
ಮೈಸೂರು: ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಆರೋಗ್ಯಕರ ಜೀವನಶೈಲಿಯ ವಿಧಾನಗಳ ಬಗ್ಗೆಯೂ ಜನರಲ್ಲಿ ಅರಿವು ಮೂಡಬೇಕಿದೆ ಎಂದು ಬಿಜೆಪಿ ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ. ಈ.ಸಿ. ನಿಂಗರಾಜ್ ಗೌಡ ಹೇಳಿದರು.
ಮೈಸೂರಿನ ಸಿದ್ಧಾರ್ಥ ಲೇಔಟ್‌ನಲ್ಲಿ ಆರ್ವಿಕಾ ವೆಲ್ನೆಸ್ ಸೆಂಟರ್‌ನ ಎರಡನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸುವುದು ಇಂದಿನ ಅಗತ್ಯವಾಗಿದೆ. ದೇಹಕ್ಕೆ ಸಮರ್ಪಕ ವಿಶ್ರಾಂತಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಮಾನಸಿಕ ನೆಮ್ಮದಿ ಆರೋಗ್ಯಕರ ಜೀವನದ ಪ್ರಮುಖ ಅಂಶಗಳಾಗಿವೆ. ಇದರ ಜೊತೆಗೆ ಸುರಕ್ಷಿತ ಹಾಗೂ ಸೂಕ್ತವಾದ ಪೂರಕ ಆರೋಗ್ಯ ವಿಧಾನಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಬೇಕು'' ಎಂದು ತಿಳಿಸಿದರು. ಪಾದದ ವಿವಿಧ ಭಾಗಗಳಿಗೆ ನಿರ್ದಿಷ್ಟ ರೀತಿಯಲ್ಲಿ ಒತ್ತಡ ನೀಡುವ ಮೂಲಕ ವಿಶ್ರಾಂತಿ ಮತ್ತು ಕ್ಷೇಮಾಭಿವೃದ್ಧಿಗೆ ನೆರವಾಗುವ ಫುಟ್ ರಿಫ್ಲೆಕ್ಸಾಲಜಿ ಕುರಿತು ಜನರಲ್ಲಿ ಅರಿವು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ರಿಫ್ಲೆಕ್ಸಾಲಜಿಯಲ್ಲಿ ಪಾದದ ನಿರ್ದಿಷ್ಟ ಭಾಗಗಳಿಗೆ ಒತ್ತಡ ನೀಡುವ ವಿಧಾನವನ್ನು ಅನುಸರಿಸಲಾಗುತ್ತದೆ. ಪಾದದ ಕೆಲವು ಬಿಂದುಗಳು ದೇಹದ ಇತರ ಭಾಗಗಳೊಂದಿಗೆ ಸಂಬAಧ ಹೊಂದಿವೆ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಈ ವಿಧಾನವು ಅಭಿವೃದ್ಧಿಗೊಂಡಿದೆ. ಆಧುನಿಕ ರಿಫ್ಲೆಕ್ಸಾಲಜಿಯ ಬೆಳವಣಿಗೆ 20ನೇ ಶತಮಾನದ ಆರಂಭದಲ್ಲಿ ಪ್ರಚಲಿತಕ್ಕೆ ಬಂದ `ಝೋನ್ ಥೆರಪಿ' ಪರಿಕಲ್ಪನೆ ಸೇರಿದಂತೆ ವಿವಿಧ ಪಾದ-ರಿಫ್ಲೆಕ್ಸ್ ತಂತ್ರಗಳೊAದಿಗೆ ಸಂಬAಧ ಹೊಂದಿದೆ ಎಂದು ಅವರು ವಿವರಿಸಿದರು. ಪಾದಗಳ ಆರೈಕೆಯೂ ಒಟ್ಟಾರೆ ಆರೋಗ್ಯದ ಒಂದು ಪ್ರಮುಖ ಭಾಗ. ದಿನನಿತ್ಯದ ಒತ್ತಡ, ದೀರ್ಘಕಾಲ ಕುಳಿತು ಕೆಲಸ ಮಾಡುವುದು ಹಾಗೂ ದೈಹಿಕ ಆಯಾಸದ ಸಂದರ್ಭದಲ್ಲಿ ವಿಶ್ರಾಂತಿ ಮತ್ತು ಆರಾಮವನ್ನು ಪಡೆಯಲು ಇಂತಹ ಪೂರಕ ಆರೋಗ್ಯ ವಿಧಾನಗಳು ಕೆಲವರಿಗೆ ಸಹಾಯಕವಾಗಬಹುದು” ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ಸೂಕ್ತ ವೈದ್ಯಕೀಯ ತಜ್ಞರ ಸಲಹೆ ಪಡೆದು ಅಗತ್ಯ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್. ದೀಪ್ತಿ, ಅಕ್ಷಯ್ ರಮೇಶ್, ಚಂದನ್, ಪ್ರದೀಪ್, ರಾಕೇಶ್ ಸೇರಿದಂತೆ ಹಲವರು ಹಾಜರಿದ್ದರು.