
ಮೈಸೂರು; ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಸೈಬರ್‌ಕ್ಲಾಶ್–2026. 12 ಗಂಟೆಗಳ ಹ್ಯಾಕಥಾನ್ ಅನ್ನು ಆಯೋಜಿಸಲಾಗಿತ್ತು.
ಹ್ಯಾಕಥಾನ್‌ನಲ್ಲಿ ಒಟ್ಟು 63 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯ, ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ತಂಡದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿತ್ತು. ಹ್ಯಾಕಥಾನ್‌ನಲ್ಲಿ ಸೈಬರ್ ಗಾರ್ಡಿಯನ್, ಸೈಬರ್ ಡೆವಲಪರ್ ಮತ್ತು ಸೈಬರ್ ಸೆಂಟಿನೆಲ್ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ನಿಗಧಿತ ಸಮಯದೊಳಗೆ ನೈಜ ಜೀವನದ ಸವಾಲುಗಳಿಗೆ ನವೀನ ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಹ್ಯಾಕಥಾನ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿತ್ತು.
ನಿರ್ಣಾಯಕ ಮಂಡಳಿಯಲ್ಲಿ ಮುಖ್ಯ ಅತಿಥಿ ಹಾಗೂ ಇನ್‌ಫೋಸಿಸ್ ಮೈಸೂರಿನ ಸೈಬರ್ ಸೆಕ್ಯೂರಿಟಿ, ಗ್ರೂಪ್ ಮ್ಯಾನೇಜರ್ ನಿತಿನ್‌ಗೌಡ ಸಿ, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಶೃತಿಪೂಣಚ್ಚ, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಬಿಸಿಎ ವಿಭಾಗದ ಉಪ ವಿಭಾಗದ ಮುಖ್ಯಸ್ಥ ಡಾ. ಮನೋಹರ್ ಎನ್ ಹಾಗೂ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂತೋಷ್‌ಕುಮಾರ್ ಬಿ.ಜೆ. ಅವರು ಉಪಸ್ಥಿತರಿದ್ದರು.
ಹ್ಯಾಕಥಾನ್‌ನ ಸಮಾರೋಪದಲ್ಲಿ 3 ಬಹುಮಾನ ವಿಜೇತ ತಂಡಗಳು ಹಾಗೂ 2 ಸಮಾಧಾನಕರ ಬಹುಮಾನ ವಿಜೇತರನ್ನು ಘೋಷಿಸಲಾಯಿತು. ಬಹುಮಾನ ವಿಜೇತರಾಗಿ ಮೈಸೂರಿನ ಎನ್‌ಐಇ ಪ್ರಥಮ ದರ್ಜೆ ಕಾಲೇಜಿನ ಮೊಹಮ್ಮದ್ ಅಕ್ಬರ್ ಸೈದ್, ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಅಶೋಕ್ ಪಿ.ಎಸ್ ಮತ್ತು ಮೇಘನಾ ಎಸ್ ಹಾಗೂ ಮೈಸೂರಿನ ಎನ್‌ಐಇ ಪ್ರಥಮ ದರ್ಜೆ ಕಾಲೇಜಿನ ಹೃಷಿಕೇಶ್ ಎಂ., ಆಕಾಶ್ ಎಸ್ ಮತ್ತು ಅಮಾನ್ ಪಿ.ಝಡ್. ಅವರು ಹೊರಹೊಮ್ಮಿದರು. ಸಮಾಧಾನಕರ ಬಹುಮಾನಗಳನ್ನು ಮೈಸೂರಿನ ಹಿಂದೂಸ್ಥಾನ್ ಕಾಲೇಜಿನ ಸಂತೋಷ್ ಜೋಷಿ, ತುಷಾರ್ ಹಲ್ದಾರ್ ಮತ್ತು ಅಬ್ದುಲ್ ಮುಯಿಮಿನ್ ಹಾಗೂ ಜಿಎಸ್‌ಎಸ್‌ಎಸ್ ಸಿಂಹ ಸುಬ್ಬಮಹಾಲಕ್ಷಿö್ಮ ಪ್ರಥಮ ದರ್ಜೆ ಕಾಲೇಜಿನ ಅಪೇಕ್ಷಾ ಎಂ ಮತ್ತು ಅಮೂಲ್ಯ ಜೆ ಅವರು ಪಡೆದುಕೊಂಡರು.