Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜನರಿಂದ ಬಂದ ದೂರಿಗೆ ಸ್ಪಂದಿಸಿ ರಸ್ತೆ ಬದಿ ಗಿಡ,ಗಂಟೆಗಳನ್ನು ತೆರವುಗೊಳಿಸಿದ ತಹಸೀಲ್ದಾರ್

ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಪ್ರಸ್ತಾಪ

ಎಚ್ ಡಿ ಕೋಟೆ : ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ದೂರುಗಳ ಸುರಿಮಳೆಯೇ ಕೇಳಿಬಂದಿತ್ತು. ಜಮೀನಿಗೆ ತಿರುಗಾಡಲು ರಸ್ತೆ ಇಲ್ಲ, ವಾಸಿಸಲು ಮನೆ ಇಲ್ಲ, ನೀರು ಸುಗಮವಾಗಿ ಹರಿಯಲು ಚರಂಡಿ ವ್ಯವಸ್ಥೆ ಸರಿ ಇಲ್ಲ, ಹಕ್ಕುಪತ್ರ, ಸಾಗುವಳಿ ಪತ್ರ ಇನ್ನು ಕೊಟ್ಟಿಲ್ಲ. ಹೀಗೆ ಸಾರ್ವಜನಿಕರಿಂದ ಕೇಳಿಬಂದ ದುರುಗಳಲ್ಲಿ  ರಸ್ತೆಬದಿ ಬೆಳೆದಿರುವ ಗಿಡಗಂಟಿಗಳ ಬಗ್ಗೆಯೂ ಪ್ರಸ್ತಾಪವಾಗಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ತಹಸೀಲ್ದಾರ್ ಶ್ರೀನಿವಾಸ್, ಮಾರನೇ ದಿನವೇ ಗಿಡಗಂಟಿಗಳ ತೆರವು ಮಾಡಿಸಿದ್ದಾರೆ. 

ಪಟ್ಟಣದ ಗದ್ದಿಗೆ ಸರ್ಕಲ್ ನಿಂದ  ಮಲಾರ ಕಾಲೋನಿ ಗೇಟ್ ವರೆಗೆ ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ  ತೀವ್ರ ತೊಂದರೆ ಆಗುತ್ತಿದೆ. ರಸ್ತೆಗಳು ಬಹಳ ಕಿರಿದಾಗಿ ಕಾಣಿಸುತ್ತಿದ್ದು, ಎದುರುಗಡೆ ಬರುವ ವಾಹನಗಳೇ ಕಾಣಿಸುತ್ತಿಲ್ಲ. ಇದರಿಂದ ಅಪಘಾತ ಸೇರಿದಂತೆ  ಅನೇಕ ತೊಂದರೆಗಳಾಗುತ್ತಿದೆ. ದಯವಿಟ್ಟು ಗಿಡಗಂಟಿಗಳ ತೆರವು ಮಾಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಭೋಗೇಶ್ವರ ಕಾಲೋನಿ ನಿವಾಸಿ ತಿಮ್ಮರಾಜು ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದರು. ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ  ಸ್ವೀಕರಿಸಿದ ತಹಶೀಲ್ದಾರ್ ಶ್ರೀನಿವಾಸ್ ಆದಷ್ಟು ಬೇಗ ತೆರವು ಮಾಡಿಸುವ ಭರವಸೆ ನೀಡಿದರು. ಇದಾದ ಮಾರನೇ ದಿನವೇ ಹಾರೋಪುರ ಕೆರೆಯಿಂದ ಮಲಾರ ಕಾಲೋನಿ ಗೇಟ್ ವರೆಗೆ ರಸ್ತೆ ಬೆಳೆದಿದ್ದ ಗಿಡಗಂಟಿಗಳ ತೆರವು ಮಾಡಿಸಿದ್ದಾರೆ. ರಸ್ತೆ ಬದಿ ಬೆಳೆದಿದ್ದ ಗಿಡಗಳನ್ನು ಕಟಾವ್  ಮಾಡಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.