
ಇದೇ ಮೊದಲ ಬಾರಿ ದಸರಾ ಕಾರ್ಯಕ್ರಮಗಳ ಉಸ್ತುವಾರಿಗೆ ೨೨ ಮಂದಿ ಸಚಿವರುಗಳ ನೇಮಕ
*೧೦ ದಿನಗಳ ದಸರಾದ ಕಾರ್ಯಕ್ರಮಗಳಿಗೆ ಪ್ರತಿ ದಿನ ಇಬ್ಬರು ಸಚಿವರುಗಳ ಉಸ್ತುವಾರಿ
ಮೈಸೂರು: ಇದೇ ಮೊದಲ ಬಾರಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರತಿಯೊಂದು ದಿನವೂ ಒಂದೊAದು ಕಾರ್ಯಕ್ರಮಕ್ಕೆ ಸಚಿವರುಗಳನ್ನು ಉಸ್ತುವಾರಿಯಾಗಿ ಹಂಚಿಕೆ ಮಾಡಲಾಗಿದೆ.
ಒಟ್ಟು ೧೮ ಕಮಿಟಿಗಳಿವೆ. ಹಲವು ಕಾರ್ಯಕ್ರಮಗಳು ನಡೆಯಲಿವೆ. ೧೦ ದಿನಗಳ ಕಾಲ ಪ್ರತಿ ದಿನ, ಇಬ್ಬರು ಸಚಿವರು ಕಾರ್ಯಕ್ರಮಗಳ ಉಸ್ತುವಾರಿ ವಹಿಸಲಿದ್ದಾರೆ. ದಸರಾ ಚೆನ್ನಾಗಿ ಆಗಬೇಕೆಂದು ಮುಖ್ಯಮಂತ್ರಿಗಳು ಈ ಕ್ರಮ ವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬು ಸವಾರಿ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕುಟುಂಬಸ್ಥರಿಗೆ ಉಪಹಾರ ಬಡಿಸಿ, ಅವರೊಂದಿಗೆ ಉಪಹಾರ ಸೇವಿಸಿ, ಮೂಲಭೂತ ವಸ್ತುಗಳ ಕಿಟ್ ವಿತರಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾವನ್ನು ಅದ್ಧೂರಿಯಾಗಿ, ಯಾವುದೇ ಲೋಷ, ದೋಷಗಳಿಲ್ಲದಂತೆ ಆಚರಿಸುವ ಸಂಬAಧ ಈಗಾಗಲೇ ಆಯಾ ಇಲಾಖೆಯ ಸಚಿವರುಗಳು ಇಲಾಖಾಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ.
ಈ ಬಾರಿಯ ದಸರಾ ಆಚರಣೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಈಗಾಗಲೇ ದಸರಾ ಉನ್ನತ ಮಟ್ಟದ ಸಮಿತಿಗಳ ಸಭೆ ಹಾಗೂ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈಪವರ್ ಕನೆಕ್ಟಿವಿಟಿ ಸಭೆಗಳನ್ನು ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಲಾಗಿದೆ ಎಂದರು.
ದಸರಾ ಉಪ ಸಮಿತಿಗಳ ಸಭೆಗಳನ್ನು ನಡೆಸಿ, ದಸರಾ ಆರಂಭದ ದಿನದಿಂದ ವಿಜಯದಶಮಿಯವರೆಗೆ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ದಸರಾ ಕಾರ್ಯಕ್ರಮಗಳ ಉಸ್ತುವಾರಿಗೆ ಇದೇ ಮೊದಲ ಬಾರಿಗೆ ೨೨ ಮಂದಿ ಸಚಿವರಗಳನ್ನು ನಿಯೋಜಿಸಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ ಎಂಬುದನ್ನು ಒಪ್ಪಿಕೊಂಡರು.
