Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇನ್ನರ್‌ವ್ಹೀಲ್‌ಜಿಲ್ಲೆ 318ರಿಂದ ‘57ನೇ ಜಿಲ್ಲಾ ರಜನಿಗಂಧರ‍್ಯಾಲಿ’


ಮೈಸೂರು; ಇನ್ನರ್‌ವ್ಹೀಲ್‌ಕ್ಲಬ್‌ಆಫ್ ಮೈಸೂರು ವೆಸ್ಟ್ ವತಿಯಿಂದ ಇನ್ನರ್ ವೀಲ್ ಜಿಲ್ಲೆ 318ರ 57ನೇ ಜಿಲ್ಲರ‍್ಯಾಲಿ ‘ರಜನಿಗಂಧಾ” ಅನ್ನು ಸೆ.27ರಂದು ಮೈಸೂರಿನಕುವೆಂಪುನಗರದ ಜಯಮ್ಮಗೋವಿಂದೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ರ‍್ಯಾಲಿ ಅಧ್ಯಕ್ಷರಾದ ಇನ್ನರ್‌ವ್ಹೀಲ್‌ಕ್ಲಬ್‌ಆಫ್ ಮೈಸೂರು ವೆಸ್ಟ್ನ ಪಿಡಿಸಿ ಶಿ ಸುಮಾಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ರಜನಿ ಭಟ್ ವಹಿಸಲಿದ್ದು, ರಾಮನ್ಸ್ ಕಲಾ ಪ್ರತಿಷ್ಠಾನದ ಜ್ಞಾನೇಶ್ವರ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯಾದ್ಯಂತ ಇನ್ನರ್‌ವ್ಹೀಲ್ ಸದಸ್ಯರು ಭಾಗವಹಿಸಲಿರುವ ಈ ರ‍್ಯಾಲಿಯು ಸ್ನೇಹ, ಸೌಹಾರ್ದ, ಸೇವೆ ಮತ್ತು ನಾಯಕತ್ವದ ಸಂಭ್ರಮಾಚರಣೆಯಾಗಿದೆ. ಕಾರ್ಯಕ್ರಮದಲ್ಲಿ ಪ್ರೇರಣಾದಾಯಕ ಭಾಷಣಗಳು, ಸಾಂಸ್ಕöÈತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು, ಆಟಗಳು, ಸೌಹಾರ್ದ ಚಟುವಟಿಕೆಗಳು ಮತ್ತುಅತ್ಯುತ್ತಮ ಸೇವಾ ಚಟುವಟಿಕೆಗಳ ಗುರುತಿಸುವಿಕೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷೆ ನೇತ್ರಾವತಿ ಪ್ರಸಾದ್, ಕಾರ್ಯದರ್ಶಿ ಸವಿತಾ ಶ್ರೀಕಾಂತ್, ಸಾಯಿಲತಾ, ಶಶಿಕಲಾ ಸುರೇಶ್, ಶಾಲಿನಿಚಾರಿ ಉಪಸ್ಥಿತರಿದ್ದರು.