Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗೃಹಿಣಿ ಆತ್ಮಹತ್ಯೆ ಪ್ರಕರಣ ಆರೋಪಿ ವಿಕಾಸ್ ಬಂಧನ


ಹುಣಸೂರು; ತಾಲೂಕಿನ ಲಕ್ಕವಲ್ಲಿಕೊಪ್ಪಲು ಗ್ರಾಮದಲ್ಲಿ ಕ್ರಿಮಿನಾಶಕ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ವಿಕಾಸ್ ಎಂಬಾತನನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಕ್ಕವಲ್ಲಿಕೊಪ್ಪಲು ಗ್ರಾಮದ ಕಾಂತ ಎಂಬುವರ ಪತ್ನಿ ಸಿಂಧು (26) ಆತ್ಮಹತ್ಯೆ ಮಾಡಿಕೊಂಡವಳು.
ಸಿಂಧು ಹಾಗೂ ವಿಕಾಸ್ ನಡುವೆ ಅಕ್ರಮ ಸಂಬAಧವಿತ್ತು ಎಂದು ಆರೋಪಿಸಲಾಗಿದೆ. ವಿಕಾಸ್‌ನಿಂದ ಬ್ಲಾ÷್ಯಕ್ ಮೇಲ್‌ಗೆ ಒಳಗಾಗಿದ್ದ ಸಿಂಧು, ಮಾನಸಿಕವಾಗಿ ನೊಂದಿದ್ದು, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಸಂಬAಧ ಮೃತ ಸಿಂಧು ಪತಿ ಕಾಂತ ಅವರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರೋಪಿ ವಿಕಾಸ್‌ನನ್ನು ಬಂಧಿಸಿದ್ದಾರೆ.