Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಂಡಿಎ 50:50 ಅಕ್ರಮ, ರದ್ದಾದ ನಿವೇಶನಗಳ ಪಟ್ಟಿ ಪ್ರಕಟಿಸಿ

*ಎಂಡಿಎ ಆಯುಕ್ತರು, ಜಿಲ್ಲಾಧಿ ಕಾರಿಗಳಿಗೆ ಸರಕಾರ ಸೂಚನೆ*ಶಾಸಕ ಟಿ.ಎಸ್. ಶ್ರೀವತ್ಸ ಅವರ ಪತ್ರಕ್ಕೆ ಸರಕಾರದ ಸ್ಪಂದನೆ ಮೈಸೂರು: ಇಲ್ಲಿನ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರ ಮನವಿಗೆ ಸ್ಪಂದಿಸಿರುವ ಸರಕಾರ ಮೈಸೂರು ಅಭಿವೃದ್ಧಿ ಪ್ರಾಧಿ ಕಾರದಲ್ಲಿ (ಎಂಡಿಎ) ಶೇ.50:50 ಅನುಪಾತದಡಿ ರದ್ದುಗೊಂಡಿರುವ ನಿವೇಶನಗಳ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಸಾರ್ವಜನಿಕರ ನೆರವಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು ಎಂದು ಎಂಡಿಎ ಆಯುಕ್ತರು ಹಾಗೂ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.ಶಾಸಕ ಟಿ.ಎಸ್.ಶ್ರೀವತ್ಸ ಅವರು ನಗರಾಭಿವೃದ್ಧಿ…

Read More

ಅ. 10 ರ ಒಳಗೆ ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ; ಕುರುಬೂರು ಶಾಂತಕುಮಾರ್

ಮೈಸೂರು; ಕಬ್ಬಿನ ಎಫ್‌ಆರ್‌ಪಿ ದರವನ್ನು ಅ. 10 ರ ಒಳಗೆ ಏರಿಕೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ರಾಜ್ಯ ಕಬ್ಬು ಬೆಳೆಗಾರ ಸಂಘ ಪದಾಧಿಕಾರಿಗಳು ನವದೆಹಲಿಯ ಕಚೇರಿಯಲ್ಲಿ ಇದೇ ತಿಂಗಳ 3 ರಂದು ಭೇಟಿ ಮಾಡಿ, ಚರ್ಚಿಸಿ ಮನವಿ ಪತ್ರ ನೀಡಿ…

Read More

ಜೀ ಕನ್ನಡದ ವಾಹಿನಿ ನೀಡುವ ಸಾಧಕರ ಪ್ರಶಸ್ತಿಗೆ ಭಾಜನರಾದ ಪ್ರಾಂಶುಪಾಲರಾದ ಸೋಮಶೇಖರ್ 

 ಪಿರಿಯಾಪಟ್ಟಣ : ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ರವರಿಗೆ ಜೀ ಕನ್ನಡ ವಾಹಿನಿಯು ಸಾಧಕರ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಆರೋಗ್ಯ ಸೇವೆ, ಸಮಾಜ ಸೇವೆ, ಕೃಷಿ ಮತ್ತು ಪರಿಸರ ಸಂರಕ್ಷಣೆ, ಕ್ರೀಡೆ, ಉದ್ಯಮ ಹಾಗೂ ನವೋದ್ಯಮ, ಕಲೆ ಮತ್ತು ಸಂಸ್ಕೃತಿ, ಆಡಳಿತ ಮತ್ತು ಸಾರ್ವಜನಿಕ) ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರತಿ ವರ್ಷವೂ ಗೌರವಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ಈ ಬಾರಿ ಕೂಡ ಅನೇಕ ಸಾಧಕರನ್ನು ಗುರುತಿಸಿ ಗೌರವಿಸಿದೆ …

Read More

ದಸರಾ ಕವಿಗೋಷ್ಠಿ ಉದ್ಘಾಟನೆಗೆ ವೈದೇಹಿಗೆ ಆಹ್ವಾನ

ಮೈಸೂರು: ಈ ಬಾರಿ ನಡೆಯಲಿರುವ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಟೋಬರ್ 13ರಿಂದ 17ರ ವರೆಗೆ ನಡೆಯುವ ಕವಿಗೋಷ್ಠಿಯನ್ನು ಕನ್ನಡದ ಮಹತ್ವದ ಕವಯಿತ್ರಿ ವೈದೇಹಿ ಉದ್ಘಾಟಿಸಲಿದ್ದಾರೆ. ಈ ಸಂಬAಧ ಮಣಿಪಾಲದಲ್ಲಿರುವ ಅವರ ನಿವಾಸಕ್ಕೆ ತೆರಳಿ ಸೆಪ್ಟೆಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ದಸರಾ ಕವಿಗೋಷ್ಠಿ ಸಮಿತಿ ಅಧಿಕೃತವಾಗಿ ಆಹ್ವಾನಿಸಲಿದೆ.ಈ ಸಂದರ್ಭದಲ್ಲಿ ಕವಿಗೋಷ್ಠಿ ಸಮಿತಿ ಕಾರ್ಯಾಧ್ಯಕ್ಷರೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರೂ ಆದ…

Read More

ಪೌರಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ; ಪುರುಷೋತ್ತಮ

 ವರದಿ ಜಿ ಬಂಗಾರು  ಚಾಮರಾಜನಗರ ; ಪೌರಕಾರ್ಮಿಕರು ದಿನ ನಿತ್ಯ ಕರ್ತವ್ಯದಲ್ಲಿ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರೀಸಬೇಕು ಎಂದು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಪ್ರಾಧಿಕಾರ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದರು  ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ  ಪೌರಕಾರ್ಮಿಕರ ದಿನಾಚರಣೆ ಹಾಗೂ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ  ಪೌರಕಾರ್ಮಿಕರಿಗೆ ವರ್ಷಕ್ಕೊಮ್ಮೆ 7,000 ರೂಗಳು ಅವರವರ ಖಾತೆಗೆ ಜಮಾ ಆಗುತ್ತದೆ ಹಾಗೂ ಇದರ ಜೊತೆ ಮಲೆ ಮಾದೇಶ್ವರ ಪ್ರಾಧಿಕಾರ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ…

Read More

ಪ್ರಚೋದನೆ ಕೊಟ್ಟಿದ್ದು ಇನ್ಸ್ ಪೆಕ್ಟರ್, ಆದರೆ ನನ್ನ ಮೇಲೆ ಎಫ್‌ಐಆರ್ ಹಾಕುತ್ತಿದ್ದಾರೆ: ಮಾಜಿ ಸಂಸದ ಪ್ರತಾಪ್ ಸಿಂಹ

ಮೈಸೂರು ; ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಸಂಬAಧ ಜನರಿಗೆ ಪ್ರಚೋಧನೆ ಕೊಟ್ಟಿದ್ದು, ಅಲ್ಲಿನ ಇನ್ಸ್ ಪೆಕ್ಟರ್, ಅವರ ಮೇಲೆ ಕೇಸ್ ಹಾಕದೆ ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.ತಮ್ಮ ಮೇಲೆ 2ನೇ ಎಫ್ ಐಆರ್ ದಾಖಲಾಗಿರುವ ಕುರಿತು ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಚೋದನೆ ನೀಡಿದ್ದು ಇನ್ಸ್ಪೆಕ್ಟರ್ ಆಗಿದ್ದರೂ ನನ್ನ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಅಟ್ರಾಸಿಟಿ ಕೇಸ್ ಹಾಕುವಂತಹ ಮಾತು ನಾನು ಏನು ಮಾತನಾಡಿದ್ದೇನೆ? ಎಂದು ಪ್ರಶ್ನಿಸಿದರು.ಸಂವಿಧಾನದ ಅಡಿಯಲ್ಲೇ…

Read More

ಮಾದಕ ವಸ್ತುಗಳು ಮತ್ತು ವಿಧಿ ವಿಜ್ಞಾನ ಸಾಕ್ಷö್ಯ ಕುರಿತು ಅರಿವು ಮೂಡಿಸಿದ ವಿಶೇಷ ಉಪನ್ಯಾಸ

ಮೈಸೂರು; ಪ್ರಸ್ತುತ ದಿನಗಳಲ್ಲಿ ಜಗತ್ತಿನದ್ಯಾಂತ, ವಿಶೇಷವಾಗಿ ಯುವಪೀಳಿಗೆಯಲ್ಲಿ ಮಾದಕ ದ್ರವ್ಯಗಳ ಬಳಕೆ ಒಂದು ಗಂಭೀರ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದು ಮೈಸೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ರಾಸಾಯನಶಾಸ್ತç ಮತ್ತು ಮಾದಕ ವಸ್ತುಗಳ ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಚಂದ್ರಶೇಖರ್ ಹೆಚ್.ಬಿ. ಹೇಳಿದರು.ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಅಪರಾಧಶಾಸ್ತç ಮತ್ತು ವಿಧಿವಿಜ್ಞಾನ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಂಯುಕ್ತಾಶ್ರಯದಲ್ಲಿ “ಓಚಿಡಿಛಿoಣiಛಿs-ಈಡಿom ಆಡಿug ಂbuse ಣo ಇviಜeಟಿಛಿe” ಎಂಬ ಶೀರ್ಷಿಕೆಯಯಲ್ಲಿ ಏರ್ಪಡಿಸಿದ್ದ ವಿಶೇಷ…

Read More

ಇನ್ನರ್‌ವ್ಹೀಲ್‌ಜಿಲ್ಲೆ 318ರಿಂದ ‘57ನೇ ಜಿಲ್ಲಾ ರಜನಿಗಂಧರ‍್ಯಾಲಿ’

ಮೈಸೂರು; ಇನ್ನರ್‌ವ್ಹೀಲ್‌ಕ್ಲಬ್‌ಆಫ್ ಮೈಸೂರು ವೆಸ್ಟ್ ವತಿಯಿಂದ ಇನ್ನರ್ ವೀಲ್ ಜಿಲ್ಲೆ 318ರ 57ನೇ ಜಿಲ್ಲರ‍್ಯಾಲಿ ‘ರಜನಿಗಂಧಾ” ಅನ್ನು ಸೆ.27ರಂದು ಮೈಸೂರಿನಕುವೆಂಪುನಗರದ ಜಯಮ್ಮಗೋವಿಂದೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ರ‍್ಯಾಲಿ ಅಧ್ಯಕ್ಷರಾದ ಇನ್ನರ್‌ವ್ಹೀಲ್‌ಕ್ಲಬ್‌ಆಫ್ ಮೈಸೂರು ವೆಸ್ಟ್ನ ಪಿಡಿಸಿ ಶಿ ಸುಮಾಕೃಷ್ಣ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ರಜನಿ ಭಟ್ ವಹಿಸಲಿದ್ದು, ರಾಮನ್ಸ್ ಕಲಾ ಪ್ರತಿಷ್ಠಾನದ ಜ್ಞಾನೇಶ್ವರ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ….

Read More

ದೇವಾಲಯ ಕಟ್ಟದಿದ್ದರು,ವಿದ್ಯಾಲಯ ಕಟ್ಟಬೇಕು; ಸದ್ಗುರು ಶ್ರೀ ಮಧುಸೂಧನ ಸಾಯಿ

ನಂಜನಗೂಡು:ದೇವಾಲಯ ಕಟ್ಟದಿದ್ದರು, ವಿದ್ಯಾಲಯ ಕಟ್ಟಬೇಕು ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಒನ್ ವರ್ಲ್ಡ್ಒನ್ ಫ್ಯಾಮಿಲಿ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ಮೇಲೆ ಸದ್ಗುರುವಿನ ಸಾನ್ನಿಧ್ಯದಿಂದ ಮೋಕ್ಷಪಡೆಯುವುದು ಜೀವನದ ಮಹಾಭಾಗ್ಯವಾಗಿದೆ.ಸುತ್ತೂರಿನ ಪರಮಪೂಜ್ಯ ಶ್ರೀಗಳವರು ಮಾತೃ ಹೃದಯಿಗಳು.ಪೂಜ್ಯರ ಆಶೀರ್ವಾದ ಪಡೆದಿರುವ ನೀವುಗಳೇ ಧನ್ಯರು,ಅದನ್ನುಸಮರ್ಪಕವಾಗಿ ಬಳಸಿಕೊಂಡು ಬದುಕಿನಲ್ಲಿ ಸಾಧನೆಯೆಡೆಗೆನಡೆಯಬೇಕು ಎಂದು ತಿಳಿಸಿದರು.ಅಲ್ಲಮಪ್ರಭುಗಳು ಹೇಳಿದಂತೆ ದೀಪ, ಬತ್ತಿಯಿದ್ದರೂ,ತೈಲವಿಲ್ಲದೆ ಹಣತೆಯು ಹೇಗೆ ಪ್ರಕಾಶಿಸುವುದಿಲ್ಲವೊ,ಹಾಗೆ ಅಂತರAಗದ ಭಕ್ತಿಜಾಗೃತವಾಗದಿದ್ದರೆ, ಸಾಧನೆಯ…

Read More

ಹಾಸ್ಯ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಆಯುಸ್ಸಿನ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ

ಮೈಸೂರು; ಹಾಸ್ಯ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಆಯುಸ್ಸಿನ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ ಎಂದುಆದಿಚು0ಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಗೌಡ ಹೇಳಿದರು.ನಗರದ ವಿಹಾನ್ ಹೆರಿಟೇಜ್ ಹಾಲ್ ನಲ್ಲಿ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜವತಿಯಿಂದ ಏರ್ಪಡಿಸಲಾಗಿದ್ದ ” ಹಾಸ್ಯ ಕಡಲು ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ. ಹೇಮಾ ನಂದೀಶ್ ಮಾತನಾಡಿ, ನಾವು ಎಲ್ಲೇ ಇದ್ದರೂ ನಮ್ಮ ಬೇರುಗಳು ಎಲ್ಲಾ ಕಡೆ ಹರಡಬೇಕು. ಒಕ್ಕಲಿಗರು ಒಗ್ಗಟ್ಟಾಗಿ ಬೇರೂರ ಬೇಕು ಸಂಘ ಯಾವುದಾದರೇನು ಸಂಘಟನೆ ಮುಖ್ಯ ಎಂದು…

Read More