Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರಿಗೆ ಸಮಿತಿಯಿಂದ ಅಧಿಕೃತ ಆಹ್ವಾನ


ಮೈಸೂರು; ಈ ಬಾರಿ ನಡೆಯಲಿರುವ ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರನ್ನು ಉಡುಪಿ ಜಿಲ್ಲೆಯ ಮಣಿಪಾಲದ ಅವರ ನಿವಾಸದಲ್ಲಿ ಶುಕ್ರವಾರ ಸನ್ಮಾನಿಸುವ ಮೂಲಕ ಆಹ್ವಾನಿಸಲಾಯಿತು.
ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಿರಿಯ ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.
ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪಸಮಿತಿಯ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು,
ಐದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಇದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದು ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದು ಹೇಳಿದರು.
ದಸರಾ ಮಹೋತ್ಸವವು ಶಕ್ತಿದೇವತೆಯಾದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಚೆನ್ನಾಗಿ ನಡೆಯಲಿ. ಯಾವ ಲೋಪದೋಷಗಳಾಗದಿರಲಿ. ಮಳೆಯಾಗಿ, ಚೆನ್ನಾಗಿ ಬೆಳೆ ಬಂದು ನಮ್ಮ ರೈತರ ಜೊತೆಗೆ ನಾಡಿನ ಜನತೆ ಖುಷಿಯಿಂದ ಇರುವಂತಾಗಲಿ ಎಂದು ಹಾರೈಸಿದರು.
2007ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.
ಈ ವೇಳೆ ದಸರಾ ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕರಾದ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅವರ ಅಳಿಯ ಟಿ.ಅನಿಲಕುಮಾರ್ ಹಾಜರಿದ್ದರು.

ಕೋಟ್…
ಹಿರಿಯ ಲೇಖಕಿ ವೈದೇಹಿಯವರು ನಾಡಿನ ಸಾಹಿತ್ಯದ ಅಸ್ಮಿತೆ. ಅವರು ಈ ನಾಡಿನ ಕನ್ನಡ ಸಾಹಿತ್ಯ ಲೋಕವನ್ನು ಸಾಕಷ್ಟು ಗಂಭೀರವಾಗಿ ಸೃಜನಶೀಲಗೊಳಿಸಿದ್ದಾರೆ. ಆ ಕಾರಣಕ್ಕೆ ನಮ್ಮ 2026ನೇ ಸಾಲಿನ ಕವಿಗೋಷ್ಠಿ ಉದ್ಘಾಟನೆ ಕಾರ್ಯಕ್ರಮಕ್ಕೆ ಅವರನ್ನು ಬಹಳ ಅರ್ಥಪೂರ್ಣವಾಗಿ ಗೌರವ ಪೂರಕವಾಗಿ ಸ್ವಾಗತಿಸುತ್ತೇನೆ.

  • ಪ್ರೊ. ನಂಜಯ್ಯ ಹೊಂಗನೂರು

ಕೋಟ್-2

ವಿದ್ಯಾರ್ಥಿ ಜೀವನದಿಂದಲೂ ಅವರ ಸಾಹಿತ್ಯವನ್ನು ಓದುತ್ತಾ ಬೆಳೆದವನು ನಾನು. ಒಂದು ರೀತಿ ಅವರ ಅಭಿಮಾನಿ. ಅವರ ಕ್ರೌಂಚ ಪಕ್ಷಿಯಾಗಿರಬಹುದು, ಅವರ ಅಸ್ಪöÈಶ್ಯರು ಕಾದಂಬರಿ ಆಗಿರಬಹುದು. ಇವೆಲ್ಲ ಓದಿ ವಿಸ್ಮಿತರಾದ ವಿದ್ಯಾರ್ಥಿಗಳು ನಾವು ಇಂದು ದಸರಾ ಕವಿಗೋಷ್ಠಿಗೆ ಅವರನ್ನು ಅತ್ಯಂತ ತುಂಬು ಪ್ರೀತಿಯಿಂದ ಆಹ್ವಾನ ಮಾಡುವಂತಹ ಅವಕಾಶ ಸಿಕ್ಕಿದ್ದು ನನ್ನ ಯಾವುದೋ ಜನ್ಮದ ಪುಣ್ಯ.

  • ಡಾ. ಉಮೇಶ್ ಬೇವಿನಹಳ್ಳಿ

ವೈದೇಹಿ ಅವರ ಪರಮ ಅಭಿಮಾನಿ ನಾನು. ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಅವರನ್ನು ಆಹ್ವಾನಿಸಲು ಬಂದದ್ದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ಅವರ ಕೈ ರುಚಿಯನ್ನು ಸವಿದು, ಅವರ ಸಾಂಗತ್ಯದಲ್ಲಿ ಬೆರೆತ ಈ ಕ್ಷಣ ನನ್ನ ಬದುಕಿನಲ್ಲಿ ಮರೆಯಲಾಗದ್ದು. ನಮ್ಮ ಮೈಸೂರು ದಸರಾ ಕವಿಗೋಷ್ಠಿಗೆ ಇಂತಹ ಗಣ್ಯ ಚೇತನಕ್ಕೆ ಗೌರವ ಪೂರ್ವಕ ಆಹ್ವಾನವನ್ನು ಬಯಸುತ್ತೇನೆ. ಪ್ರೊ.ತ್ರಿವೇಣಿ