
ಕೆ.ಆರ್.ನಗರ ;
ಮಕ್ಕಳು ಉನ್ನತವ್ಯಾಸಂಗ ಪಡೆದರೆ ಉತ್ತಮ ರ‍್ಯಾಂಕ್ ಗಳಿಸಿದರೆ ಔತಣಕೂಟ ಮಾಡಿ ಕುಣಿದು ಕುಪ್ಪಳಿಸುವುದು ಸಹಜ. ಆದರೆ ಇಲ್ಲೊಬ್ಬ ಪೋಷಕರು ತಮ್ಮ ಮಗಳು ಎಂಬಿಬಿಎಸ್‌ನಲ್ಲಿ ಉಚಿತ ಸೀಟ್ ಪಡೆದ ಸಂತಸದಲ್ಲಿ ಇಲ್ಲಿನ ಕೇಂದ್ರ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುವಮೂಲಕ ಜ್ಞಾನದಿಂದ ಜ್ಞಾನ ಹಂಚುವ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣದ ವಿನಾಯಕ ಬಡಾವಣೆಯ ಜಾ.ದಳ ಯುವಮುಖಂಡ ರಶ್ಮಿಹರ್ಷಿತ್‌ರವರ ಪುತ್ರಿ ಭಾಂದವ್ಯ ಪ್ರಸಕ್ತಸಾಲಿನಲ್ಲಿ ಬೆಂಗಳೂರಿನ ಈಸ್ಟ್ಪಾಯಿಂಟ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ನಲ್ಲಿ ಗರ‍್ನಮೆಂಟ್ ಸೀಟ್ ಪಡೆದಿದ್ದಾರೆ. ಇದರಿಂದ ಸಂತಸಗೊAಡ ರಶ್ಮಿಹರ್ಷಿತ್ ದಂಪತಿಗಳು ತಮ್ಮ ಮಗಳ ಸಾಧನೆಗೆ ಮೆಚ್ಚಿ ಸಂತಸಪಟ್ಟು ಪಾರ್ಟಿಮಾಡದೆ ಅದೇ ಹಣದಲ್ಲಿ ಸಾವಿರಾರು ರೂಪಾಯಿಗಳ ಪುಸ್ತಕಗಳನ್ನು ಇಲ್ಲಿನ ಕೇಂದ್ರ ಗ್ರಂಥಾಲಯಕ್ಕೆ ಉಚಿತವಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಮಗಳು ಎಂಬಿಬಿಎಸ್ ಪರೀಕ್ಷೆ ಪಾಸಾಗಿರುವ ಬಗ್ಗೆ ಪುಸ್ತಕಗಳನ್ನು ಹಂಚುವ ಮೂಲಕ ಸಂತಸ ಹಂಚಿಕೊAಡಿರುವ ಪೋಷಕರು, ನಮ್ಮ ಮಗಳಂತೆ ಇನ್ನಿತರ ಮಕ್ಕಳು ಸಹ ಪುಸ್ತಕಗಳನ್ನು ಓದಿ ಉನ್ನತ ವಿದ್ಯಾಭ್ಯಾಸ ಪಡೆದು ಉನ್ನತಹಂತಕ್ಕೆ ಹೋಗುವಂತಾಗಲಿ ಎಂಬುದು ತಮ್ಮ ಮಹದಾಸೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕಪರೀಕ್ಷೆ ಎದುರಿಸುವ ಹಲವಾರು ಉಚಿತಪುಸ್ತಕಗಳನ್ನು ಗ್ರಂಥಪಾಲಕಿ ವಾಣಿಯವರಿಗೆ ಓದುಗ ವಿದ್ಯಾರ್ಥಿಗಳೊಂದಿಗೆ ಹಸ್ತಾಂತರಿಸಿದರು. ಕಂಪ್ಯೂಟರ್, ಸ್ಪರ್ಧಾತ್ಮಕ ಪ್ರಶ್ನೋತ್ತರ, ಭಾರತಸಂವಿಧಾನ, ಕನ್ನಡವ್ಯಾಕರಣ, ಇಂಗ್ಲೀಷ್‌ಕಲಿಕೆ ಸೇರಿದಂತೆ ಸಾವಿರಾರು ರೂಪಾಯಿಗಳ ಹಲವಾರು ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುವಮೂಲಕ ಜ್ಞಾನದಿಂದ ಜ್ಞಾನ ಹಂಚುವ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂಧರ್ಭದಲ್ಲಿ ಜಾ.ದಳ ವಕ್ತಾರ ಕೆ.ಎಲ್.ರಮೇಶ್, ಗ್ರಂಥಪಾಲಕಿ ವಾಣಿ ಹಾಗೂ ಗ್ರಂಥಾಲಯದಲ್ಲಿದ್ದ ಹಿರಿಯ ಓದುಗರು, ವಿದ್ಯಾರ್ಥಿಗಳು ರಶ್ಮಿಹರ್ಷಿತ್ ದಂಪತಿಗಳ ಆಲೋಚನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾವಿರಾರು ರೂಪಾಯಿ ವೆಚ್ಚಮಾಡಿ ಸಂತಸಕೂಟ ಮಾಡುವ ಬದಲು ಇತರ ಮಕ್ಕಳ ಓದಿಗೆ ಅನುಕೂಲವಾಗುವಂತೆ ಪುಸ್ತಕಗಳನ್ನು ವಿತರಣೆ ಮಾಡಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.