್ಥೆಯನ್ನು ರೂಪಿಸಿರುವುದು ಶ್ಲಾಘನೀಯ.”
ಇಂತಹ ಉಪಕ್ರಮಗಳಿಗೆ ನಾಗರಿಕರು, ದೇವಾಲಯಗಳು ಮತ್ತು ಸಮುದಾಯ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಹೇಳಿದರು.