
ಮೈಸೂರು : ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಂದ ಉದ್ಘಾಟಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಸ್ಟೀಸ್ ಬಿ.ವಿ.ನಾಗರತ್ನ ಅವರು ಈ ದೇಶಕ್ಕೆ ಮೂವರು ನ್ಯಾಯಮೂರ್ತಿಗಳನ್ನು ಕೊಡುಗೆಯಾಗಿ ನೀಡಿದ ಸಕ್ಕರೆ ನಾಡು ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಇಂಗಲಗುಪ್ಪೆ ಗ್ರಾಮದವರಾಗಿದ್ದು, ಅವರ ತಂದೆ ದಿವಂಗತ ಇ.ಎಸ್.ವೆಂಕಟರಾಮಯ್ಯ ಅವರೂ ಸಹ ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗದ್ದವರು, ಸಹೋದರ ಇಂದ್ರೇಶ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಎಂದರು.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗುವುದು. ಮೈಸೂರು ದಸರಾ ಕೇವಲ ಒಂದು ಸಾಂಸ್ಕöÈತಿಕ ಉತ್ಸವವಷ್ಟೇ ಅಲ್ಲ, ಅದು ಸ್ತಿçÃಶಕ್ತಿಯ ವಿಜಯೋತ್ಸವದ ಅತಿದೊಡ್ಡ ಸಂಕೇತವಾಗಿದೆ. ನವರಾತ್ರಿಯ ಒಂಬತ್ತು ದಿನಗಳು ಮತ್ತು ಹತ್ತನೇ ದಿನದ ವಿಜಯದಶಮಿಯು ಜಗನ್ಮಾತೆಯ ಆರಾಧನೆಗೆ ಮೀಸಲಾಗಿದೆ. ದೇವಿಯ ಆರಾಧನೆಯಿಂದ ಮೊದಲ್ಗೊಂಡು ಇಂದಿನ ಆಧುನಿಕ `ಮಹಿಳಾ ದಸರಾ’ದವರೆಗೆ, ದಸರಾ ಹಬ್ಬದ ಆಚರಣೆಗೂ ಮಹಿಳೆಯರಿಗೂ ಅವಿನಾಭಾವ ಹಾಗೂ ಐತಿಹಾಸಿಕ ಸಂಬAಧವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಡಿವೈಎಸ್ಪಿ ಎಂ.ಎಸ್.ನAಜಪ್ಪ, ರೈತಸಂಘ ಮೈಸೂರು ಜಿಲ್ಲಾ ಮಹಿಳಾ ಅಧ್ಯಕ್ಷೆ ದ್ರಾಕ್ಷಾ ಶಿವರಾಮ್, ಮಂಡ್ಯ ಜಿಲ್ಲಾ ಕರವೇ ಅಧ್ಯಕ್ಷ ಡಿ.ಅಶೋಕ್, ಮುಖಂಡರಾದ ಕಮಾಲ್, ಮುಜೀಬ್, ಸಂತೋಷ್ ಕುಮಾರ್ ಇದ್ದರು.