Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಕ್ತ ಪರೀಕ್ಷೆಯಿಂದ ಅಲ್ಜೆಮರ್ಸ್ ಕಾಯಿಲೆಯ ಆರಂಭಿಕ ಪತ್ತೆಗೆ ಹೊಸ ಆಶಾಕಿರಣ


ಮೈಸೂರು; ಅಲ್ಜೆಮರ್ಸ್ ಕಾಯಿಲೆ ಹಾಗೂ ಡಿಮೆನ್ಷಿಯಾದ ಆರಂಭಿಕ ಹಂತವನ್ನು ಗುರುತಿಸುವಲ್ಲಿ ಇತ್ತೀಚಿನ ರಕ್ತ ಆಧಾರಿತ ಬಯೋಮಾರ್ಕರ್ ಪರೀಕ್ಷೆಗಳು ಮಹತ್ವದ ಬೆಳವಣಿಗೆಯಾಗಿವೆ ಎಂದು ಅಲ್ಜೆöÊಮರ್ಸ್ ಅಂಡ್ ರಿಲೇಟೆಡ್ ದಿಸೋರ್ಡರ್ಸ್ ಸೊಸೈಟಿ ಆಫ್ ಇಂಡಿಯಾದ ಮೈಸೂರು ಘಟಕದ ಅಧ್ಯಕ್ಷ ಡಾ. ಹನುಮಂತಾಚಾರ್ ಜೋಶಿ ತಿಳಿಸಿದರು.
ಸೋಮವಾರ ನಗರದ ರೋಟರಿ ಮೈಸೂರಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಅಲ್ಜೆöÊಮರ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಜೆöÊಮರ್ಸ್ ಕಾಯಿಲೆಯಲ್ಲಿ ಮೆದುಳಿನಲ್ಲಿ ಚಿmಥಿಟoiಜ ಠಿಟಚಿques ಮತ್ತು ಣಚಿu ಣಚಿಟಿgಟes ಉಂಟಾಗುತ್ತವೆ. ಈ ಬದಲಾವಣೆಗಳು ನೆನಪಿನ ಶಕ್ತಿ ಮತ್ತು ಚಿಂತನಾ ಸಾಮರ್ಥ್ಯ ಕುಸಿಯುವ ಮುನ್ನವೇ ಆರಂಭವಾಗಬಹುದು. ರಕ್ತದಲ್ಲಿನ ಠಿ-ಣಚಿu217 ಮಟ್ಟವು ಇಂತಹ ಬದಲಾವಣೆಗಳಿಗೆ ಸಂಬAಧಿಸಿರುವುದರಿAದ, ಸರಳ ರಕ್ತದ ಮಾದರಿಯ ಮೂಲಕ ಕಾಯಿಲೆಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ಹೊಸ ಅವಕಾಶ ದೊರೆತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾರಾಜ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಮುರಳಿ, ಮರಗುಣಿತನ ತುಂಬಾ ಅಪಾಯಕಾರಿಯಾಗಿದೆ. ಹಲವಾರು ಹಿರಿಯರು ಚಿಕ್ಕಪುಟ್ಟ ಕಾರ್ಯಗಳನ್ನು ಮಾಡಲು ಕಷ್ಟಪಡುತ್ತಾರೆ. ವ್ಯಕ್ತಿಗೆ ತನ್ನ ಇರುವಿಕೆಯ ನೆನಪೆ ಇಲ್ಲದಿದ್ದರೆ ಜೀವನ ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದರು. ಅತಿಥಿಗಳಾಗಿದ್ದ ಡಾ. ಎಸ್.ಪಿ ಯೋಗಣ್ಣ ಮಾತನಾಡಿ, ಈಗೀಗ ಡಿಮನ್ಸಿಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ದೈನಂದಿನ ಚಟುವಟಿಕೆಗಳಲ್ಲಿ ನಾವು ಸಾಮಾಜಿಕ ಜಾಲತಾಣಗಳು, ಮೊಬೈಲ್ ಫೋನ್‌ನ್ನು ಅತಿಯಾಗಿ ಉಪಯೋಗಿಸುತ್ತಿರುವುದು ಕಾರಣವಾಗುತ್ತಿದೆ. ಆರಂಭಿಕ ಹಂತದಲ್ಲೇ ಇದನ್ನು ಗುರಿತಿಸದಿದ್ದರೆ, ಇದೊಂದು ಸಾಮಾಜಿಕ ಪಿಡುಗಾಗುವ ಸಾಧ್ಯತೆಗಳಿದೆ ಎಂದು ಹೇಳಿದರು.