Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಹೊರ ವರ್ತುಲ ರಸ್ತೆಯ ಪರಿಶೀಲನೆ


ಮೈಸೂರು; ಕೇಂದ್ರ ಪುರಸ್ಕöÈತ “ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಬುಧವಾರ ಬೆಳಿಗ್ಗೆ ಮೈಸೂರು ನಗರದ ಹೊರ ವರ್ತುಲ ರಸ್ತೆಯ ಸ್ವಚ್ಛತೆ ಹಾಗೂ ನಾಗರಿಕ ಮೂಲಸೌಕರ್ಯಗಳ ಸ್ಥಿತಿಗತಿ ಕುರಿತು ಮಹಾನಗರ ಪಾಲಿಕೆಯ ಆಯುಕ್ತರಾದ ಸಾವಿತಾ ಎಂ.ಕೆ. ನೇತೃತ್ವದಲ್ಲಿ ಸಮಗ್ರ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆಯು ಹಿನಕಲ್ ಜಂಕ್ಷನ್‌ನಿAದ ಪ್ರಾರಂಭಗೊAಡು ಮಣಿಪಾಲ್ ಆಸ್ಪತ್ರೆ ದಿಕ್ಕಿನಲ್ಲಿ ಸಾಗುತ್ತಾ ಹೊರ ವರ್ತುಲ ರಸ್ತೆಯ ಸುಮಾರು ೪೨ ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿತ್ತು.
ಪರಿಶೀಲನೆ ಸಂದರ್ಭದಲ್ಲಿ ರಸ್ತೆ ಬದಿಯ ಸ್ವಚ್ಛತೆ, ಘನತ್ಯಾಜ್ಯ ಹಾಗೂ ತ್ಯಾಜ್ಯ, ಕಳೆ ಮತ್ತು ಪೊದೆಗಳ ತೆರವು, ಚರಂಡಿ, ರಸ್ತೆ ಸ್ಥಿತಿ, ಬೀದಿ ದೀಪಗಳು ಹಾಗೂ ಇತರೆ ನಾಗರಿಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ವೀಣಾ ಬಿ.ಎನ್., ಅಧೀಕ್ಷಕ ಅಭಿಯಂತರ ಸಿಂಧು,ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಸಂಬAಧಪಟ್ಟ ವಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆಯಲ್ಲಿ ಭಾಗವಹಿಸಿದ್ದರು. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಪರಿಶೀಲನೆಯಲ್ಲಿ ಉಪಸ್ಥಿತರಿದ್ದು ಅಗತ್ಯ ಸಮನ್ವಯ ಕುರಿತು ಚರ್ಚಿಸಲಾಯಿತು.
ಅಕ್ಟೋಬರ್ ೧ರಂದು ನಡೆಯಲಿರುವ ಒಂದು ದಿನ, ಒಂದು ಗಂಟೆ, ಒಟ್ಟಾಗಿ” ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಯಾಗಿ, ಎಂಸಿಸಿ ವ್ಯಾಪ್ತಿಯ ಗುರುತಿಸಲಾದ ಸುಮಾರು ೩೩ ಕಿ.ಮೀ. ಸ್ವಚ್ಛತಾ ಮಾರ್ಗಗಳಿಗೆ ಒಟ್ಟು ೨೦ ಬ್ಯಾಕ್‌ಹೋ ಲೋಡರ್‌ಗಳು , ೨೫ ಟಿಪ್ಪರ್‌ಗಳು ಹಾಗೂ ೧೭ ಡೋಜರ್‌ಗಳನ್ನು ನಿಯೋಜಿಸಲು ಯೋಜಿಸಲಾಗಿದೆ.
ಹೊರ ವರ್ತುಲ ರಸ್ತೆಯನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತವಾಗಿಡಲು ಮಹಾನಗರ ಪಾಲಿಕೆ, ಎನ್‌ಹೆಚ್‌ಎ ಐ ಹಾಗೂ ಸುತ್ತಮುತ್ತಲಿನ ನಗರ ಸ್ಥಳೀಯ ಸಂಸ್ಥೆಗಳ ನಡುವೆ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.