Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕ್ರೀಡೆಯಿಂದ ಮಾನಸಿಕ ಸದೃಡತೆ ವೃದ್ಧಿ

ನಂಜನಗೂಡು ; ಸದಾ ಸುದ್ದಿ ಸಮಾಚಾರಗಳ ಗುಂಗಿನಲ್ಲಿ ದಿನ ಕಳೆಯುವ ಪತ್ರಕರ್ತರು ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ, ಮಾನಸಿಕವಾಗಿ ಸದೃಢರಾಗಿರಬಹುದು ಎಂದು ಮೂಳೆ ಮತ್ತು ಕೀಲು ತಜ್ಞ ವೈದ್ಯ ಡಾ.ಶ್ರೀಕಾಂತ್ ಸುಂದರೇಶ್ ಹೇಳಿದರು.

   ನಗರದ ಸಿಟಿಜನ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಹಾಗೂ ಹೋಗುಗಳ ಬಗ್ಗೆ ಸದಾ ಸುದ್ದಿ, ಸಮಾಚಾರದ ಒತ್ತಡದಲ್ಲಿ ದಿನ ಕಳೆಯುವ ಪತ್ರಕರ್ತರಿಗೆ ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡೆ ಹಾಗೂ ದೈಹಿಕ ವ್ಯಾಯಾಮಗಳು ನಿಯಮಿತವಾಗಿ ಇರಬೇಕು. ಇಲ್ಲವಾದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪತ್ರಕರ್ತರು ತಮ್ಮ ವೃತ್ತಿಯ ಜೊತೆಗೆ ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡೆ ಹಾಗೂ ವ್ಯಾಯಾಮದತ್ತ ಹೆಚ್ಚು ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು. 

   ನೆಸ್ಲೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸಮೂರ್ತಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಎತ್ತಿ ಹಿಡಿಯುವ ಪತ್ರಕರ್ತರು ಕೂಡ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಸಂತೋಷದಾಯಕ ವಿಚಾರವಾಗಿದೆ. ಪತ್ರಕರ್ತರ ಕುಟುಂಬದವರು ಒಂದೆಡೆ ಸೇರಿ ಸಂಭ್ರಮ ಆಚರಿಸುವ ಇಂತಹ ಸನ್ನಿವೇಶಗಳು ಜೀವನದ ಅಮೂಲ್ಯ ಕ್ಷಣಗಳಾಗಿರುತ್ತವೆ ಎಂದರು. 

   ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ.ರಂಗಸ್ವಾಮಿ ಮಾತನಾಡಿ, ಪ್ರತಿ ವರ್ಷ ಪತ್ರಕರ್ತರಿಗಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿರುವ ಸಿಟಿಜನ್ ಶಿಕ್ಷಣ ಸಮೂಹ ಸಂಸ್ಥೆಗೆ ಸಂಘವು ಅಭಾರಿಯಾಗಿರುತ್ತದೆ. ಸಂಘದ ಯಾವುದೇ ಚಟುವಟಿಕೆಗಳಲ್ಲೂ ಸಿಟಿಜನ್ ಶಾಲೆಯು ಪ್ರೋತ್ಸಾಹಿಸುತ್ತಾ ಬಂದಿರುವುದು ಸಂಸ್ಥೆಗೆ ಪತ್ರಕರ್ತರ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ 

ಪತ್ರಕರ್ತರ ಕುಟುಂಬದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಂಜನಗೂಡು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಪಿ.ದೀಪಕ್ ಪ್ರಸಾದ್, ಉಪಾಧ್ಯಕ್ಷ ಜಿ.ಎಂ. ವೇಣುಗೋಪಾಲ್, ನಿರ್ದೇಶಕರಾದ ನಂಜನಗೂಡು ಮಧು, ಎಂ.ಪ್ರಕಾಶ್, ಕೆಂಪೇಗೌಡ, ಪ್ರತಾಪ್ ಟಿ.ಕೋಡಿನರಸೀಪುರ, ಹುರಾ ಕೃಷ್ಣಪ್ಪ ಗೌಡ, ಟಿ.ಕೆ ಬಸವರಾಜು, ಸದಸ್ಯರಾದ ಪಿ.ಮಹದೇವಪ್ರಸಾದ್, ಗಂಗಾಧರ್, ಬಸವರಾಜು, ರಾಘವೇಂದ್ರ, ಸುತ್ತೂರು ನಂಜುಂಡನಾಯ್ಕ,  ಮಲ್ಕುಂಡಿ ಚನ್ನಪ್ಪ, ಎಸ್.ಚಂದ್ರಶೇಖರ್, ಹುಲ್ಲಹಳ್ಳಿ ಚಿನ್ನಸ್ವಾಮಿ, ಸಿದ್ದಪ್ಪಾಜಿ, ಚಂದ್ರು, ಉಪಸ್ಥಿತರಿದ್ದರು.