
ಮೈಸೂರು; ನಗರದ ಎಸ್ಬಿಆರ್ಆರ್ ಪ್ರಥಮ ದರ್ಜೆ ಕಾಲೇಜು , ಅಪರಾಧಶಾಸ್ತç ಮತ್ತು ವಿಧಿ ವಿಜ್ಞಾನ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ “ಆeಣeಛಿಣ, ಆeಜಿeಟಿಜ ಚಿಟಿಜ Pಡಿoಣeಛಿಣ – Poಟiಛಿe ಏ೯ ಚಿಟಿಜ Seಛಿuಡಿiಣಥಿ ಂತಿಚಿಡಿeಟಿess” ಎಂಬ ಶೀರ್ಷಿಕೆ ಅಡಿಯಲ್ಲಿ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಸುರಕ್ಷತೆ, ಸ್ಪೋಟಕ ವಸ್ತುಗಳು, ಭದ್ರತಾ ಕ್ರಮಗಳು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಮೈಸೂರು ನಗರ ಪೊಲೀಸ್ ಇಲಾಖೆಯ ಬಾಂಬ್ ಪತ್ತೆ ಹಾಗೂ ನಿಷ್ಕಿçÃಯ ದಳ (ಃomb ಆeಣeಛಿಣioಟಿ ಚಿಟಿಜ ಆisಠಿosಚಿಟ Squಚಿಜ) ಹಾಗೂ ಶ್ವಾನ ದಳ ತಂಡದೊAದಿಗೆ ನಡೆದ ಸಂವಾದ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು. ಬಾಂಬ್ ಪತ್ತೆ ಹಾಗೂ ನಿಷ್ಕಿçÃಯ ತಂಡವು ವಿದ್ಯಾರ್ಥಿಗಳಿಗೆ ಸ್ಪೋಟಕ ವಸ್ತುಗಳು, ಬಾಂಬ್ ಬೆದರಿಕೆಗಳು ಮತ್ತು ಅವುಗಳಿಗೆ ಸಂಬAಧಿಸಿದ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಮಾಹಿತಿಯನ್ನು ನೀಡಿತು. ಸ್ಪೋಟಕ ವಸ್ತುಗಳು ಅತ್ಯಂತ ಅಪಾಯಕಾರಿ ಸ್ವರೂಪದ್ದಾಗಿದ್ದು ಅವುಗಳನ್ನು ನಿರ್ವಹಿಸಲು, ವಿಶೇಷ ತರಬೇತಿ, ಪರಿಣಿತಿ ಮತ್ತು ಸುರಕ್ಷತಾ ಸಾಧನಗಳ ಅಗತ್ಯವಿದೆ ಎಂದು .
ವಿವರಿಸಿದರು.
ಅನುಮಾನಾಸ್ಪದ ವಸ್ತು ಅಥವಾ ಸ್ಪೋಟಕ ವಸ್ತು ಕಂಡುಬAದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ವಿಶೇಷ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಂಡವು ಹೆಚ್ಚು ಒತ್ತು ನೀಡಿತು. ಯಾವುದೇ ಅನುಮಾನಾಸ್ಪದ ವಸ್ತುವನ್ನು ಮುಟ್ಟಬಾರದು, ಸ್ಥಳಾಂತರಿಸಬಾರದು, ತೆರೆಯಲು ಅಥವಾ ಪರಿಶೀಲಿಸಲು ಪ್ರಯತ್ನಿಸಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಅಂತಹ ಸಂದರ್ಭದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ಇತರರನ್ನು ಆ ಸ್ಥಳದಿಂದ ದೂರವಿಟ್ಟು ತಕ್ಷಣ ಪೊಲೀಸರಿಗೆ ಅಥವಾ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
“Sಚಿಜಿeಣಥಿ begiಟಿs ತಿiಣh ಂತಿಚಿಡಿeಟಿess” ಎಂಬ ಸಂದೇಶವನ್ನು ನೀಡಿದ ಬಾಂಬ್ ಪತ್ತೆ ಹಾಗೂ ನಿಷ್ಕಿçÃಯ ತಂಡ, ಸಾರ್ವಜನಿಕರಲ್ಲಿ ಎಚ್ಚರಿಕೆ ಮತ್ತು ಸಮಯೋಚಿತ ಮಾಹಿತಿ ನೀಡುವಿಕೆ ಅನಾಹುತಗಳನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿತು. ಸ್ಪೋಟಕ ವಸ್ತುಗಳನ್ನು ಸ್ವತಃ ನಿರ್ವಹಿಸುವ ಬದಲು ತರಬೇತಿ ಪಡೆದ ತಜ್ಞರು ಮತ್ತು ವಿಶೇಷ ಪೊಲೀಸ್ ತಂಡಗಳಿಗೆ ಮಾಹಿತಿ ನೀಡುವುದು ಅತ್ಯಂತ ಸುರಕ್ಷಿತ ಕ್ರಮವಾಗಿದೆ ಎಂದು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಮೈಸೂರು ನಗರ ಪೊಲೀಸ್ ಶ್ವಾನ ದಳ ಪಾತ್ರದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ತರಬೇತಿ ಪಡೆದ ಶ್ವಾನಗಳು ಪೊಲೀಸ್ ಇಲಾಖೆಯ ಭದ್ರತಾ ಕಾರ್ಯಾಚರಣೆಗಳಲ್ಲಿ ಹೇಗೆ ಸಕರಿಸುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯಿತು. ಪೊಲೀಸ್ ತಂಡದೊAದಿಗೆ ನಡೆದ ಈ ಸಂವಾದವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕುತೂಹಲ ಮತ್ತು ಜಾಗೃತಿಯನ್ನು ಮೂಡಿಸಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ, ಕುಟುಂಬ, ಶಿಕ್ಷಣ ಮತ್ತು ವೃತ್ತಿ ಜೀವನ ಮತ್ತು ಸಾಮಾಜಿಕ ಬದುಕಿನ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದರು. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನವನ್ನು ಆಯ್ಕೆ ಮಾಡಬೇಕು ಎಂಬ ಸಂದೇಶವನ್ನು ನಾಟಕದ ಮೂಲಕ ಸಾರಲಾಯಿತು.
ನಾಟಕದ ಅಂತ್ಯದಲ್ಲಿ ವಿದ್ಯಾರ್ಥಿಗಳು “ಡ್ರಗ್ಸ್ ಅಂದರೆ ಬೇಡ ಬ್ರೋ”! ಎಂಬ ಪರಿಣಾಮಕಾರಿ ಘೋಷಣೆಯೊಂದಿಗೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿದರು. ಇದರೊಂದಿಗೆ “Sಚಿಥಿ ಓo ಣo ಆಡಿugs, Sಚಿಥಿ ಙes ಣo ಐiಜಿe” ಎಂಬ ಸಂದೇಶವನ್ನು ಸಾರಲಾಯಿತು.
ಒಟ್ಟಾರೆಯಾಗಿ, ಈ ಕಾರ್ಯಕ್ರಮದಲ್ಲಿ ಸ್ಪೋಟಕ ವಸ್ತುಗಳ ಕುರಿತು ಸುರಕ್ಷತಾ ಕ್ರಮಗಳು, ಪೊಲೀಸ್ ಇಲಾಖೆಯ ವಿಶೇಷ ಕಾರ್ಯವೈಖರಿ ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. “ಃe ಂಟeಡಿಣ, ಃe ಂತಿಚಿಡಿe, ಃe Sಚಿಜಿe” ಎಂಬ ಸಂದೇಶದೊAದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.