Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಶೇಷ ಅಧಿವೇಶನದಲ್ಲಿ ಬರ ನಿರ್ಮೂಲನೆಗೆ ರಾಜ್ಯ ಸರ್ಕಾರ ಯೋಜನೆಗಳನ್ನು ಜಾರಿ ಮಾಡಲಿ ; ಬಡಗಲಪುರ ನಾಗೇಂದ್ರ

ಮೈಸೂರು; ರಾಜ್ಯದಲ್ಲಿ ಉದ್ಭವಿಸಿರುವ ಬರದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ, ಆದರೆ ಈ ಅವಿವೇಶನದಲ್ಲಿ ಬರದ ಸಂಕಷ್ಟಕ್ಕೆ ಸ್ಪಂದಿಸುವ0ತಹ ಯೋಜನೆಗಳು ಜಾರಿಯಾಗದಿದ್ದರೆ ರಾಜ್ಯದಲ್ಲಿ ಉದ್ಭವಿಸಿರುವ ಜೀಕರ ಬರದ ಅಧಿವೇಶನ ಆರ್ಥಹೀನವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜ್ಯ ಸರ್ಕಾರವೇ ಹೇಳುವಂತೆ ಕಳೆದ 40 ವರ್ಷದ ನಂತರ ಬರಗಾಲ ರಾಜ್ಯದಲ್ಲಿ ಉದ್ಭವಿಸಿದೆ. ಕೆರೆ-ಕಟ್ಟೆ ಜಲಮೂಲಗಳು ಬತ್ತವೆ. ರೈತರ ಹಾಕಿದ್ದ ಪಸಲುಗಳು ಕರಕಲಾಗಿ ಸಂಪೂರ್ಣ ನಷ್ಟವಾಗಿವೆ. ಅಂತರ್ಜಲ ಬತ್ತಿಹೋಗಿ ತೋಟಗಾರಿಕೆ ಫಸಲು ಬಾಗಿವೆ. ಒಳಗಿವೆ. ಜಾನುವಾರುಗಳು ಮೇವು ಮತ್ತು ನೀರಿಲ್ಲದೆ ಬಡಕಲಾಗಿವೆ. ಅವರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟಗಳು ಎದುರಾಗಿದ್ದರೂ ರಾಜ್ಯ ಸರ್ಕಾರ ಬ1 ತಾಲ್ಲೂಕುಗಳನ್ನು ಬರ ಎಂದು ಘೋಷಿಸಿ ಮತ್ತೆಷ್ಟು ತಾಲ್ಲೂಕುಗಳನ್ನು ಈ ಪಟ್ಟಿಗೆ ಸೇರಿಸುವುದಾಗಿ ಕಾಲ ನೂಕುತ್ತಿದೆ. ಸಂಪೂರ್ಣ ನಿರ್ಲಕ್ಷ÷್ಯ ತೋರಿ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ. ಓಬಿರಾಯನ ಕಾಲದ ಮಾನದಂಡದ ನೆಪ ಹೇಳುತ್ತಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಈ ಮಾನದಂಡವನ್ನು ಬಿಟ್ಟು ರಾಜ್ಯ ಸರ್ಕಾರ ತನ್ನದೇ ಸಂಪನ್ಮೂಲಗಳ ಮೂಲಕ ಬರ ಪರಿಹಾರಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತರ ಕೃಷಿ ಸಾಲ ಮನ್ನಾ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50ರ ಅನುಪಾತದಲ್ಲಿ ಸಾಲ ಮನ್ನಾ ಮಾಡಬೇಕು,
ಬ್ಯಾಂಕ್‌ಗಳು ಸಾಲ ವಸೂಲಿ ಮಾಡುವುದಕ್ಕೆ ತಡೆವೊಡ್ಡಬೇಕು, ಕೃಷಿಗೆ ಪ್ರಥಮ ಆಧ್ಯತೆ ನೀಡಿ ಸರ್ಕಾರ ಒಪ್ಪಿಕೊಂಡಿರುವAತೆ ಕನಿಷ್ಠ 7 ಗಂಟೆಗಳ ಕಾಲ ವಿದ್ಯುತ್ ಅಮ್ಮ ಕೃಷಿ ಪಂಪ್ ಸೆಟ್ ಗಳಿಗೆ ಸರಬರಾಜು ಮಾಡಬೇಕು. ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು.
ಬೆಳೆ ವಷ್ಟಕ್ಕೆ ವೈಜ್ಞಾನಿಕ ಪರಿಹಾರವನ್ನು ತುಂಬಿಕೊಡಬೇಕು. ವಿಮಾ ಕಂಪನಿಗಳು ಸಂಪೂರ್ಣ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಜನ-ಜಾನುವಾರುಗಳಿಗೆ ತೋಂದರೆಯಾಗದAತೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಮೇವು ಪೂರೈಸಬೇಕು. ಜನರಿಗೆ ಹೆಚ್ಚಿನ ಪಡಿತರವನ್ನು ಒದಗಿಸಬೇಕು. ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಛತ್ತ, ಜೋಳ, ರಾಗಿ ಬಾಕಿಯನ್ನು ಕೂಡಲೇ ರೈತರ ಖಾತೆಗೆ ಹಾಕಬೇಕು. ವಾಸಸ್ಥಳದ ಹತ್ತಿರದಲ್ಲೇ ಉದ್ಯೋಗ ದೊರಕಿಸಬೇಕು. ಮೈಸೂರು ದಸರವನ್ನು ಪರಳವಾಗಿ ಆಚರಿಸಬೇಕು ಕಂಬಳ ಆಯೋಜನೆಯನ್ನು ನಿಲ್ಲಿಸಬೇಕು. 10) ಶಾಶ್ವತವಾಗಿ ಬರ ಉಚ್ಚಾಟಿಸಲು ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ವಿಶೇಷ ಅಧಿವೇಶನದ ತೀರ್ಮಾನವನ್ನು ಸಂಘವು ಕಾದು ನೋಡುತ್ತಿದೆ. ಈ ಅಧಿವೇಶನದಲ್ಲಿ ಬರ ಎದುರಿಸುವ ಬಗ್ಗೆ ಸಂಘವು ನೀಡಿರುವ ಹಕ್ಕೊತ್ತಾಯಗಳಿಗೆ ಸ್ಪಂದಿಸದಿದ್ದರೆ ಸೆ. 28 ರಂದು ರಾಜ್ಯದ್ಯಾಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದು ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು ಮತ್ತು ಮುಂದುವರೆದು ನಿರಂತರವಾ ಜನಪ್ರತಿನಿದಿಗಳು ಕಂಡಲ್ಲಿ ಅವರುಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.