
ಮೈಸೂರು; ಪ್ರಸ್ತುತ ದಿನಗಳಲ್ಲಿ ಜಗತ್ತಿನದ್ಯಾಂತ, ವಿಶೇಷವಾಗಿ ಯುವಪೀಳಿಗೆಯಲ್ಲಿ ಮಾದಕ ದ್ರವ್ಯಗಳ ಬಳಕೆ ಒಂದು ಗಂಭೀರ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದು ಮೈಸೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ರಾಸಾಯನಶಾಸ್ತç ಮತ್ತು ಮಾದಕ ವಸ್ತುಗಳ ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಚಂದ್ರಶೇಖರ್ ಹೆಚ್.ಬಿ. ಹೇಳಿದರು.
ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಅಪರಾಧಶಾಸ್ತç ಮತ್ತು ವಿಧಿವಿಜ್ಞಾನ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಂಯುಕ್ತಾಶ್ರಯದಲ್ಲಿ “ಓಚಿಡಿಛಿoಣiಛಿs-ಈಡಿom ಆಡಿug ಂbuse ಣo ಇviಜeಟಿಛಿe” ಎಂಬ ಶೀರ್ಷಿಕೆಯಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ವೃತ್ತಿಪರ ಅನುಭವದ ಆಧಾರದ ಮೇಲೆ ಮಾದಕ ವಸ್ತುಗಳ ಸ್ವರೂಪ, ಮಾದಕ ವ್ಯಸನ, ಮಾದಕ ವಸ್ತುಗಳ ಪತ್ತೆ ಮತ್ತು ಗುರುತಿಸುವಿಕೆ ಹಾಗೂ ಅಪರಾಧ ತನಿಖೆಯಲ್ಲಿ ವಿಧಿ, ವಿಜ್ಞಾನ ಸಾಕ್ಷö್ಯಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ನೈಸರ್ಗಿಕ ಮತ್ತು ಕೃತಕ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಅರಿವು ಮತ್ತು ಜವಾಬ್ದಾರಿಯುತ ಮನೋಭಾವವನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ಭಾರತದಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಾಗಾಟ ಮತ್ತು ಬಳಕೆಯನ್ನು ತಡೆಯಲು ಇರುವಂತಹ ಎನ್.ಡಿ.ಪಿ.ಎಸ್ ಕಾಯ್ದೆಯ ಬಗ್ಗೆ ತಿಳಿಸಿ, ಈ ಕಾಯ್ದೆ ಅಡಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಲಾಗುತ್ತದೆ. ಇದರಿಂದ ನಂಬಿಕೊAಡಿರುವ ಕುಟುಂಬದವರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಬಿ. ಆರ್. ಜಯಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಇಓ ಡಾ. ಎಸ್.ಆರ್. ರಮೇಶ್, ಅಪರಾಧಶಾಸ್ತç ವಿಭಾಗದ ಮುಖ್ಯಸ್ಥರಾದ ಸಹನಾ ಜಿ.ಎಸ್, ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ಧರಾಮ.ಸಿ , ದೀಕ್ಷಾ ಮತ್ತು ಅಧ್ಯಾಪಕರು, ಅಧ್ಯಾಪಕೇತರರು ಉಪಸ್ಥಿತರಿದ್ದರು.