
ಮೈಸೂರು; ಕಬ್ಬಿನ ಎಫ್‌ಆರ್‌ಪಿ ದರವನ್ನು ಅ. 10 ರ ಒಳಗೆ ಏರಿಕೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ರಾಜ್ಯ ಕಬ್ಬು ಬೆಳೆಗಾರ ಸಂಘ ಪದಾಧಿಕಾರಿಗಳು ನವದೆಹಲಿಯ ಕಚೇರಿಯಲ್ಲಿ ಇದೇ ತಿಂಗಳ 3 ರಂದು ಭೇಟಿ ಮಾಡಿ, ಚರ್ಚಿಸಿ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ. ಕನಿಷ್ಟ 10.25 ಇಳುವರಿಗೆ 4500ರೂಗೆ 11.25 ಇಳುವರಿಗೆ 4850.ರೂಗೆ ನಂತರದ 12.25 ಇಳುವರಿಗೆ 5200 ರೂ 13.25 ಇಳುವರಿಗೆ 5550 ರೂ ನಿಗದಿ ಮಾಡಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ಬದಲಾಯಿಸಬೇಕು ಎಂಬುದು ರಾಜ್ಯ ಕಬ್ಬು ಬೆಳೆಗಾರ ಸಂಘ ಒತ್ತಾಯಿಸಿದೆ. ಅಕ್ಟೋಬರ್ 10 ಒಳಗೆ ಏರಿಕೆ ಮಾಡದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕಬ್ಬು ಸಾಗಾಣಿಕೆ ಕಟಾವು ಕೂಲಿ 800 ಎಂದು ನಿಗದಿ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚು ಹಣ ಕಡಿತ ಮಾಡಿದರೆ ರೈತರು ಜಿಲ್ಲಾಧಿಕಾರಿಗೆ ದೂರು ಕೊಡಿ.
ರಾಜ್ಯ ಸರ್ಕಾರ ತಮಿಳುನಾಡು ಮಾದರಿಯಲ್ಲಿ ಎಸ್‌ಎಪಿ ದರ ಹೆಚ್ಚುವರಿ 800 ರೂ ನಿಗದಿ ಮಾಡಬೇಕು ಎಂದು ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಆಹಾರ ಸಚಿವ ರಿಜ್ವಾನ್ ಹರ್ಷದ್ ರವರಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಬರಪಿಡಿತ ಪ್ರದೇಶದ ರೈತರ ಸಾಲ ನವೀಕರಣ ಮಾಡಬೇಕು, ಹೊಸ ಸಾಲ ವಿತರಣೆ ಯೋಜನೆ ನರ್ಬಡ್ ನಲ್ಲಿ ಹಳೆಯ ಯೋಜನೆ ರೈತರಿಗೆ ಸಹಕಾರಿಯಲ್ಲ, ಬರಗಾಲ ಪಿಡಿತ ಪ್ರದೇಶದ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. 177 ತಾಲೂಕುಗಳಲ್ಲಿ ಬರ ಘೋಷಣೆಯಾದರೂ, ಇನ್ನೂ ಬೆಳೆ ನಷ್ಟ ಬರ ಪರಿಹಾರ ಸಮೀಕ್ಷೆ ನಡೆಸಿಲ್ಲ. ಸರ್ಕಾರ ರೈತರ ವಿಷಯದಲ್ಲಿ ಈ ರೀತಿ ನಾಟಕ ಆಡಬಾರದು, ಬೆಳೆ ನಷ್ಟ ಪರಿಹಾರ ಕೂಡಲೇ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ ಎನ್ನುವ ಸರ್ಕಾರ, ಮೋಜಿಗಾಗಿ ದಸರಾ ಹೆಸರಿನಲ್ಲಿ ವಿದ್ಯುತ್ ದುರ್ಬಳಕೆ ಮಾಡುತ್ತ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು.
ನಕಲಿ ಔಷಧಿ ಮಾರಾಟ ಜಾಲ, ನಕಲಿ ಔಷಧ ತಯಾರಿ ಭಯಾನಕವಾದದ್ದು. ಜನರ ಜೀವದ ಜೊತೆ ಚೆಲ್ಲಾಟ ಆಡುವಂತದ್ದು. ದೇಶಾದ್ಯಂತ ಜಾಲ ಹರಡಿರುವುದು ಕಾಣುತ್ತಿದೆ. ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ತಪ್ಪಿತಸ್ಥರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬು ಹಾಗೂ ಕೃಷಿ ಉತ್ಪನ್ನಗಳಿಂದ ಎvಥನಾಲ್ ಉತ್ಪಾದನೆ ರೈತರಿಗೆ ಸಹಕಾರಿ ಕುರಿತು ಮುಂಬೈನಲ್ಲಿ ಸೆ. 27 ಹಾಗೂ 28ರಂದು ರಾಷ್ಟç ಮಟ್ಟದ ಸಮಾವೇಶ ನಡೆಸಲಾಗುತ್ತಿದೆ. ಕರ್ನಾಟಕದಿಂದ 30 ರೈತ ಮುಖಂಡರು ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ರಾಜ್ಯ ಸಂಚಾಲಕ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ ಉಪಸ್ಥಿತರಿದ್ದರು.