Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೋರು ಮಳೆಯ ಹಿನ್ನಲೆಯಲ್ಲಿ ಮಹೇಂದ್ರ ಆನೆಗೆ ಮರದ ಅಂಬಾರಿ ತಾಲೀಮು ಮೊಟಕು
ಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಗಜಪಡೆಗೆ ಮೂರನೇ ಹಂತದ ತಾಲೀಮು ಶುರುವಾಗಿದ್ದು, ಶುಕ್ರವಾರ ಸುರಿದ ಜೋರು ಮಳೆಯಿಂದಾಗಿ ಮಹೇಂದ್ರ ಆನೆಯ ಮರದ ಅಂಬಾರಿ ತಾಲೀಮನ್ನು ಮೊಟಕುಗೊಳಿಸಲಾಯಿತು. .
ಇಷ್ಟು ದಿನ ಕಾಲ ಭಾರ ಹೊರುವ ತಾಲೀಮು ನಡೆಸಿದ್ದ ಗಂಡಾನೆಗಳಿಗೆ ಮರದ ಅಂಬಾರಿ ಹೊರುವ ತಾಲೀಮಿನ ಮೊದಲ ದಿನ
ಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಮಹೇಂದ್ರ ಬೆನ್ನಿಗೆ ಗಾದಿ ಮತ್ತು ನಮ್ಮಾ ಬಿಗಿದು. ಅರಮನೆಯ ಮರದ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಮಧ್ಯಾಹ್ನ 2.30ಕ್ಕೆ ಅಂಬಾರಿ ಹಾಗೂ ಆನೆಗಳಿಗೆ ಸಾಂಪ್ರದಾಯಿಕವಾಗಿ ಡಿಸಿಎಫ್ ಐ.ಬಿ.ಪ್ರಭುಗೌಡ ಪೂಜೆ ಸಲ್ಲಿಸಿ ಬೂದುಗುಂಬಳ ಒಡೆದರು. ಈ ವೇಳೆ ಮಳೆಯಾದ ಆರಂಭವಾಯಿತು. ಮಹೇಂದ್ರ ಆನೆಯ ಅಂಬಾರಿ ಗಾದೆಗೆ ಪ್ಲಾಸ್ಟಿಕ್ ಚೀಲವನ್ನು ಹೊದಿಸಲಾಯಿತು. ಆದರೆ ಮಳೆ ಮತ್ತಷ್ಟು ಜೋರಾದ ಕಾರಣ ಮರದ ಅಂಬಾರಿ ಹಾಗೂ ಕಾಟನ್ ಹಗ್ಗಗಳು ಒದ್ದೆಯಾಯಿತು. ಜೋರಾಗಿ ಗಾಳಿ, ಮಳೆ ಸುರಿಯಿತು. ಅದರ ನಡುವೆಯೇ ಮಾವುತ ರಾಜಣ್ಣನ ಅಣತಿಯಂತೆ ನಿಧಾನವಾಗಿ ಹೆಜ್ಜೆ ಹಾಕಿದನು.
ಕುಮ್ಮಿ ಆನೆಗಳಾಗಿ ಮಹೇಂದ್ರನ ಬಲಭಾಗದಲ್ಲಿ ಲಕ್ಷಿ÷್ಮ, ಎಡ ಭಾಗದಲ್ಲಿ ಚೈತ್ರ ಹೆಜ್ಜೆ ಹಾಕಿದರೆ, ಏಕಲವ್ಯ, ಶ್ರೀಕಂಠ, ಕಾವೇರಿ, ಪ್ರಶಾಂತ, ಸುಗ್ರೀವ, ಗೋಪಿ, ರೂಪ, ಶ್ರೀರಾಮ ಆನೆಗಳು ಹೆಜ್ಜೆ ಹಾಕಿದವು.
ಗಜ ಪಡೆ ಕೆಲ ದೂರ ಕ್ರಮಿಸಿದ ಬಳಿಕ ‘ಮಹೇಂದ್ರ’ ಅರಮನೆ ಆವರಣದಿಂದ ಹೊರ ಹೋಗಲು ನಿರಾಕರಿಸಿದನು. ಈ ವೇಳೆ ಆನೆಯ ಮೇಲಿದ್ದ ಹೆಚ್ಚುವರಿ ಭಾರವನ್ನು ಇಳಿಸಲಾಯಿತು. ಆದರೂ ಮುಂದೆ ತೆರಳದಿದ್ದಾಗ, ವಾಪಸ್ ಕರೆತಂದು ಮರದ ಅಂಬಾರಿ ಬಿಚ್ಚಿದರು. ಉಳಿದ ಆನೆಗಳೂ ಬಿಡಾರಕ್ಕೆ ತೆರಳಿದವು.
ಬನ್ನಿಮಂಟಪದ ವರೆಗೆ ನಡೆಯಬೇಕಾಗಿದ್ದ ಮರದ ಅಂಬಾರಿ ಮೆರವಣಿಗೆ ಅರಮನೆ ಆವರಣದಲ್ಲೇ ಮೊಟಕುಗೊಂಡಿದ್ದು, ತಾಲೀಮು ನೋಡಲು ಬಂದಿದ್ದವರಲ್ಲಿ ನಿರಾಸೆ ಮೂಡಿಸಿತು. ಮಳೆಯ ಕಾರಣದಿಂದ
ಹಗ್ಗಗಳು ಹೆಚ್ಚು ಬಿಗಿಯಾದ ಕಾರಣ ಕಿರಿಕಿರಿ ಉಂಟಾಯಿತು. ಆನೆಯ ಸುರಕ್ಷತೆ ಹಾಗೂ ಅನುಕೂಲತೆಗಾಗಿ ಮರದ ಅಂಬಾರಿ ತಾಲೀಮು ಮುಂದೂಡಲಾಗಿದೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ಹೇಳಿದರು.