Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರತಿಭಟನೆಗೆ ಮಣಿದು ಟೋಲ್‌ನಲ್ಲಿ ಕನ್ನಡದ ನಾಮಫಲಕ ಹಾಕಿದ ಸಿಬ್ಬಂದಿ; ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಹೋರಾಟಗಾರರು


ಮೈಸೂರು; ಮೈಸೂರು-ನಂಜನಗೂಡು ರಾಷ್ಟಿçÃಯ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮೊದಲ ಆದ್ಯತೆ ನೀಡಿದ್ದನ್ನು ಖಂಡಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ನಡೆಸಲಾಗಿದ್ದ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ.
ಪ್ರತಿಭಟನೆಯಿಂದ ಎಚ್ಚೆತ್ತ ಟೋಲ್ ನಿರ್ವಹಣಾ ಸಿಬ್ಬಂದಿ ಕೂಡಲೇ ನಾಮಫಲಕವನ್ನು ಬದಲಾಯಿಸಿ, ಕನ್ನಡಕ್ಕೆ ಮೊದಲನೇ ಸ್ಥಾನ ನೀಡಿದ್ದಾರೆ.
ನಾಡಿನ ಹೆದ್ದಾರಿಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಆದರೂ ಟೋಲ್ ಸಿಬ್ಬಂದಿ ಕನ್ನಡವನ್ನು ಕಡೆಗಣಿಸಿದ್ದರು. ಈ ವಿಷಯವನ್ನು ಗಮನಿಸಿದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಹೋರಾಟಕ್ಕೆ ಮಣಿದ ಟೋಲ್ ಆಡಳಿತ ಮಂಡಳಿ ಇಂದು ಹೊಸದಾಗಿ ಕನ್ನಡದಲ್ಲಿ ಮೊದಲು ನಮೂದಿಸಿರುವ ನಾಮಫಲಕವನ್ನು ಅಳವಡಿಸಿದೆ. ಇದರಿಂದ ಸಂತಸಗೊAಡ ಸಂಘಟನೆಯ ಪದಾಧಿಕಾರಿಗಳು ಸ್ಥಳದಲ್ಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯದ್ಯಕ್ಷ ಚಾ.ಗು ನಾಗರಾಜ್, ಮತ್ತು ಮೈಸೂರು ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ “ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಇದು ನಮ್ಮ ಹಕ್ಕು. ಕನ್ನಡವನ್ನು ಕಡೆಗಣಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿರುವುದು ಕನ್ನಡಿಗರ ಜಯವಾಗಿದೆ” ಎಂದು ಹೇಳಿದರು.
ಈ ಸಂಭ್ರಮಾಚರಣೆಯಲ್ಲಿ ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷ ಸಂತೋಷ್, ಚಾಮರಾಜನಗರ ಜಿಲ್ಲಾಧ್ಯಕ್ಷ ದೇವರಾಜ್, ಗ್ರಾಮಾಂತರ ಗೌರವಾಧ್ಯಕ್ಷರಾದ ಸಿಂಧುವಳ್ಳಿ ಶಿವಕುಮಾರ್, ವೆಂಕಟೇಶ್ ಕೆರೆಹಳ್ಳಿ, ಗ್ರಾಮಾಂತರ ಅಧ್ಯಕ್ಷ ರವಿ ಏ, ಮಧು ಕುಮಾರ್, ಗಿರೀಶ್, ಮಣಿ, ಯುವ ಘಟಕದ ಅಧ್ಯಕ್ಷ ಕೀರ್ತಿ ಕುಮಾರ್ ಹಾಗೂ ಉಮೇಶ್, ಮಹಿಳಾ ಘಟಕದ ಪದಾಧಿಕಾರಿಗಳಾದ ಅನಿತಾ ಆರ್, ವೀಣಾ, ದೀಪಾ, ಲಕ್ಷಿ÷್ಮ, ರಾಣಿ, ಹೇಮಾ, ಹಾಗೂ ಸುನಿಲ್, ಕಿಟ್ಟಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.