ಪ್ರತಿ ವರ್ಷದಂತೆ ಮಾವುತರು ಮತ್ತು ಕಾವಾಡಿಗರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಈ ಬಾರಿಯೂ ಉಸ್ತುವಾರಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ದಿವಸದ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಅವುಗಳ ಮೇಲ್ವಿಚಾರಣೆಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ ಎಂದರು.
ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಕುರಿತಾದ ವದಂತಿಗಳಿಗೆ ಸ್ಪಷ್ಟನೆ ನೀಡಿ, ಕನ್ನಡಿಗ ಹಾಗೂ ಸಾಂಸ್ಕöÈತಿ ಇಲಾಖೆಯ ಸಚಿವರು ಮೊದಲೇ ಅವರ ಬಳಿ ಚರ್ಚಿಸಿ, ಒಪ್ಪಿಗೆ ಪಡೆದ ನಂತರವೇ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ದಸರಾ ಹಬ್ಬದ ವೇಳೆ ಪ್ರವಾಸಿಗರಿಗೆ ತೊಂದರೆಯಾಗದAತೆ, ಮೈಸೂರು ನಗರದ ಮುಖ್ಯ ರಸ್ತೆ ಕಾಮಗಾರಿಗಳನ್ನು ಹಬ್ಬ ಮುಗಿಯುವವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಲಾಗಿದೆ ಹಾಗೂ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲು ನೇಮಿಸಲಾಗಿದೆ ಎಂದರು.
ದಸರಾ ಗೋಲ್ಡ್ ಕಾರ್ಡ್ ಯಾರಿಗೂ ಫ್ರೀ ಇಲ್ಲ; ಈ ಬಾರಿಯ ದಸರಾದ ಗೋಲ್ಡ್ ಕಾರ್ಡ್ಗಳು ಹಾಗೂ ಕಾರ್ಯಕ್ರಮಗಳ ಪಾಸ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಬಾರಿ ಯಾರಿಗೂ ಕಾರ್ಡ್ಗಳನ್ನು ಉಚಿತವಾಗಿ ನೀಡುವುದಿಲ್ಲ. ಯಾರೇ ಆದರೂ ದುಡ್ಡು ಕೊಟ್ಟು ಖರೀದಿಸಬೇಕು. ಕಾರ್ಡ್ ಖರೀದಿಸುವವರಿಗೆ ಅವರ ಸೀಟ್‌ಗಳ ನಂಬರ್ ಹಾಕಿರಲಾಗುತ್ತದೆ. ಹಾಗಾಗಿ ಸೀಟ್‌ಗಳ ವಿಚಾರದಲ್ಲಿ ಈ ಬಾರಿ ಯಾವುದೇ ಗೊಂದಲವಿರುವುದಿಲ್ಲ ಎಂದರು.
ಇದೇ ವೇಳೆ ದಸರಾ ಗಜಪಡೆಯ ಮಾವುತ ಮಕ್ಕಳಿಗೆ ತೆರೆದಿರುವ ತಾತ್ಕಾಲಿಕ ಶಾಲೆಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳ ನೃತ್ಯ ವೀಕ್ಷಿಸಿದರು. ನಂತರ ಯುವ ದಸರಾ,ರೈತ ದಸರಾ,ಯೋಗ ದಸರಾ, ಕಂಬಳ, ಸ್ವಾನ ಮುದ್ದು ಪ್ರಾಣಿಗಳ ಪ್ರದರ್ಶನಗಳ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ತಿನ ಸದಸ್ಯ ಡಾ. ಡಿ. ತಿಮ್ಮಯ್ಯ,ಹೆಚ್.ಡಿ. ಕೋಟೆ ಶಾಸಕ ಹಾಗೂ ಅರಣ್ಯ ವಸತಿ ನಿಗಮದ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರು ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ; ಪುಷ್ಪಾ ಅಮರನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಯ ಜಿಲ್ಲಾಧಿಕಾರಿ ಲಕ್ಷಿ÷್ಮÃಕಾಂತ ರೆಡ್ಡಿ. ಜಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮತ್ತಿತರರು ಉಪಸ್ಥಿತರಿದ್ದರು.

