ಜೋರು ಮಳೆಯ ಹಿನ್ನಲೆಯಲ್ಲಿ ಮಹೇಂದ್ರ ಆನೆಗೆ ಮರದ ಅಂಬಾರಿ ತಾಲೀಮು ಮೊಟಕುಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಗಜಪಡೆಗೆ ಮೂರನೇ ಹಂತದ ತಾಲೀಮು ಶುರುವಾಗಿದ್ದು, ಶುಕ್ರವಾರ ಸುರಿದ ಜೋರು ಮಳೆಯಿಂದಾಗಿ ಮಹೇಂದ್ರ ಆನೆಯ ಮರದ ಅಂಬಾರಿ ತಾಲೀಮನ್ನು ಮೊಟಕುಗೊಳಿಸಲಾಯಿತು. .ಇಷ್ಟು ದಿನ ಕಾಲ ಭಾರ ಹೊರುವ ತಾಲೀಮು ನಡೆಸಿದ್ದ ಗಂಡಾನೆಗಳಿಗೆ ಮರದ ಅಂಬಾರಿ ಹೊರುವ ತಾಲೀಮಿನ ಮೊದಲ ದಿನಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಮಹೇಂದ್ರ ಬೆನ್ನಿಗೆ ಗಾದಿ ಮತ್ತು ನಮ್ಮಾ ಬಿಗಿದು. ಅರಮನೆಯ ಮರದ ಅಂಬಾರಿ…
Day: September 25, 2026
ಮಾಜಿ ಸಿದ್ದರಾಮಯ್ಯ ನೇತೃತ್ವದ ಆರ್ಮಿ ಛಿದ್ರವಾಗಿಲ್ಲ, ಅವರ ಜೊತೆ ಆಪ್ತ ಆರ್ಮಿ ಇದೆ; ಸಚಿವ ಸತೀಶ್ ಜಾರಕಿಹೊಳಿ
ಮೈಸೂರು: ಮಾಜಿ ಸಿದ್ದರಾಮಯ್ಯ ನೇತೃತ್ವದ ಆರ್ಮಿ ಛಿದ್ರವಾಗಿಲ್ಲ, ಸಿದ್ದರಾಮಯ್ಯ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ಸಂಬAಧ ಉತ್ತಮವಾಗಿದೆ. ಸಿದ್ದರಾಮಯ್ಯ ಅರ್ಮಿ ಛಿದ್ರವಾಗಿಲ್ಲ. ಈಗಲೂ ಅವರೇ ನಮ್ಮ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ದೂರದ ಬೆಟ್ಟ ನುಣ್ಣಗೆ ಅಂತಾರೆ, ಹಾಗೆ ನಿಮಗೆ ನಾವು ಚೆನ್ನಾಗಿಲ್ಲ ಅನಿಸುತ್ತೆ. ಸಿದ್ದರಾಮಯ್ಯ ನಾನು ಚೆನ್ನಾಗಿಯೇ…
ಮಾಜಿ ಸಂಸದ ಪ್ರತಾಪ್‌ಸಿಂಹಗೆ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಣೆ
ಮೈಸೂರು; ಜಿಲ್ಲೆಯ ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ವೇಳೆ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ.ಟಿ.ನರಸೀಪುರದಲ್ಲಿ ಸೆ.18ರಂದು ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ದಲಿತ ಸಂಘಟನೆಗಳ ಹೋರಾಟಗಾರರನ್ನು ಅವಮಾನ ಮಾಡಿ ಮತ್ತು ದಲಿತ ಸಮುದಾಯದ ಸಾಂಸ್ಕತಿಕ ಅಸ್ಮಿತೆಯಾದ ನೀಲಿ ಶಾಲಿನ ಬಗ್ಗೆ ಅವಹೇಳನ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರತಾಪ್…
ಗೃಹಿಣಿ ಆತ್ಮಹತ್ಯೆ ಪ್ರಕರಣ ಆರೋಪಿ ವಿಕಾಸ್ ಬಂಧನ
ಹುಣಸೂರು; ತಾಲೂಕಿನ ಲಕ್ಕವಲ್ಲಿಕೊಪ್ಪಲು ಗ್ರಾಮದಲ್ಲಿ ಕ್ರಿಮಿನಾಶಕ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ವಿಕಾಸ್ ಎಂಬಾತನನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಲಕ್ಕವಲ್ಲಿಕೊಪ್ಪಲು ಗ್ರಾಮದ ಕಾಂತ ಎಂಬುವರ ಪತ್ನಿ ಸಿಂಧು (26) ಆತ್ಮಹತ್ಯೆ ಮಾಡಿಕೊಂಡವಳು.ಸಿಂಧು ಹಾಗೂ ವಿಕಾಸ್ ನಡುವೆ ಅಕ್ರಮ ಸಂಬAಧವಿತ್ತು ಎಂದು ಆರೋಪಿಸಲಾಗಿದೆ. ವಿಕಾಸ್‌ನಿಂದ ಬ್ಲಾ÷್ಯಕ್ ಮೇಲ್‌ಗೆ ಒಳಗಾಗಿದ್ದ ಸಿಂಧು, ಮಾನಸಿಕವಾಗಿ ನೊಂದಿದ್ದು, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಈ ಸಂಬAಧ ಮೃತ ಸಿಂಧು ಪತಿ ಕಾಂತ ಅವರು ಬಿಳಿಕೆರೆ…
ವಿದ್ಯಾರ್ಥಿಗಳಿಗೆ ಸೈಬರ್‌ಕ್ಲಾಶ್ ಕುರಿತು 12 ಗಂಟೆಗಳ ಹ್ಯಾಕಥಾನ್
ಮೈಸೂರು; ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಸೈಬರ್‌ಕ್ಲಾಶ್–2026. 12 ಗಂಟೆಗಳ ಹ್ಯಾಕಥಾನ್ ಅನ್ನು ಆಯೋಜಿಸಲಾಗಿತ್ತು.ಹ್ಯಾಕಥಾನ್‌ನಲ್ಲಿ ಒಟ್ಟು 63 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯ, ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ತಂಡದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿತ್ತು. ಹ್ಯಾಕಥಾನ್‌ನಲ್ಲಿ ಸೈಬರ್ ಗಾರ್ಡಿಯನ್, ಸೈಬರ್ ಡೆವಲಪರ್ ಮತ್ತು ಸೈಬರ್ ಸೆಂಟಿನೆಲ್ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ನಿಗಧಿತ ಸಮಯದೊಳಗೆ…
ವಿಜಯ ವಿಠಲ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ
