
ಮೈಸೂರು; ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂಬAಧ ವಿಶೇಷ ಆಂದೋಲನವನ್ನು ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇಂದು ವಿವಿಧ ಮತಗಟ್ಟೆ ವ್ಯಾಪ್ತಿಗಳಲ್ಲಿ ಮತದಾರರ ಪರಿಶೀಲನೆ ಹಾಗೂ ನೋಂದಣಿಗೆ ಸಂಬAಧಿಸಿದ ಕಾರ್ಯಗಳನ್ನು ನಡೆಸಲಾಯಿತು. .
ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ. 27ರ ಗಾಂಧೀನಗರದ ಮಹದೇವಪುರ ರಸ್ತೆಯಲ್ಲಿರುವ ಲಿಟಲ್ ಸಿಸ್ಟರ್ ಆಫ್ ದಿ ಪೂರ್ ವೃದ್ಧಾಶ್ರಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಮತದಾರರ ಪರಿಶೀಲನೆ ನಡೆಸಿದರು. ಈ ವೃದ್ಧಾಶ್ರಮವು ಮತಗಟ್ಟೆ ಸಂಖ್ಯೆ 137 ಹಾಗೂ 140ರ ವ್ಯಾಪ್ತಿಗೆ ಒಳಪಟ್ಟಿದ್ದು, ವೃದ್ಧಾಶ್ರಮದಲ್ಲಿ ಸುಮಾರು 25 ವೃದ್ಧರು ಆಶ್ರಯ ಪಡೆದಿದ್ದು, ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮತದಾನದ ಹಕ್ಕು ದೊರಕಿಸುವ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಪತ್ರ ಹಾಗೂ ಅಗತ್ಯ ಪೂರಕ ದಾಖಲೆಗಳನ್ನು ಪಡೆದು, ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವ ಸಂಬAಧ ಪರಿಶೀಲನಾ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಲಯಾಧಿಕಾರಿ ರತ್ನಾಂಬಿಕೆ, ಅಡಿಷನಲ್ ಇಆರ್ಒ ರುಕ್ಮಂಗದ್ ಜಿ.ಬಿ., ಬಿಎಲ್ಒ ಸೂಪರ್ ವೈಸರ್ಗಳಾದ ಕೃಷ್ಣ ಹಾಗೂ ರಾಕೇಶ್ ಮತ್ತು ಸಂಬAಧಿಸಿದ ಬಿಎಲ್ಒ ಗಳು ಉಪಸ್ಥಿತರಿದ್ದು, ನೋಟಿಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಅಲ್ಲದೇ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಸಹ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂಬAಧ ವಿಶೇಷ ಆಂದೋಲನವನ್ನು ನಡೆಸಲಾಯಿತು. ಮತಗಟ್ಟೆ ಸಂಖ್ಯೆ 11 ಮತ್ತು 14 ಕ್ಕೆ ಸಂಬAಧಿಸಿದ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬAಧಿಸಿದ ಅಗತ್ಯ ಕಾರ್ಯಗಳನ್ನು ನಿರ್ವಹಿಸಿದರು.
ವಿಶೇಷ ಆಂದೋಲನದ ಸಂದರ್ಭದಲ್ಲಿ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ಸಂಬAಧಿಸಿದAತೆ ಅಗತ್ಯ ದಾಖಲೆಗಳೊಂದಿಗೆ ಸಂಬAಧಿಸಿದ ಃಐಔಗಳನ್ನು ಸಂಪರ್ಕಿಸಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು.