
ಮೈಸೂರು ; ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಸಂಬAಧ ಜನರಿಗೆ ಪ್ರಚೋಧನೆ ಕೊಟ್ಟಿದ್ದು, ಅಲ್ಲಿನ ಇನ್ಸ್ ಪೆಕ್ಟರ್, ಅವರ ಮೇಲೆ ಕೇಸ್ ಹಾಕದೆ ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಮೇಲೆ 2ನೇ ಎಫ್ ಐಆರ್ ದಾಖಲಾಗಿರುವ ಕುರಿತು ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಪ್ರಚೋದನೆ ನೀಡಿದ್ದು ಇನ್ಸ್ಪೆಕ್ಟರ್ ಆಗಿದ್ದರೂ ನನ್ನ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಅಟ್ರಾಸಿಟಿ ಕೇಸ್ ಹಾಕುವಂತಹ ಮಾತು ನಾನು ಏನು ಮಾತನಾಡಿದ್ದೇನೆ? ಎಂದು ಪ್ರಶ್ನಿಸಿದರು.
ಸಂವಿಧಾನದ ಅಡಿಯಲ್ಲೇ ಮಾತನಾಡುತ್ತೇನೆ ಹಾಗೂ ಕಾನೂನಾತ್ಮಕವಾಗಿಯೇ ನಡೆದುಕೊಳ್ಳುತ್ತೇನೆ . ಅಂಬೇಡ್ಕರ್ ಎಲ್ಲರಿಗೂ ಸೇರಿದವರು, ನೀಲಿ ಶಾಲು ಸಮಾನತೆಯ ಸಂಕೇತ .
ದಲಿತ ಸಂಘಟನೆಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು, “ನಾನು ದಲಿತ ವಿರೋಧಿಯಲ್ಲ. ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ವಿಷಯಾಂತರ ಮಾಡದೆ ವಿಚಾರವನ್ನು ನೋಡಬೇಕು. ಒಳ್ಳೆಯ ವಿಚಾರಕ್ಕೆ ದನಿ ಎತ್ತಿದರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ” ಎಂದು
ಹೇಳಿದರು.