
ಕೆ.ಆರ್.ನಗರ ;
ಮಾಜಿ ಸಂಸದ ಪ್ರತಾಪ್ಸಿಂಹ ವಿರುದ್ದ ದಾಖಲಾಗಿರುವ ಎಫ್ಐಆರ್ನ್ನು ರದ್ದುಗೊಳಿಸಿ ಟಿ.ನರಸೀಪುರ ಪೋಲೀಸ್ಠಾಣೆ ಸರ್ಕಲ್ಇನ್ಸ್ಪೆಕ್ಟರ್ ಧನಂಜಯಕುಮಾರ್ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕೆಂದು ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಟಿ.ನರಸೀಪುರದ ಪೋಲೀಸ್ ಇನ್ಸ್ಪೆಕ್ಟರ್ ಧನಂಜಯಕುಮಾರ್ ಯಾವುದೆ ಒಂದು ಜನಾಂಗ ಎಂದು ಹೇಳದೆ ಇಡೀ ಹಿಂದೂ ಸಮಾಜಕ್ಕೆ ಹುಷಾರ್ ಗ್ರಹಚಾರ ಬಿಡಿಸುತ್ತೇನೆ ಎಂದು ಧಮಕಿ ಹಾಕಿದರು ಇದರಿಂದ ಹಿಂದೂ ಸಮಾಜ ಗಣಪತಿ ವಿಸರ್ಜನೆ ಮಾಡಲೇಬೇಕೆಂದು ನಿರ್ಧರಿಸಬೇಕಾಯಿತು.
ಇದಕ್ಕೂ ಮುನ್ನ ಧನಂಜಯರವರನ್ನು ಸಸ್ಪೆಂಡ್ ಮಾಡಿ ಎಂದು ಪ್ರತಾಪ್ಸಿಂಹ ಪ್ರತಿಭಟನೆ ನಡೆಸಿದರು.ಇಲ್ಲಿಯತನಕ ಟಿ.ನರಸೀಪುರದಲ್ಲಿ ಗಣಪತಿ ವಿಚಾರದಲ್ಲಿ ಕೋಮುಗಲಭೆಯಾಗಿಲ್ಲ ಆದರೂ ಇನ್ಸ್ಪೆಕ್ಟರ್ರವರ ಮಾತು ಹಿಂದುಗಳನ್ನು ಪ್ರಚೋದಿಸುವ ಕೆಲಸ ಮಾಡಿದರು. ಇದನ್ನು ವಿರೋಧಿಸಿದ್ದು ತಪ್ಪೆ ಎಂದು ಪ್ರಶ್ನಿಸಿದರು.
ಧನಂಜಯಕುಮಾರ್ ಮಾಡಿದ್ದು ಪ್ರಚೋದನೆಯಲ್ಲವೆ ಎಂದು ಪ್ರಶ್ನಿಸಿದ ಶ್ರೀನಿವಾಸಗೌಡ ಶಾಸಕ ಪ್ರದೀಪ್ಈಶ್ವರ್ ಪ್ರತಾಪ್ಸಿಂಹರ ಬಗ್ಗೆ ಕೇವಲವಾಗಿ ಮಾತನಾಡಿದ್ಧಾರೆ ಅವರ ವಿರುದ್ದ ಏಕೆ ಎಫ್ಐಆರ್ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಾತಿ ವಿಚಾರವನ್ನು ಮಾತನಾಡದಿದ್ದರೂ ಪ್ರತಾಪ್ಸಿಂಹರ ಮೇಲೆ ಜಾತಿ ನಿಂದನೆ ದೂರು ದಾಖಲಿಸಿರುವುದು ಸರಿಯಲ್ಲ ಅವರ ಮಾತಲ್ಲಿ ಎಲ್ಲಿ ಜಾತಿನಿಂದನೆಯಾಗಿದೆ ಎಂದು ತೋರಿಸಿ ಎಂದು ಪ್ರಶ್ನಿಸಿದರು.
ಇದೇ ದೋರಣೆ ಮುಂದುವರೆದಲ್ಲಿ ಇಡೀ ಹಿಂದೂ ಸಮಾಜ ಹಾಗೂ ಒಕ್ಕಲಿಗ ಸಮಾಜ ಸೇರಿದಂತೆ ಹಿಂದೂ ಸಮಾಜದ ಎಲ್ಲಾ ಸಂಘಟನಗಳನ್ನು ಒಗ್ಗೂಡಿಸಿ ಪ್ರತಾಪ್ಸಿಂಹ ಪರ ಬೆಂಬಲ ವ್ಯಕ್ತಪಡಿಸಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದ ಕಾಂಗ್ರೇಸ್ ಸರಕಾರ ಪ್ರಜಾಪ್ರಭುತ್ವವನ್ನು ಧಮನಮಾಡುವ ಕೆಲಸಕ್ಕೆ ಮುಂದಾಗಿದ್ದು ಮುಖ್ಯಮಂತ್ರಿಗಳಿರಬಹುದು, ಗೃಹಸಚಿವರಿರಬಹುದು ಸಮಾಜವನ್ನು ಕದಡುವ ಕೆಲಸ ಕೆರಳಿಸುವ ಕೆಲಸ ಮಾಡುವುದು ಬೇಡ ತಪ್ಪಿದಲ್ಲಿ ಹಿಂದೂ ಸಮಾಜ ಉಗ್ರಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೊಸೂರುಅನಿಲ್, ಮಾರ್ಕಂಡೇಯಸ್ವಾಮಿ ಹಾಜರಿದ್ದರು.