
ಮೈಸೂರು; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ, ಇಂದು ಮೈಸೂರು ಜಿಲ್ಲಾ ನಗರ ಹಾಗೂ ಗ್ರಾಮಾಂತರ ಮಹಿಳಾ ಮೋರ್ಚಾ ವತಿಯಿಂದ ಪಕ್ಷದ ಕಚೇರಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ಸೃಜನಶೀಲತೆಯನ್ನು ರಂಗೋಲಿಯ ಮೂಲಕ ಅನಾವರಣಗೊಳಿಸಿದರು. ಬಣ್ಣ, ಬಣ್ಣದ ರಂಗೋಲಿಯಲ್ಲಿ ಚಿತ್ತಾಕರ್ಷಕವಾದ ನಾನಾ ಬಗೆಯ, ನಾನಾ ಆಕಾರದ ರಂಗೋಲಿಗಳನ್ನು ಬಿಡಿಸಿದರು.
ಈ ಸಂದರ್ಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಎನ್. ಸುಬ್ಬಣ್ಣ , ನಗರ ಹಾಗೂ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಮೋನಿಕಾ. ಎಂ ಮತ್ತು ನಳಿನಿ, ಪ್ರಧಾನ ಕಾರ್ಯದರ್ಶಿಗಳಾದ ಕಾವೇರಿ, ರಶ್ಮಿ, ನಂದಿನಿ, ಸವಿತಾ ಚೌಹಾಣ್, ಲಕ್ಷಿ÷್ಮÃ ಕಿರಣ್, ಹೇಮಾ ನಂದೀಶ್, ಪ್ರಫುಲ್ಲ, ಶಾಂತಮ್ಮ, ಸೋಮಸುಂದರ್, ರುದ್ರಮೂರ್ತಿ, ಪಾಪಣ್ಣ, ವಸಂತ್ ಕುಮಾರ್, ಚಂದ್ರಕಲಾ, ಪುಟ್ಟಮಣಿ, ಸರ್ವಮಂಗಳ, ಸರಸ್ವತಿ ಪ್ರಸಾದ್, ರೇಷ್ಮಾ ಸೇರಿದಂತೆ ಜಿಲ್ಲಾ ಹಾಗೂ ಮಂಡಲ ಮಟ್ಟದ ಎಲ್ಲಾ ಪದಾಧಿಕಾರಿಗಳು, ಮಹಿಳಾ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.