ಮೈಸೂರು; ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮೈಸೂರು ಜಿಲ್ಲೆ ಇವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜಯ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.75 ಕೆ.ಜಿ. ಒಳಗಿನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎಸ್. ಧೀರಜ್ ಪಟೇಲ್ ಚಿನ್ನದ ಪದಕ, 66 ಕೆ.ಜಿ ಒಳಗಿನ ಬಾಲಕರ ಕರಾಟೆ (ಕುಮಿಟೆ) ಸ್ಪರ್ಧೆಯಲ್ಲಿ ಅಶ್ವಿನ್ ಗೌಡ ಚಿನ್ನದ ಪದಕ, 50 ಕೆ.ಜಿ. ಒಳಗಿನ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ದೈವಿಕ್.ಎಸ್. ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ…
ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಮೈಸೂರು: ಇಲ್ಲಿನ ಕುವೆಂಪುನಗರದಲ್ಲಿರುವ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಸಂಸ್ಥೆ, ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ ಕೆ.ಎಂ. ಮಾತನಾಡಿ, ರಕ್ತದಾನವು ಮಾನವೀಯ ಸೇವೆಯ ಅತ್ಯುನ್ನತ ಕಾರ್ಯವಾಗಿದ್ದು, ಯುವಜನರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.ಶಿಬಿರದಲ್ಲಿ 80ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು…
ಗ್ರಾಮೀಣರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದು: ಹೆಚ್.ಜಿ.ಶಿವಶಂಕರ್
ಪಿರಿಯಾಪಟ್ಟಣ: ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ನೋಂದಣಿಯಾಗಿ, ಗ್ರಾಮೀಣರ ಆರ್ಥಿಕ ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನೆಲಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜಿ.ಶಿವಶಂಕರ್ ತಿಳಿಸಿದರು. ಪಟ್ಟಣದ ಡಿ.ದೇವರಾಜು ಅರಸು ಕಲಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೆಲಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಸಹಕಾರ ಸಂಘವು ಅಭಿವೃದ್ಧಿಯಾಗಿ ಅದರ ಪ್ರತಿಫಲ ಸಮಾಜಕ್ಕೆ ಸಿಗಬೇಕಾದರೆ ಸಂಘದ ಸದಸ್ಯರ ಸಹಕಾರ ಅಗತ್ಯ. ಸಹಕಾರಿ ತತ್ವದ…
ಅರಮನೆ ಆವರಣದಲ್ಲಿ ಪೊಲೀಸರಿಂದ ಕುಶಲತೋಪು ಸಿಡಿಸುವ ಫಿರಂಗಿಗಳಿಗೆ ಪೂಜೆ
ಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಿಜಯದಶಮಿ ಜಂಬೂಸವಾರಿಯ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗೆ ಶುಕ್ರವಾರ ನಗರದ ವಿಶ್ವ ಪ್ರಸಿದ್ಧ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಪೊಲೀಸರಿಂದ ವಿಶೇಷ ಪೂಜೆ ನೆರವೇರಿಸಲಾಯಿತು.ಅರಮನೆಯ ಆನೆ ಬಾಗಿಲಿನ ಬಳಿ ಇರುವ 11 ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಾಯಿತು. ಅರಮನೆಯ ಅರ್ಚಕ ಪ್ರಹ್ಲಾದ್ ರಾವ್ ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಫಿರಂಗಿ ಗಾಡಿಗಳಿಗೆ ಪೂಜೆ…
ಮೈಸೂರು ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರಿಗೆ ಸಮಿತಿಯಿಂದ ಅಧಿಕೃತ ಆಹ್ವಾನ
ಮೈಸೂರು; ಈ ಬಾರಿ ನಡೆಯಲಿರುವ ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರನ್ನು ಉಡುಪಿ ಜಿಲ್ಲೆಯ ಮಣಿಪಾಲದ ಅವರ ನಿವಾಸದಲ್ಲಿ ಶುಕ್ರವಾರ ಸನ್ಮಾನಿಸುವ ಮೂಲಕ ಆಹ್ವಾನಿಸಲಾಯಿತು.ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಿರಿಯ ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪಸಮಿತಿಯ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು,ಐದು ಕವಿಗೋಷ್ಠಿಗಳಿಗೆ ಜನರು…
- 1
- 2