
ಮೈಸೂರು; ಐದು ಮಂದಿ ಭೂ ಸಂತ್ರಸ್ತರಿಗೆ ಕಾಯಂ ಉದ್ಯೋಗದ ಪತ್ರ, ಉಳಿದ 32 ಜನರಿಗೆ ದಸರಾ ನಂತರ ಪ್ರೊಬೇಷನರಿ ಉದ್ಯೋಗ ನೀಡುವ ಭರವಸೆ ಜಿಲ್ಲಾಧಿಕಾರಿಗಳು ನೀಡಿದ ಹಿನ್ನಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಜನಾಂದೋಲನಗಳ ಮಹಾ ಮೈತ್ರಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ತಾತ್ಕಾಲಿಕ ರೈತರು ಹಿಂಪಡೆದರು.
ಸೆ. 22ರಂದು ಹೋರಾಟವು 16ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಚೇತನ್, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಮೇಲುಸ್ವಾಮಿ ಮತ್ತು ಮೋಹನ್, ಜನಾಂದೋಲನಗಳ ಮಹಾ ಮೈತ್ರಿಯ ಉಗ್ರ ನರಸಿಂಹೇಗೌಡ, ಹಿರಿಯ ರೈತ ಹೋರಾಟಗಾರರಾದ ಬೊಕ್ಕಳ್ಳಿ ನಂಜುAಡಸ್ವಾಮಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಮೈಸೂರು ಜಿಲ್ಲಾ ಅಧ್ಯಕ್ಷ ಬಸವರಾಜು ಹೆಚ್.ಎಂ., ಭೂ ಸಂತ್ರಸ್ತರಾದ ಅನಿತ್ ಕುಮಾರ್, ಮಹೇಶ್, ಮಂಜುನಾಥ್ ಹಾಗೂ ರೈತ ಮಹಿಳೆಯರಾದ ರಾಜಮ್ಮ, ಪ್ರೀತಿ, ಗೌರಮ್ಮ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಒಟ್ಟು 42 ಭೂ ಸಂತ್ರಸ್ತ ರೈತ ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡುವ ವಿಚಾರವಾಗಿ ಆಗಸ್ಟ್ 11ರಂದು ನಡೆದ ಸಭೆಯಲ್ಲಿ ಐದು ಮಂದಿಗೆ ಕಾಯಂ ಉದ್ಯೋಗ ನೀಡಿದ್ದರು. ಅಲ್ಲದೆ, ಆಗಸ್ಟ್ ಅಂತ್ಯದೊಳಗೆ ಮತ್ತೊಂದು ಸಭೆ ನಡೆಸಿ, ಐದು ಮಂದಿಗೆ ಕಾಯಂ ಉದ್ಯೋಗದ ನೇಮಕಾತಿ ಪತ್ರ ನೀಡಿ, ಉಳಿದ 32 ಮಂದಿಗೆ ಪ್ರೊಬೇಷನರಿ ಉದ್ಯೋಗ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು.
ಆದರೆ, ನಿಗದಿಯಾಗಿದ್ದ ಸಭೆ ನಡೆಯದ ಹಿನ್ನೆಲೆಯಲ್ಲಿ ರೈತರು ಅಸಮಾಧಾನಗೊಂಡು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಜನಾಂದೋಲನಗಳ ಮಹಾ ಮೈತ್ರಿಯ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸಿದ್ದರು. ಈ ಹೋರಾಟವು 16ನೇ ದಿನಕ್ಕೆ ಕಾಲಿಟ್ಟಿತ್ತು.
16ನೇ ದಿನದ ಹೋರಾಟದ ಸಂದರ್ಭದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಐದು ಭೂ ಸಂತ್ರಸ್ತರಿಗೆ ಕಾಯಂ ಉದ್ಯೋಗದ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು. ಉಳಿದ 32 ಜನರಿಗೆ ಪ್ರೊಬೇಷನರಿ ಉದ್ಯೋಗ ನೀಡಲು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಎಂ.ಡಿ. ಅವರು ಒಪ್ಪಿಗೆ ಸೂಚಿಸಿದ್ದು, ಈ ಪ್ರಕ್ರಿಯೆಗಾಗಿ 10 ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷಿö್ಮಕಾಂತ ರೆಡ್ಡಿ ತಿಳಿಸಿದರು.
ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದಸರಾ ಮುಗಿದ ಬಳಿಕ ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಿ, ಉಳಿದ 32 ಜನರಿಗೆ ಪ್ರೊಬೇಷನರಿ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾಂದೋಲನಗಳ ಮಹಾ ಮೈತ್ರಿಯ ಉಗ್ರ ನರಸಿಂಹೇಗೌಡ, `ಕಳೆದ ಮೂರು ವರ್ಷಗಳಿಂದ ಇದೇ ರೀತಿಯಲ್ಲಿ ಭರವಸೆಗಳನ್ನು ನೀಡುತ್ತಾ ರೈತರನ್ನು ವಂಚಿಸುತ್ತಾ ಬರಲಾಗಿದೆ. ಮತ್ತೆ ರೈತರನ್ನು ವಂಚಿಸುವ ಕೆಲಸ ನಡೆಯಬಾರದು. ಈಗ ನೀಡಿರುವ ಭರವಸೆಯಂತೆ ಅಕ್ಟೋಬರ್ ತಿಂಗಳಲ್ಲಿಯೇ ಉಳಿದ ರೈತ ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು” ಎಂದು ಒತ್ತಾಯಿಸಿದರು.
ಹಿರಿಯ ರೈತ ಹೋರಾಟಗಾರರಾದ ಬೊಕ್ಕಳ್ಳಿ ನಂಜುAಡಸ್ವಾಮಿ ಮಾತನಾಡಿ, ಇಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆ ಕುರಿತು ಸಭೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯವರು ನ್ಯಾಯಾಲಯಕ್ಕೆ ತೆರಳಿ ಇಂಜAಕ್ಷನ್ ಆದೇಶ ಪಡೆದು, ರೈತರನ್ನು ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಮಾಡಿ, ಸುಮಾರು 300 ಪುಟಗಳ ನೋಟಿಸ್ ನೀಡಿದ್ದಾರೆ. ಇದು ಯಾವ ರೀತಿಯಲ್ಲಿ ಸರಿ?” ಎಂದು ಪ್ರಶ್ನಿಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಮೈಸೂರು ಜಿಲ್ಲಾ ಅಧ್ಯಕ್ಷ ಬಸವರಾಜು ಹೆಚ್.ಎಂ. ಮಾತನಾಡಿ, “ಜಿಲ್ಲಾಧಿಕಾರಿಗಳು ನೀಡಿರುವ ಭರವಸೆಯ ಮೇಲೆ ಇಂದು ನಾವು 16 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಆದರೆ ಮತ್ತೆ ಮಾತು ತಪ್ಪಿ ನೀಡಿರುವ ಭರವಸೆಯನ್ನು ಈಡೇರಿಸದಿದ್ದರೆ, ರೈತರೊಂದಿಗೆ ಮತ್ತಷ್ಟು ಉಗ್ರವಾದ ಹೋರಾಟವನ್ನು ಪುನಃ ಆರಂಭಿಸಲಾಗುವುದು” ಎಂದು ಎಚ್ಚರಿಸಿದರು.