
ನಂಜನಗೂಡು:ದೇವಾಲಯ ಕಟ್ಟದಿದ್ದರು, ವಿದ್ಯಾಲಯ ಕಟ್ಟಬೇಕು ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಒನ್ ವರ್ಲ್ಡ್ಒನ್ ಫ್ಯಾಮಿಲಿ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ಮೇಲೆ ಸದ್ಗುರುವಿನ ಸಾನ್ನಿಧ್ಯದಿಂದ ಮೋಕ್ಷಪಡೆಯುವುದು ಜೀವನದ ಮಹಾಭಾಗ್ಯವಾಗಿದೆ.ಸುತ್ತೂರಿನ ಪರಮಪೂಜ್ಯ ಶ್ರೀಗಳವರು ಮಾತೃ ಹೃದಯಿಗಳು.ಪೂಜ್ಯರ ಆಶೀರ್ವಾದ ಪಡೆದಿರುವ ನೀವುಗಳೇ ಧನ್ಯರು,ಅದನ್ನುಸಮರ್ಪಕವಾಗಿ ಬಳಸಿಕೊಂಡು ಬದುಕಿನಲ್ಲಿ ಸಾಧನೆಯೆಡೆಗೆನಡೆಯಬೇಕು ಎಂದು ತಿಳಿಸಿದರು.
ಅಲ್ಲಮಪ್ರಭುಗಳು ಹೇಳಿದಂತೆ ದೀಪ, ಬತ್ತಿಯಿದ್ದರೂ,ತೈಲವಿಲ್ಲದೆ ಹಣತೆಯು ಹೇಗೆ ಪ್ರಕಾಶಿಸುವುದಿಲ್ಲವೊ,ಹಾಗೆ ಅಂತರAಗದ ಭಕ್ತಿಜಾಗೃತವಾಗದಿದ್ದರೆ, ಸಾಧನೆಯ ಮಾರ್ಗಕಠಿಣವಾಗುತ್ತದೆ ಎಂದರು.
ಶ್ರೀಮಠವು ನಾಡಿನ ಸಂಸ್ಕೃತಿ, ಸಾಹಿತ್ಯ ಹಾಗೂ ಆಧ್ಯಾತ್ಮಿಕತೆಯ ಪ್ರಸಾರಕ್ಕಾಗಿ ಶ್ರಮಿಸುತ್ತಿದೆ.ದೇಶದಾದ್ಯಂತಹಲವಾರು ಸಂಸ್ಥೆಗಳನ್ನು ತೆರೆದುಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಗಳನ್ನು ಒದಗಿಸುತ್ತಿರುವುದು ಪ್ರಶಂಸನೀಯಎAದು ಹೇಳಿದರು.
ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳಲ್ಲಿ ನಮ್ಮ ದೇಶವು ಜಗತ್ತಿನಲ್ಲಿಯೇ ಹಿರಿದಾದ ಸ್ಥಾನವನ್ನು ಪಡೆದಿದೆ.ಸಾಧು ಸಂತರು,ಋಷಿ ಮುನಿಗಳ ತಪಸ್ಸಿನ ಫಲದಿಂದ ಶಾಂತಿಯ ನೆಲೆಬೀಡಾಗಿದೆ ಎಂದು ಹೇಳಿದರು. ಸದ್ಗುರು ಶ್ರೀ ಮಧುಸೂದನ ಸಾಯಿಯವರ‘ಒಂದೇಜಗತ್ತು ಒಚಿದೇ ಕುಟುಂಬ’ಎನ್ನುವಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡರೆ, ಯುದ್ಧಮುಕ್ತ ಪ್ರಪಂಚವನ್ನುಕಾಣಬಹುದು.ಜಗತ್ತಿನಲ್ಲಿ ಜನರು ಶಾಂತಿ, ಸೌರ್ಹಾದತೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಅವರ ಸೇವೆಯು ಅನನ್ಯ.ಆರೋಗ್ಯ, ಶಿಕ್ಷಣ,ಗ್ರಾಮೀಣಾಭಿವೃದ್ಧಿ,ಸಮಾಜಕ್ಕೆ ಅಗತ್ಯವಾದ ಇತರಎಲ್ಲ ಕ್ಷೇತ್ರಗಳಿಗೂ ಅವರು ನೀಡುತ್ತಿರುವ ಕೊಡುಗೆಗಳು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸುತ್ತೂರಿನ ಉಚಿತ ವಸತಿ ಶಾಲೆಯಲ್ಲಿ ವಿವಿಧ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್ನಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್.ಎಸ್. ರಾಘವೇಂದ್ರರಾವ್ರವರು ನೀಡುವ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ. ಶಶಿಧರ್ ಪ್ರಸಾದ್, ಸತ್ಯಸಾಯಿಸಂಸ್ಥೆಯ ಗೋವಿಂದ ರೆಡ್ಡಿ, ಗಿರಿಧರ್ ನಾಯಕ್, ಜಯರಾಮ್ ರೆಡ್ಡಿ, ಸುನೀಲ್, ಪತ್ರಕರ್ತ ಮೋಹನ್, ಜೆಎಸ್ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ಸತ್ಯಸಾಯಿಸಂಸ್ಥೆಯ ಕಾರ್ಯಕರ್ತರುಗಳು, ಸುತ್ತೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.