Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿ ; ಪಿ.ಪ್ರಶಾಂತ್ ಗೌಡ

ಪಿರಿಯಾಪಟ್ಟಣ : ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಮೈಸೂರಿನ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ರವರು ಪಟ್ಟಣದ ಶ್ರೀ ಮಸಣಿಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಪ್ರಾರಂಭಿಸಿದರು.

ಮತಯಾಚಿಸಿ ಮಾತನಾಡಿದ ಅವರು ಪಿರಿಯಾಪಟ್ಟಣ ತಾಲ್ಲೂಕು ನನ್ನ ಹುಟ್ಟುರಾಗಿದ್ದು, ನನಗೆ ಸಮುದಾಯದ ಸಂಘಟನೆ ಮಾಡಲು ಅವಕಾಶ ಕಲ್ಪಿಸಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನೆಲೆಯಾದ ಸ್ಥಳವಾಗಿದೆ. ನಾನು ತಾಲ್ಲೂಕು ಹಾಗೂ ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ, ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರ ಮಾಡಿದ್ದೇನೆ. ನಾಡಿನ ಹೋರಾಟಗಾರರಾದ ಕೆಂಪೇಗೌಡ ಜಯಂತಿಯ ಜವಾಬ್ದಾರಿ ಹೊತ್ತು ಸಮುದಾಯದ ಮುಖಂಡರ ಸಹಕಾರದಿಂದ ಯಶಸ್ವಿಗೊಳಿಸಿದ್ದೇನೆ. ಇದಲ್ಲದೆ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದು ಸಮುದಾಯದ ಸೇವೆ ಮಾಡಲು ನನಗೆ ಒಮ್ಮತದಿಂದ ಮತದಾನ ಮಾಡಿ ಜಯಶಾಲಿಯಾಗಿಸಬೇಕು ಎಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಮೈಮುಲ್ ಮಾಜಿ ನಿರ್ದೇಶಕ ಪ್ರಕಾಶ್, ಮಾಜಿ ಪುರಸಭೆ ಸದಸ್ಯ ಪಿ.ಸಿ.ಕೃಷ್ಣ, ಮುಖಂಡರಾದ ದಿನೇಶ್, ಕೃಷ್ಣ ಗೌಡ, ಪಿರಿಯಾಪಟ್ಟಣ ಒಕ್ಕಲಿಗ ಸಂಘದ ಅಧ್ಯಕ್ಷ ಆನಂದ ಬಸಲಾಪುರ, ಕಾನೂನು ಸಲಹೆಗಾರ ಕೆ ಡಿ ಸಂದೀಪ್, ಉಪಾಧ್ಯಕ್ಷ ಚಂದ್ರೆಗೌಡ, ಜಗದೀಶ್, ಕಾರ್ಯದರ್ಶಿ ಮೋಹನ್ ಕಿರಂಗೂರು, ಮನು ಬೆಳ್ತುರು,ಮಹೇಶ್ ಹೆಮ್ಮಿಗೆ, ಅರುಣ್, ಮನು ಕಗ್ಗುoಡಿ ಅರುಣ್, ಕಿರಣ್, ಮೋಹನ್, ಹರೀಶ್ ಹುಣಸವಾಡಿ ಸೇರಿದಂತೆ ಇತರರಿದ್ದರು.