Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಾಸ್ಯ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಆಯುಸ್ಸಿನ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ


ಮೈಸೂರು; ಹಾಸ್ಯ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಆಯುಸ್ಸಿನ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ ಎಂದು
ಆದಿಚು0ಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಗೌಡ ಹೇಳಿದರು.
ನಗರದ ವಿಹಾನ್ ಹೆರಿಟೇಜ್ ಹಾಲ್ ನಲ್ಲಿ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜವತಿಯಿಂದ ಏರ್ಪಡಿಸಲಾಗಿದ್ದ ” ಹಾಸ್ಯ ಕಡಲು ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ. ಹೇಮಾ ನಂದೀಶ್ ಮಾತನಾಡಿ, ನಾವು ಎಲ್ಲೇ ಇದ್ದರೂ ನಮ್ಮ ಬೇರುಗಳು ಎಲ್ಲಾ ಕಡೆ ಹರಡಬೇಕು. ಒಕ್ಕಲಿಗರು ಒಗ್ಗಟ್ಟಾಗಿ ಬೇರೂರ ಬೇಕು ಸಂಘ ಯಾವುದಾದರೇನು ಸಂಘಟನೆ ಮುಖ್ಯ ಎಂದು ಹೇಳಿದರು.
ಇತರೆ ಒಕ್ಕಲಿಗ ಸಂಘದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಮುಂಬರುವ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಸ್ಪರ್ಧೆಯ ಆಕಾಂಕ್ಷಿ ಯಾದ ಯಾಚೆನಹಳ್ಳಿ ಹೇಮಂತ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಜೂನಿಯರ್ ಪ್ರಾಣೇಶ್ ಎಂದೆ ಪ್ರಖ್ಯಾತರಾದ ಬೆಮೆಲ್ ಕಂಪಲಪ್ಪ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಈ ವೇಳೆ ಪದಾಧಿಕಾರಿಗಳಾದ ಲೀಲಾ ಗಂಗಾಧರ್, ಸುವರ್ಣ ಗಣೇಶ , ವಿಜಯ ಮಂಜುನಾಥ್, ಲತಾ ರಮೇಶ, ಗೀತಾ ಕುಮಾರ್, ಶಶಿ ಉದಯಕುಮಾರ್, ಮಂಗಳ ಮಂಜುನಾಥ್, ಶೋಭಾ ಉಪಸ್ಥಿತರಿದ್ದರು. ಇತರೆ ಒಕ್ಕಲಿಗ ಸಂಘದ ಅಧ್ಯಕ್ಷರುಗಳಾದ ಸುವರ್ಣ ರಾಜ್, ಸವಿತಾ, ದೇವತಿ, ಕೃಷ್ಣಪ್ಪ ಮತ್ತು ಸಣ್ಣಲಿಂಗೇಗೌಡ ಉಪಸ್ಥಿತರಿದ್ದರು.