
ಪಿರಿಯಾಪಟ್ಟಣ : ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆಯು ಸಹಕಾರಿಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಕರ್ತರು ಮತ್ತು ಸರ್ಕಾರಿ ನೌಕರರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯು ತನ್ನ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಪ್ರತಿನಿತ್ಯ ಕ್ರೀಡಾ ಆಸಕ್ತಿಯನ್ನು ಪತ್ರಕರ್ತರು ಬೆಳೆಸಿಕೊಳ್ಳುವುದರ ಮೂಲಕ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಬರವಣಿಗೆಯಲ್ಲಿ ತೊಡಗಿರುವ ಇವರಿಗೆ ಕ್ರೀಡೆಯು ನೆಮ್ಮದಿಯನ್ನು ನೀಡುತ್ತದೆ ಪತ್ರಕರ್ತರ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆಯು ಸಹಕಾರಿಯಾಗಿದೆ ಎಂದು ಹೇಳಿದರು.
ರೋಟರಿ ಐಕನ್ಸ್ ಸಂಸ್ಥೆ ಅಧ್ಯಕ್ಷ ಟಿ.ಎಸ್. ಹರೀಶ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸಮಾಜಮುಖಿ ಕೆಲಸಗಳು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಇತರರಿಗೆ ಮಾದರಿ ಯಾಗಿದೆ. ಪ್ರತಿಯೊಬ್ಬರಲ್ಲಿಯೂ ಸೌಹಾರ್ದತೆಯನ್ನು ಮೂಡಿಸುವ ಸಲುವಾಗಿ ಇಂದು ಕ್ರಿಕೆಟ್ ಪಂದ್ಯಾವಳಿಯ ಯೋಜನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಸಮಾಜ ಸೇವಕಿ ಅನುಪಮಾ ಆರ್ಯ ಮಾತನಾಡಿ ಪತ್ರಕರ್ತರ ಸಾಮಾಜಿಕ ಕಾರ್ಯಗಳಿಗೆ ನಾನು ಸದಾ ಸಹಕಾರವನ್ನು ನೀಡುತ್ತೇನೆ ಪತ್ರಕರ್ತರು ಸಹಜವಾಗಿ ಬರವಣಿಗೆಯ ಮೂಲಕ ಹೊರ ಜಗತ್ತಿಗೆ ಗೋಚರಿಸುತ್ತಾರೆ ಆದರೆ ಅವರಲ್ಲಿಯೂ ಕೂಡ ಇತರೆ ಚಟುವಟಿಕೆಗಳ ಬಗ್ಗೆ ಆಸಕ್ತಿ ಇದೆ ಎಂದು ಈ ಪಂದ್ಯಾವಳಿಯು ತೋರ್ಪಡಿಸುತ್ತದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ತಾಲೂಕಿನ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಸಿ.ಎನ್. ವಿಜಯ್, ತಾಲೂಕು ಸಂಘದ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ಸ್ವಾಮಿ ಬಾವಲಾಳು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಕಾರ್ಯದರ್ಶಿ ದೇವೇಗೌಡ, ಖಜಾಂಚಿ ಬಿ.ಆರ್. ಗಣೇಶ್, ಕಸಾಪ ಅಧ್ಯಕ್ಷ ನವೀನ್ ಕುಮಾರ್, ಪತ್ರಕರ್ತರಾದ ಸತೀಶ್ ಆರಾಧ್ಯ, ಪಿ.ಡಿ ಪ್ರಸನ್ನ, ಶಿವಣ್ಣ, ಮುಕುಂದ, ಮಹೇಶ್, ಸದಾನಂದ, ಶರತ್, ರಾಮೇಗೌಡ, ಸುಬ್ರಮಣ್ಯ, ಪ್ರಸನ್ನ, ಪುನೀತ್, ಅಶ್ವಥ್, ಲೋಕೇಶ್, ವೆಂಕಟೇಶ್, ಪವನ್, ರಾಜೇಶ್, ವಿನಯ್, ವಸಂತ್, ಆನಂದ್ ಸೇರಿದಂತೆ ಇತರರು ಹಾಜರಿದ್ದರು.